ಮುಲ್ಕಿ ಹೋಬಳಿ ಮಟ್ಟದ ತ್ರೋ ಬಾಲ್ ಪಂದ್ಯಾಟ

ಕಿನ್ನಿಗೋಳಿ : ಮಕ್ಕಳಿಗೆ ಶಾಲಾ ಹಂತದಿಂದಲೇ ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಆಸಕ್ತಿ ಮೂಡಿಸುವುದು ಪೋಷಕ ಹಾಗೂ ಶಿಕ್ಷಕರ ಕರ್ತವ್ಯ. ಇದರಿಂದಾಗಿ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಉತ್ತಮವಾಗುವುದು. ಎಂದು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಹೇಳಿದರು.
ಗುರುವಾರ ಕಿನ್ನಿಗೋಳಿ ಸಮೀಪದ ನಡುಗೋಡು ಸರಕಾರಿ ಫ್ರೌಢ ಶಾಲಾ ವಠಾರದಲ್ಲಿ ನಡೆದ ಮುಲ್ಕಿ ಹೋಬಳಿ ಮಟ್ಟದ ಶಾಲಾ ಬಾಲಕ ಬಾಲಕಿಯರ ತ್ರೋ ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ಪುರುಷೋತ್ತಮ ಶೆಟ್ಟಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದ ಪೂಜಾರಿ, ದಾನಿ ಹರೀಶ್ಚಂದ್ರ ಆಚಾರ್ಯ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ಜಯಶಂಕರ ರೈ, ಶಾಲಾಭಿವೃದ್ಧಿ ಸಂಘದ ಅಧ್ಯಕ್ಷೆ ಚಿತ್ರ ಕೆ. ನಿವೃತ್ತ ಶಿಕಕ ವಿಶ್ವನಾಥ ಶೆಟ್ಟಿ, ನಡುಗೋಡು ಸರಕಾರಿ ಫ್ರೌಢ ಶಾಲಾ ಮುಖ್ಯ ಶಿಕ್ಷಕ ರಾಜಾ ನಾಯಕ್, ದೈಹಿಕ ಶಿಕ್ಷಕಿ ಸೀತಾ ಚಂದ್ರಿಕ, ಸಹಶಿಕ್ಷಕರಾದ ಶಿವಾನಂದ, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-22081302

Comments

comments

Comments are closed.

Read previous post:
Kinnigoli-22081301
ಆಧ್ಯಾತ್ಮ ಮತ್ತು ದೈವತ್ವ ತತ್ವಗಳು ಆದರ್ಶಪ್ರಾಯ.

 ಕಿನ್ನಿಗೋಳಿ : ಆಧ್ಯಾತ್ಮ ಮತ್ತು ದೈವತ್ವ ತತ್ವಗಳು ಸಮಾಜಕ್ಕೆ ಆದರ್ಶಪ್ರಾಯವಾಗಿದ್ದು ಮಾನವ ಸಂತೃಪ್ತ ಜೀವನ ಸಾಗಿಸಲು ಸಹಕಾರಿ ಎಂದು ಕಿನ್ನಿಗೋಳಿ ಯಕ್ಷಲಹರಿಯ ಕಾರ್ಯದರ್ಶಿ ಶ್ರೀಧರ ಡಿ.ಎಸ್ ಹೇಳಿದರು. ಬುಧವಾರ...

Close