ಕಟೀಲು ನಂದಿನಿ ಬ್ರಾಹ್ಮಣ ಸಭಾ : ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ : ಸಂಘಟನೆಯಿಂದ ಬ್ರಾಹ್ಮಣರು ಇನ್ನಷ್ಟು ಮಹತ್ತರವಾದುದನ್ನು ಸಾಧಿಸಬೇಕು. ಶ್ರಾವಣ ಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮೀ ವೃತ, ಚೂಡೀಪೂಜೆಯಂತಹ ಆರಾಧನೆಗಳಿಗೆ ಉತ್ತರ ಭಾರತದ ಪ್ರಭಾವ ಮತ್ತು ತಳಹದಿ ಇದೆ. ಎಂದು ಜಾನಪದ ವಿದ್ವಾಂಸ ಎಕ್ಕಾರು ಡಾ| ಪದ್ಮನಾಭ ಭಟ್ ಹೇಳಿದರು.
ಭಾನುವಾರ ಕಟೀಲಿನಲ್ಲಿ ನಂದಿನಿ ಬ್ರಾಹ್ಮಣ ಸಭಾ ಆಯೋಜಿಸಿದ ಪ್ರತಿಭಾ ಪುಸರ‍್ಕಾರ ಸಮಾರಂಭದಲ್ಲಿ ಶ್ರಾವಣ ಮಾಸದ ಮಹತ್ವದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂದರ್ಭ ಸಾಧಕಿ ವಿದ್ಯಾರ್ಥಿನಿ ಅನುಜ್ಞಾ ಭಟ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಜನೆಯಲ್ಲಿ ಸಾಧನೆಗೈದ ಶ್ರೀನಿಧಿ ಆಸ್ರಣ್ಣ, ಮನುಕಶ್ಯಪ್, ಅನುಷಾ ದಿವಾಣ, ಅನಂತಪದ್ಮನಾಭ ಶರ್ಮ ಅವರನ್ನು ಅಭಿನಂದಿಸಲಾಯಿತು.
ಕಟೀಲು ದೇಗುಲದ ಅರ್ಚಕ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಬ್ರಾಹ್ಮಣ ಸಭಾ ಅಧ್ಯಕ್ಷ ಡಾ| ಶಶಿಕುಮಾರ್, ಕಾರ್ಯದರ್ಶಿ ವೇದವ್ಯಾಸ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಗುರುಪ್ರಸಾದ ಭಟ್ ಸ್ವಾಗತಿಸಿದರು. ಅರುಣಾಪ್ರಸನ್ನಾ ವಂದಿಸಿದರು.

Kinnigoli20081305

Comments

comments

Comments are closed.

Read previous post:
Kinnigoli20081304
ನಿಡ್ಡೋಡಿ ಐಟಿಐ ತರಬೇತಿ ಆರಂಭ

ಕಿನ್ನಿಗೋಳಿ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧ ಕಲಿಕೆಯ ಜತೆಗೆ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಸಮೃದ್ಧ ಸಮಾಜದ ನಿಮಾಣಕ್ಕಾಗಿ ಕೈ ಜೋಡಿಸಿ ದೇಶದ ಆರ್ಥಿಕ, ಔದ್ಯೋಗಿಕ ಪ್ರಗತಿಗೆ ಕಾರಣರಾಗಬೇಕು. ಹೀಗಾಗಿ ತಾಂತ್ರಿಕ...

Close