ನಿಡ್ಡೋಡಿ ಐಟಿಐ ತರಬೇತಿ ಆರಂಭ

ಕಿನ್ನಿಗೋಳಿ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧ ಕಲಿಕೆಯ ಜತೆಗೆ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಸಮೃದ್ಧ ಸಮಾಜದ ನಿಮಾಣಕ್ಕಾಗಿ ಕೈ ಜೋಡಿಸಿ ದೇಶದ ಆರ್ಥಿಕ, ಔದ್ಯೋಗಿಕ ಪ್ರಗತಿಗೆ ಕಾರಣರಾಗಬೇಕು. ಹೀಗಾಗಿ ತಾಂತ್ರಿಕ ಶಿಕ್ಷಣಕ್ಕೆ ಉತ್ತಮ ಭವಿಷ್ಯವಿದೆ. ಎಂದು ಜ್ಞಾನರತ್ನ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಭಾಸ್ಕರ ದೇವಸ್ಯ ಹೇಳಿದರು.
ಇತ್ತಿಚೆಗೆ ನಡೆದ ನಿಡ್ಡೋಡಿ ಶ್ರೀ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆಯ ಐದನೇ ವರ್ಷದ ತರಬೇತಿ ಆರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಮುನಿರಾಜ ರೆಂಜಾಳ ಹಾಗೂ ಜಯಂತ ಅಜೇರು ಪಧಾನ ಉಪನ್ಯಾಸ ನೀಡಿದರು.
ಜ್ಞಾನರತ್ನ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಮಹೇಶ್ ರಾವ್, ದುರ್ಗಾದೇವಿ ಶಾಲೆ ಪ್ರಿನ್ಸಿಪಾಲ್ ಅಂಜನಾ ಪ್ರಭು, ಐಟಿಐ ಪ್ರಿನ್ಸಿಪಾಲ್ ಅನುರಾಧಾ ಎಸ್. ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

Kinnigoli20081304

Comments

comments

Comments are closed.

Read previous post:
ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಕಿನ್ನಿಗೋಳಿ:  ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಆಗಸ್ಟ್ 21,22 ಹಾಗೂ 23ರಂದು ಜರಗಲಿದೆ. ಪ್ರತಿದಿನ ಪ್ರಾತಃಕಾಲ,...

Close