ನಿಡ್ಡೋಡಿ ಉಳಿಸಿ ಐಕಳ ಗ್ರಾ. ಪಂ ಉಪಸಮಿತಿ ರಚನೆ

ಕಿನ್ನಿಗೋಳಿ : ಪರಿಸರದ ಭೂಮಿಯನ್ನು ಬರಡಾಗಿಸುವ ಮಾರಕ ಕೈಗಾರಿಕೆಯಾದ ನಿಡ್ಡೋಡಿ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಆಗದಂತೆ ತಡೆಗಟ್ಟುವ ಹೋರಾಟ ಮಾಡಬೇಕು. ಎಂದು ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಗ್ರಾಮದ ಪೆರ್ಗುಂಡಿ ಸಾರ್ವಜನಿಕ ಶ್ರೀ ಗಣೇಶ ಸಭಾ ಮಂಟಪದಲ್ಲಿ ಮಂಗಳವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ಒಕ್ಕೊಲರ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕೆಲವು ಕೈಗಾರಿಕೆಗಳಿಂದಾಗಿ ಪರಿಸರದ ಧಾರಣ ಸಾಮಾರ್ಥ್ಯ ಕುಗ್ಗುತ್ತಿರುವ ಈ ಕಾಲಘಟ್ಟದಲ್ಲಿ ಮತ್ತೊಂದು ವಿದ್ಯುತ್ ಸಾವರ ಅನಿವಾರ್ಯವಲ್ಲ ಪರಿಸರ ಸ್ನೇಹಿ ವಿದ್ಯುತ್ ಘಟಕ ಮಾಡಿದರೆ ಉತ್ತಮ. ಈಗಾಗಲೇ ನಮ್ಮ ಜಿಲ್ಲೆಗಳಿಂದ ಉತ್ಪಾದಿಸುವ ವಿದ್ಯುತ್ ಬೇರೆ ಜಿಲ್ಲೆಗಳಿಗೆ ನೀಡಿ ನಮ್ಮವರನ್ನು ವಂಚಿಸುತ್ತಿದ್ದಾರೆ. ಕೇವಲ ಸ್ಯಾಟಲೈಟ್ ಮೂಲಕ ಜಾಗ ಗುರುತಿಸಿ, ನೈಜ ಸರ್ವೇ ಮಾಡದೆ ಕನಿಷ್ಠ ಎರಡು ಬೆಳೆ ತೆಗೆಯುವ ಭೂಮಿಯನ್ನು ಅಧಿಕಾರಿ ಶಾಹಿ ವರ್ಗದವರು ಬರಡೆಂದು ಬಿಂಬಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಸ್ಥಾವರದ ಬಗ್ಗೆ ವಿರೋಧ ವ್ಯಕ್ತಪಡಿಸುವಲ್ಲಿ ಮನವರಿಕೆ ಹಾಗೂ ತಿಳುವಳಿಕೆ ಮೂಡಿಸಬೇಕು 4000 ಮೆಗಾವ್ಯಾಟ್ ಸಾಮಾರ್ಥ್ಯದ ಸ್ಥಾವರ ಸ್ಥಾಪನೆಯಾದರೆ ನಿಡ್ಡೋಡಿ ಸಹಿತ ಪರಿಸರದ ೩೦ ಕಿ. ಮೀ. ವ್ಯಾಪ್ತಿಯ ಪರಿಸರಕ್ಕೆ ದಕ್ಕೆಯಾಗಲಿದೆ. ಹಾಗಾಗಿ ಉಡುಪಿ ದಕ್ಷಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಕಾನೂನು ಹೋರಾಟ ಅಗತ್ಯವಿದೆ. ವಿದ್ಯಾವಂತರನ್ನು ಸೇರಿಸಿ ಸಭೆ ನಡೆಸಿ ಸೂಕ್ತ ತೀರ್ಮಾನ ಹಾಗೂ ಪ್ರತೀ ಸಮಿತಿಗೆ ಒಬ್ಬರು ನ್ಯಾಯವಾದಿಯನ್ನು ಸದಸ್ಯರನ್ನಾಗಿ ನೇಮಕ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಡಬಿದ್ರೆ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಹೇಳಿದರು.
ಸ್ಥಾವರದಿಂದ ಪರಿಸರದ ಗ್ರಾಮಗಳ ಭೂಮಿಯಲ್ಲಿನ ನೀರು ಕಲುಷಿತಗೊಂಡು ಕ್ರಮೇಣ ಬರಡಾಗಿ ಸಸ್ಯ ಪ್ರಾಣಿ ಪ್ರಬೇಧಗಳಿಗೆ ಹಾನಿಯಾಗಲಿದೆ. ಈ ಬಗ್ಗೆ ಈಗಲೇ ಎಚ್ಚರಗೊಂಡು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾವರದ ವಿರುದ್ಧ ನಿರ್ಣಯ ಕೈಗೊಂಡು ಈ ನಿರ್ಣಯದ ಪ್ರತಿಯನ್ನು ಹೋರಾಟ ಸಮಿತಿಗೆ ಕಳುಹಿಸಬೇಕು ಎಂದು ಮಾತೃಭೂಮಿ ಸಮಿತಿಯ ವಲೇರಿಯನ್ ಸಿಕ್ವೇರಾ ಹೇಳಿದರು.
ಈಗಾಗಲೇ ಸುವರ್ಣ ಕಾರಿಡಾರ್ ಯೋಜನೆಯನ್ನು ಹಿಮ್ಮೆಟ್ಟಿಸಲಾಗಿದೆ. ಹತ್ತಿರದ ಉಡುಪಿಯ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಪರಿಸರದ ಕೃಷಿಗೆ ಹಾನಿಯಾಗಿ ಅಡಿಕೆ, ತೆಂಗು, ಭತ್ತ ಮಲ್ಲಿಗೆ ಹಾಗೂ ಇನ್ನಿತರ ಬೆಳೆಗಳು ಕಡಿಮೆ ಫಸಲು ನೀಡುತ್ತಿವೆ. ಹಾರು ಬೂದಿಯ ಸಮಸ್ಯೆಯಿಂದ ಪರಿಸರದ ಮಕ್ಕಳು ಹಿರಿಯರು ಅಸ್ತಮಾ ಕಾಯಿಲೆಗೆ ಬಲಿಯಾಗಿದ್ದಾರೆ. ಪರಿಸರದ ನೀರು ಕೂಡಾ ಮಲೀನಗೊಂಡು ಕಡಲಿನಲ್ಲಿ ಮತ್ಯ ಕ್ಷಾಮ ಬೀತಿ ಎದುರಾಗಿದೆ. ನಾವು ಜಾಗೃತರಾಗಿ ಹೋರಾಡಿ ವಿರೋಧಿಸುವ ಸಮಯ ಬಂದಿದೆ ಎಂದು ಮಾತೃಭೂಮಿ ಸಮಿತಿಯ ರಂಗನಾಥ ಭಟ್ ತಿಳಿಸಿದರು.
ಪರಶುರಾಮ ಸೃಷ್ಠಿ ನಂಬಿಕೆಯ ಅವಿಭವಿಜಿತ ದಕ್ಷ್ಷಿಣಕನ್ನಡ ಜಿಲ್ಲೆಯ ಕೃಷಿ ಭೂಮಿ, ಪುರಾತನ ಆಚಾರ ಸಂಸ್ಕೃತಿ, ಸಸ್ಯ ಪ್ರಭೇಧ, ಪ್ರಾಣಿ ಸಂಕುಲ, ನದಿಗಳು, ತುಳು ನಾಡನ್ನೇ ನಾಶ ಮಾಡುವ ಹಾಗೂ ರೋಗ ರುಜಿನಗಳನ್ನು ತರಬಲ್ಲ ಮಾರಕ ಕೈಗಾರಿಕೆಯ ವಿರುದ್ಧ ಹೋರಾಟ ಅನಿವಾರ್ಯ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.

