ಕಿನ್ನಿಗೋಳಿ 14 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ ಸಮಾರಂಭ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಸಂಸ್ಥೆಯಿಂದ ಪ್ರವರ್ತಿಸಲಾದ 14 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ ಶನಿವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೋ ನೂತನ ಅಧ್ಯಕ್ಷ , ಕಾರ್ಯದರ್ಶಿ, ಶಿಕ್ಷಕ ನಿರ್ದೇಶಕ ಹಾಗೂ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಗಣೇಶ್ ರಾವ್, ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಅಭಿಷೇಕ್ ಶೆಟ್ಟಿ, ಶಿಮಂತೂರು ಶ್ರೀ ಶಾರದಾ ಪ್ರೌಡ ಶಾಲೆಯ ಶಾನ್ ಗ್ರಿಪ್ಟನ್, ಬಳ್ಕ್ಕುಂಜೆ ಸಂತ ಫೌಲರ ಪ್ರೌಢಶಾಲೆಯ ಜೆಸ್ಸಿಕಾ, ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಸುಪ್ರೀತ್, ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನ ಗೆವಿನ್ ಡಿಮೆಲ್ಲೋ, ನಡುಗೋಡು ಸರಕಾರಿ ಪ್ರೌಢಶಾಲೆಯ ಸ್ನೇಹ ಸಿ.ವಿ., ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯ ಧನರಾಜ್, ಲಿಟ್ಲ್ ಫ್ಲವರ್ ಪ್ರೌಢಶಾಲೆಯ ರೀನಾ ಸವಿತಾ ಡಿ’ಸೋಜಾ, ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯ ಸುಮಯ್ಯಾ, ಮೆರಿವೆಲ್ ಆಂಗ್ಲ ಮಾಧ್ಯಮ ಶಾಲೆಯ ಹರ್ಷಿತಾ, ಎಕ್ಕಾರು ಸರಕಾರಿ ಪ್ರೌಢ ಶಾಲೆಯ ರಾಜಶ್ರೀ, 2 ಹೊಸ ಇಂಟರಾಕ್ಟ್ ಸಂಸ್ಥೆಗಳಾದ ಕಟೀಲು ಪ್ರೌಢಶಾಲೆಯ ಭವ್ಯಾ, ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ಚೇತನ್ ಕುಲಾಲ್ ಅಧ್ಯಕ್ಷ ಪದವಿಗಳನ್ನು ಸ್ವೀಕರಿಸಿದರು.
ರೋಟರಿಜಿಲ್ಲೆ 3180 ವಲಯ 3ರ ಸಹಾಯಕ ಗವರ್ನರ್ ಮಾಧವ ಸುವರ್ಣ, ಇಂಟರಾಕ್ಟ್ ಜಿಲ್ಲಾ ಪ್ರತಿನಿಧಿ ರೋಹಿನಾಥ್ ಸಿ., , ನಿಕಟಪೂರ್ವಾಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, , ಇಂಟರಾಕ್ಟ್ ಸಭಾಪತಿ ಪಿ. ಸತೀಶ್ ರಾವ್ ಉಪಸ್ಥಿತರಿದ್ದರು.
ರೋಟರಿ ಕಾರ್ಯದರ್ಶಿ ಜೋಕಿಂ ಸಿಕ್ವೇರಾ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli18081322

Comments

comments

Comments are closed.

Read previous post:
Kinnigoli18081321
ಸಹಬಾಳ್ವೆಯೇ ಸಮೃದ್ಧ ಸಮಾಜ : ಹೆನ್ನಾ

ಕಿನ್ನಿಗೋಳಿ : ಉಳ್ಳವರು ದುರ್ಬಲರಿಗೆ ಕೈಲಾದ ಸಹಾಯ ಮಾಡುವಂತಹ ಸಹಬಾಳ್ವೆಯ ಸಮೃದ್ಧ ಸಮಾಜ ನಿರ್ಮಾಣವಾದಲ್ಲಿ ಮಾನವೀಯತೆಗೆ ನಿಜವಾದ ಅರ್ಥ ಬರುತ್ತದೆ ಎಂದು ಭಾರತದ ಜನಜೀವನದ ಬಗ್ಗೆ ಅಧ್ಯಯನ ಮಾಡಲು...

Close