ಗೌರವದಿಂದ ಬದುಕುವ ವ್ಯವಸ್ಥೆ ಬೇಕು

ಕಿನ್ನಿಗೋಳಿ : ಸರ್ವರನ್ನು ಸಮಾನವೆಂದು ತಿಳಿದು ಗೌರವದಿಂದ ಬದುಕುವ ವ್ಯವಸ್ಥೆ ಬೇಕು. ಅಸಹಾಯಕರಿಗೆ ನೆರವಿನ ಹಸ್ತ ನೀಡುವ ಮೂಲಕ ಮಾನವೀಯರಾಗಲು ಪ್ರಯತ್ನಿಸಬೇಕು ಸಂಕಷ್ಟದಲ್ಲಿರುವ ಸಹಾಯ ಮಾಡಿದಾಗ ಮಾನವ ಜನ್ಮ ಸಾರ್ಥಕ್ಯ ಪಡೆಯುತ್ತದೆ ಎಂದು ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್‌ನ ರಾಜ್ಯ ಸಮಿತಿಯ ಬಿ ವಸಂತ ಹೇಳಿದರು.
ಭಾನುವಾರ ಯುಗಪುರುಷ ಸಭಾ ಭವನದಲ್ಲಿ ನಡೆದ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ಕಿನ್ನಿಗೋಳಿ ವಲಯದ ಹದಿಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ವಲಯ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಟೈಲರಿಂಗ್‌ನಲ್ಲಿ ನಿವೃತ್ತಿ ಹೊಂದಿದ ರುಕ್ಮಯ ಶೆಟ್ಟಿಗಾರ್ ಅವರನ್ನು ಕಿನ್ನಿಗೋಳಿ ವಲಯದ ವತಿಯಿಂದ ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಾಪು ವಲಯಾಧ್ಯಕ್ಷ ವಿಲಿಯಂ ಮಚಾದೊ, ಉದಯ ಅಮೀನ್ ಮೂಡಬಿದ್ರಿ, ಕಿನ್ನಿಗೋಳಿ ವಲಯ ಉಪಾಧ್ಯಕ್ಷೆ ಉಷಾ ಉಪಸ್ಥಿತರಿದ್ದರು.
ಶಂಕರ್ ಬಿ. ಕೋಟ್ಯಾನ್ ಸ್ವಾಗತಿಸಿದರು, ಮೋಹನ್ ವಂದಿಸಿದರು, ಕಿನ್ನಿಗೋಳಿ ವಲಯ ಕಾರ್ಯದರ್ಶಿ ರಾಜರಾಮ್ ಹಾಗೂ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

Kinnigoli18081325

Comments

comments

Comments are closed.

Read previous post:
Kinnigoli18081324
ಕಟೀಲಿನಲ್ಲಿ ರಕ್ತದಾನ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ಫ್ರೌಡ ಶಾಲೆ, ಹಳೆ ವಿದ್ಯಾರ್ಥಿ ಸಂಘ, ಕಟೀಲು ಪ್ರಥಮ ದರ್ಜೆ ಕಾಲೇಜು ಎನ್. ಎಸ್. ಎಸ್. ಘಟಕ, ನಂದಿನಿ ಯುವಕ ವೃಂದ...

Close