ರಘುರಾಮ ಅಡ್ಯಂತಾಯ ಅವರನ್ನು ಉಪಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಾಜಿ ಐಕಳ ಗ್ರಾ. ಪಂ. ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಪಂಚಾಯಿತಿ ಸದಸ್ಯ ಜಯಂತ್, ಕಾರ್ಯದರ್ಶಿಯಾಗಿ ಐಕಳ ಗ್ರಾ. ಪಂ. ಉಪಾಧ್ಯಕ್ಷ ದಿವಾಕರ ಚೌಟ, ಕೋಶಾಧಿಕಾರಿಯಾಗಿ ಐಕಳ ಗ್ರಾ. ಪಂ. ಅಧ್ಯಕ್ಷೆ ಪದ್ಮಿನಿ ವಸಂತ್ ಅವರನ್ನು ಆಯ್ಕೆ ಮಾಡಲಾಯಿತು.
ಅರ್ಚಕ ಶ್ರೀಧರ ಭಟ್, ರೈತ ಸಂಘದ ಕರುಣಾಕರ ಶೆಟ್ಟಿ, ಗ್ರಾ. ಪಂ. ಸದಸ್ಯರಾದ ಪ್ರಕಾಶ್ ಶೆಟ್ಟಿ, ರೋಬರ್ಟ್ ಲೋಬೊ, ಗ್ರೇಸಿ ಡಿ’ಸೋಜ ಉಪಸ್ಥಿತರಿದ್ದರು. ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-21081303

Comments

comments

Comments are closed.

Read previous post:
Kinnigoli20081307
ಟಾಟಾ ಎಸ್ ಪಲ್ಟಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪದ್ಮನೂರು ಹೊಸಕಾವೇರಿ ಬಳಿ ಕಿನ್ನಿಗೋಳಿಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದ್ದು...

Close