ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಕಿನ್ನಿಗೋಳಿ:  ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಆಗಸ್ಟ್ 21,22 ಹಾಗೂ 23ರಂದು ಜರಗಲಿದೆ.
ಪ್ರತಿದಿನ ಪ್ರಾತಃಕಾಲ, ಮಧ್ಯಾಹ್ನ, ಸಾಯಂ. ತ್ರಿಕಾಲ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ತಾ.೨೧ರಂದು ಬೆಳಿಗ್ಗೆ 10ರಿಂದ ಶ್ರೀ ಭ್ರಾಮರೀ ಮಹಿಳಾ ಭಜನಾ ಮಂಡಳಿ (ರಿ.) ಕಟೀಲು ಸಾಯಂ. ಗಂಟೆ 4ರಿಂದ ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ, ಸಾಯಂ.5 ರಿಂದ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ತಾ. 22ರಂದು ಬೆಳಿಗ್ಗೆ 10ರಿಂದ ಶ್ರೀ ದೇವೀ ಭಜನಾ ಮಂಡಳಿ ಕಟೀಲು, ಸಾಯಂ.5ರಿಂದ ಶ್ರೀ ವಿಶ್ವನಾಥ ಭಜನಾ ಮಂಡಳಿ ಪುನರೂರು ಇವರಿಂದ ಭಜನಾ ಕಾರ್ಯಕ್ರಮ, ತಾ.23ರಂದು ಬೆಳಿಗ್ಗೆ 10ರಿಂದ ವಾಗ್ದೇವಿ ಭಜನಾ ಮಂಡಳಿ ಕಿನ್ನಿಗೋಳಿ ಇವರಿಂದ ಭಜನಾ ಕಾರ್ಯಕ್ರಮ, ಸಾಯಂ.ಗಂಟೆ 5ರಿಂದ ಕಟೀಲು ಲಿಂಗಪ್ಪ ಶೇರಿಗಾರ ಮತ್ತು ಬಳಗದವರಿಂದ ನಾಗಸ್ವರವಾದನ ಮತ್ತು ಮೂವತ್ತನೇ ವರ್ಷದ ಸಾರ್ವಜನಿಕ ಸಾಮೂಹಿಕ ಅಷ್ಟೋತ್ತರ ಶತ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವು ಜರಗಲಿದೆಯೆಂದು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli20081303
ಲಯನ್ಸ್ ವಲಯಾಧ್ಯಕ್ಷ – ಕೆ. ಜಗದೀಶ್ ಹೊಳ್ಳ

ಕಿನ್ನಿಗೋಳಿ: ದಕ್ಷಿಣ ಕನ್ನಡ ಕೊಡಗು ಹಾಸನ ಹಾಗೂ ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 -ಡಿ ಯ ಪ್ರಾಂತ್ಯ 5 ರ ವಲಯ -1 ರ...

Close