ಆಧ್ಯಾತ್ಮ ಮತ್ತು ದೈವತ್ವ ತತ್ವಗಳು ಆದರ್ಶಪ್ರಾಯ.

 ಕಿನ್ನಿಗೋಳಿ : ಆಧ್ಯಾತ್ಮ ಮತ್ತು ದೈವತ್ವ ತತ್ವಗಳು ಸಮಾಜಕ್ಕೆ ಆದರ್ಶಪ್ರಾಯವಾಗಿದ್ದು ಮಾನವ ಸಂತೃಪ್ತ ಜೀವನ ಸಾಗಿಸಲು ಸಹಕಾರಿ ಎಂದು ಕಿನ್ನಿಗೋಳಿ ಯಕ್ಷಲಹರಿಯ ಕಾರ್ಯದರ್ಶಿ ಶ್ರೀಧರ ಡಿ.ಎಸ್ ಹೇಳಿದರು.
ಬುಧವಾರ ಕಿನ್ನಿಗೋಳಿ ಯುಗಪುರುಷದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ನಡೆದ ಆರಾಧನಾ ಮಹೋತ್ಸವ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.
ಸಾಂಪ್ರದಾಯಿಕ ಹಿರಿಯರು ನಡೆಸಿಕೊಂಡು ಬಂದಿರುವ ಧರ್ಮ ಶಿಸ್ತು ಸಂಸ್ಕಾರ ಸಂಸ್ಕೃತಿಗಳನ್ನು ಮುಂದುವರಿಸಿ, ಆಧ್ಯಾತ್ಮಿಕತೆಯಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯ ಎಂದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ನಿವೃತ್ತ ಉಪ ತಹಶೀಲ್ದಾರ್ ವೈ,ಯೋಗೀಶ್ ರಾವ್, ನಿವೃತ್ತ ಶಿಕ್ಷಕ ಸಾಹಿತಿ ಉಮೇಶ್ ರಾವ್ ಎಕ್ಕಾರು ಹಾಗೂ ಉದ್ಯಮಿ ಪ್ರಥ್ವಿರಾಜ ಆಚಾರ್ಯ ಉಪಸ್ಥಿತರಿದ್ದರು.

Kinnigoli-22081301

Comments

comments

Comments are closed.

Read previous post:
Kinnigoli-21081304
ನಿಡ್ಡೋಡಿ ಬೃಹತ್ ಉಷ್ಣ ವಿದ್ಯುತ್ ಸ್ಥಾವರ

ಕರಾವಳಿ ಪ್ರದೇಶಕ್ಕೆ ಎರಡನೇ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಬರವುದು ನಿಶ್ಚಿತವಾಗಿದೆಯೇ?!? ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ನಿಡ್ಡೋಡಿ ಎಂಬಲ್ಲಿ ಕೇಂದ್ರ ಸರಕಾರದ ಇಂಧನ ಇಲಾಖೆಗೆ...

Close