ಚಿನ್ನದ ರಥದ ಸ್ವರ್ಣ ಮುಹೂರ್ತಕ್ಕೆ ಚಾಲನೆ

Narendra Kerekad

ಕಟೀಲು: ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಬೇಡಿಕೆ ಇರುವ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಕಟೀಲು ದೇವಳದ ಪರಿಸರದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗೆ ಸರ್ವ ರೀತಿಯ ಸಹಕಾರ ನೀಡಲಾಗುವುದು, 2014ರವರೆಗೆ ಯಾವುದೇ ಹೊಸ ಆಸ್ಪತ್ರೆಯ ಬಗ್ಗೆ ಯೋಜನೆ ಸರ್ಕಾರದ ಬಳಿ ಇಲ್ಲ ಆದರೆ ಮುಂದಿನ ಹಂತದಲ್ಲಿ ಕಟೀಲಿಗೆ ಪ್ರಥಮ ಆದ್ಯತೆ ನೀಡಿ ಅಗತ್ಯವಿರುವ ಜಮೀನು ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಕಾಗದ ರಹಿತ ಧಾರ್ಮಿಕ ಕೇಂದ್ರವಾಗಿ ಕಟೀಲು ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಿದ್ದು ಇದೇ ರೀತಿಯ ವ್ಯವಸ್ಥೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲೂ ನಡೆಸುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಹೇಳಿದರು.
ಕಟೀಲು ದೇವಳದಲ್ಲಿ ಚಿನ್ನದ ರಥದ ಸ್ವರ್ಣ ಮುಹೂರ್ತಕ್ಕೆ ಭಾನುವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ದೇವಳದಲ್ಲಿನ ಕಾಗದ ರಹಿತ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನ ಸೇವಾ, ಮೀನುಗಾರಿಕಾ ಸಚಿವ ಚಿಕ್ಕ ಮಗಳೂರು ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್‌ರವರು ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈಯವರು ಚಿನ್ನದ ರಥಕ್ಕೆ ಸ್ವರ್ಣ ಮುಹೂರ್ತವನ್ನು ರಥದ ಕೆಲಸದ ಉಸ್ತುವಾರಿ ವಹಿಸಿಕೊಂಡಿರುವ ಉಡುಪಿಯ ಸ್ವರ್ಣ ಜ್ಯುವೆಲ್ಲರ‍್ಸ್‌ನ ಗುಜ್ಜಾಡಿ ರಾಮದಾಸ್ ನಾಯಕ್‌ರವರಿಗೆ ಚಿನ್ನವನ್ನು ಹಸ್ತಾಂತರಿಸಿ ಚಾಲನೆ ನೀಡಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆಯವರು ಕಟೀಲು ಮೂಲ ಕುದ್ರುವಿನ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿ ಕಟೀಲು ದೇವಳದ ಪರಿಸರವನ್ನು ಗ್ರೇಟರ್ ಮಂಗಳೂರಿಗೆ ಸೇರುಸುವಲ್ಲಿ ಸ್ಥಳೀಯ ಶಾಸಕರ ಸಹಮತವಿದ್ದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ಹೆಚ್ಚುವರಿಯಾಗಿ ಸಿಗುವಂತಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶಾಸಕ ಮೊಯ್ದಿನ್ ಬಾವ, ವಿಧಾನ ಪರಿಷತ್ತಿನ ಸದಸ್ಯರಾದ ಮೋನಪ್ಪ ಭಂಡಾರಿ, ದಯಾನಂದ ರೆಡ್ಡಿ ಬೆಂಗಳೂರು, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಧಾರ್ಮಿಕ ಇಲಾಖೆಯ ಮಂಗಳೂರಿನ ಆಯುಕ್ತ ನಂದಕುಮಾರ್, ಮುಂಬಯಿ ಉದ್ಯಮಿ ಸತೀಶ್ ಶೆಟ್ಟಿ, ಕಟೀಲು ಸಂಜೀವರಾವ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸುರೇಶ್ ರಾವ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೊಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ವಾಸ್ತು ತಜ್ಞ ಸುಬ್ರಹ್ಮಣ್ಯ ಅವಧಾನಿ, ಅರ್ಚಕರಾದ ವೆಂಕಟ್ರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ರಾಜ್ಯದ ಅತಿ ಎತ್ತರದ ರಥ

ಕಟೀಲು ದೇವಳದಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಚಿನ್ನದ ರಥಕ್ಕೆ 12 ಕೆ.ಜಿ.ಚಿನ್ನ, 200 ಕೆ.ಜಿ. ಬೆಳ್ಳಿ ಬಳಸಲಾಗುತ್ತಿದ್ದು 14 ಅಡಿ ಎತ್ತರದ ರಾಜ್ಯದ ಪ್ರಥಮ ಅತಿ ಎತ್ತರದ ಚಿನ್ನದ ರಥವಾಗಿದೆ.

Kinnigoli-25081306


 

Comments

comments

Comments are closed.

Read previous post:
Kinnigoli-25081305
ಉಚಿತ ಸಮವಸ್ತ್ರ ವಿತರಣೆ

Bhagyavan Sanil ಮೂಲ್ಕಿ: ನಿಡ್ಡೋಡಿ ಶ್ರೀ ಬಾಪೂಜಿ ಅನಿದಾನಿತ ಪ್ರಾ ಶಾಲೆಯಲ್ಲಿ ನಿಡ್ಡೋಡಿ ಬಸಲಡ್ಕ ನಿವಾಸಿ ದೊಡ್ಡಯ್ಯ ಬಂಗೇರ ಅವರ ಮಾತಪಿತೃಗಳಾದ ದಿ| ಕಲ್ಯಾಣಿ ಬೆಲ್ಚಡ್ತಿ ಅವರ...

Close