ವಿಜ್ಞಾನ ಗೋಷ್ಠಿ ರಾಜ್ಯಮಟ್ಟಕ್ಕೆ ಆಯ್ಕೆ – ಲಿಖಿತ್

Narendra Kerekadu
ಮೂಲ್ಕಿ: ಇಲ್ಲಿನ ಮೂಲ್ಕಿ ಶ್ರೀ ನಾರಾಯಣಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ 9ನೇ ತರಗತಿಯ ವಿದ್ಯಾರ್ಥಿ ಲಿಖಿತ್ ಫ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಹಾಗೂ ಮಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಮತ್ತು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯವರ ಜಂಟಿ ಸಂಯೋಜನೆಯಲ್ಲಿ ಕಳೆದ ಆಗಸ್ಟ್ 12ರಂದು ಮಂಗಳೂರಿನ ಊರ್ವದ ಸಂತ ಎಲೋಶಿಯಸ್ ಆಂಗ್ಲ ಮಾಧ್ಯಮ ಫ್ರೌಢಶಾಲೆಯಲ್ಲಿ ತಾಲ್ಲೂಕು ಮಟ್ಟದ “ಜಲ ಸಹಕಾರ ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ವಿಷಯದಲ್ಲಿ ನಡೆದ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ವಿಚಾರ ಮಂಡನೆ ನಡೆಸಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗೆ ಲಿಖಿತ್ ಆಯ್ಕೆಯಾಗಿದ್ದನು. ತಾಲ್ಲೂಕು ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ತಾಲ್ಲೂಕಿನ ಒಟ್ಟು 154 ಫ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ(ಡಯಟ್) ಸಂಸ್ಥೆಯಲ್ಲಿ ಆಗಸ್ಟ್ 17ರಂದು ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಲಿಖಿತ್ ಮೂರನೇ ಸ್ಥಾನ ಪಡೆದು ಈಗ ರಾಜ್ಯ ಮಟ್ಟದಲ್ಲಿ ನಡೆಯುವ ವಿಜ್ಞಾನ ವಿಚಾರ ಗೋಷ್ಠಿಯ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾನೆ. ಈತನ ಗಮನಾರ್ಹ ಸಾಧನೆಗೆ ಶ್ರೀ ನಾರಾಯಣಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿ ಸಮುದಾಯವು ಹರ್ಷ ವ್ಯಕ್ತಪಡಿಸಿದೆ. ಸುರತ್ಕಲ್‌ನ ಮೆಸ್ಕಾಂ ಶಾಖೆಯಲ್ಲಿನ ಉದ್ಯೋಗಿ ಮೂಲ್ಕಿ ಶಿಮಂತೂರಿನ ನಿವಾಸಿ ಜಗನ್ನಾಥ ಮತ್ತು ಪ್ರೇಮಲತಾ ದಂಪತಿಯ ಪ್ರಥಮ ಪುತ್ರನಾಗಿದ್ದಾನೆ.

Kinnigoli20081301

Comments

comments

Comments are closed.