ಮಂಗಳೂರು ವಿ.ವಿ. ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ

ಕಿನ್ನಿಗೋಳಿ: ಐಕಳ ಪೊಂಪೈ ಪದವಿ ಕಾಲೇಜಿನಲ್ಲಿ ಶನಿವಾರ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸತತ ಹನ್ನೊಂದನೇ ಬರಿ ಪುರುಷರ ಹಾಗೂ ಹತ್ತನೇ ಬಾರಿ ಮಹಿಳೆಯರ ಚಾಂಪಿಯನ್ ಪ್ರಶಸ್ತಿ ಸಹಿತ ಕುರುಂಜಿ ವಿಶ್ವನಾಥ ಗೌಡ ಮತ್ತು ಕೈಕುರೆ ರಾಮಣ್ಣಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿ ಗೆದ್ದುಕೊಂಡಿತು. ಉದ್ಯಮಿ ಐವನ್ ಮಿಸ್ಕಿತ್ ಬಹುಮಾನ ವಿತರಿಸಿದರು. ಕಾಲೇಜು ಸಂಚಾಲಕ ಕಿರೆಂ ಚರ್ಚ್ ಧರ್ಮಗುರು ಫಾ| ಪಾವ್ಲ್ ಪಿಂಟೊ, ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ, ಜೊಸನ್ ಪ್ರಶಾಂತ್ ಅಬ್ರೆವೋ, ರೇಣುಕಾ ಆಚಾರ್ಯ, ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕ ನಾಗಲಿಂಗಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಪೊಂಪೈ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಜೇಮ್ಸ್ ಒಲಿವರ್ ಕಾಲೇಜು ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷ ಸಂತಾನ್ ಡಿಸೋಜ, ಪತ್ರಕರ್ತ ಶರತ್ ಶೆಟ್ಟಿ ಉಪಸ್ಥಿತರಿದ್ದರು.

ಮಂಗಳೂರು ವಿ.ವಿ. ವ್ಯಾಪ್ತಿಯ ಮಂಗಳೂರು ಉಡುಪಿ ಕೊಡಗು ಜಿಲ್ಲೆಗಳ 40 ಕಾಲೇಜುಗಳ 176 ಪುರುಷರು ಹಾಗೂ 78 ಮಂದಿ ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.
ಮಹಿಳಾ ಸ್ಪರ್ಧಾ ಫಲಿತಾಂಶ:
1. ಸುಪ್ರೀತಾ ಬಿ.ಕೆ. (22:11.5) ಆಳ್ವಾಸ್ ಕಾಲೇಜು ಮೂಡಬಿದಿರೆ. 2. ಅರ್ಚನಾ ಕೆ.ಎಂ. (22:17.2) ಆಳ್ವಾಸ್ ಕಾಲೇಜು ಮೂಡಬಿದಿರೆ. 3. ಸುಜಾತ ಎ.ಎಸ್. ( 22:20.7) ಆಳ್ವಾಸ್ ಕಾಲೇಜು ಮೂಡಬಿದಿರೆ

ತಂಡ ಸ್ಪರ್ಧೆ
1. ಆಳ್ವಾಸ್ ಕಾಲೇಜು ಮೂಡಬಿದಿರೆ
2. ಡಾ| ಶಿವರಾಮ ಕಾರಂತ ಪ್ರಥಮದರ್ಜೆ ಕಾಲೇಜು ಬೆಳ್ಳಾರೆ.
3. ಕೆ.ಎಸ್. ಎಸ್. ಕಾಲೇಜು ಸುಬ್ರಹ್ಮಣ್ಯ

ಪುರುಷ ಸ್ಪರ್ಧಾ ಫಲಿತಾಂಶ:
1. ಕೃಷ್ಣಪ್ಪ ಬಿ. (41:44.3) ಎಸ್.ಡಿ. ಎಮ್. ಕಾಲೇಜು ಉಜಿರೆ. 2. ಶಿವಾನಂದ ಭಾಸ್ಕರ ನಾಯ್ಕ್ (42:25.2) ಆಳ್ವಾಸ್ ಕಾಲೇಜು ಮೂಡಬಿದಿರೆ. 2 ಹರೀಶ ಜಿ. (42:26.8) ಆಳ್ವಾಸ್ ಕಾಲೇಜು ಮೂಡಬಿದಿರೆ.

ತಂಡ ಸ್ಪರ್ಧೆ
1. ಆಳ್ವಾಸ್ ಕಾಲೇಜು ಮೂಡಬಿದಿರೆ
2. ಕೆ.ಎಸ್. ಎಸ್. ಕಾಲೇಜು ಸುಬ್ರಹ್ಮಣ್ಯ
3. ಎಸ್.ಡಿ. ಎಮ್. ಕಾಲೇಜು ಉಜಿರೆ.

Kinnigoli-25081303

Kinnigoli-25081304

Kinnigoli-25081302

Kinnigoli-25081301

 

Comments

comments

Comments are closed.

Read previous post:
Kinnigoli-22081308
ಕಿನ್ನಿಗೋಳಿ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಕಿನ್ನಿಗೋಳಿ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಸಚಿತ್ರಗಳು

Close