ಪರಿಸರ ಜಾಗೃತಿ ಜಾಥಾ ಹಾಗೂ ಮಾಹಿತಿ ಶಿಬಿರ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯ, ಮೆನ್ನಬೆಟ್ಟು ಮತ್ತು ಕಿನ್ನಿಗೋಳಿ ಹಾಗೂ ಗ್ರಾಮ ಪಂಚಾಯಿತಿ, ರೋಟರಿ, ರೋಟರಾಕ್ಟ್ ಕ್ಲಬ್, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಅರಣ್ಯ ಇಲಾಖೆ ಮೂಡಬಿದಿರೆ ವಲಯ, ರೈತ ಸಂಘ ಕಿನ್ನಿಗೋಳಿ ಹಾಗೂ ಯುಗಪುರುಷ ಕಿನ್ನಿಗೋಳಿ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಶನಿವಾರ ಪರಿಸರ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಉಪನ್ಯಾಸಕ, ಸಾಹಿತಿ ಸೀತಾರಾಮ ಭಟ್, ಸ್ವಸಹಾಯ ಸಂಘಗಳ ಮಂಗಳೂರು ಕೇಂದ್ರ ಒಕ್ಕೂಟ ಅಧ್ಯಕ್ಷ ಆಲ್ವಿನ್ ಎಫ್. ಡಿ’ಸೋಜ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮಂಗಳೂರು ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಘವ ಎಂ.,ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಹೆಗ್ಡೆ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಕಿನ್ನಿಗೋಳಿ ರೋಟರ‍್ಯಾಕ್ಟ್ ಸಭಾಪತಿ ಜೊಸ್ಸಿ ಪಿಂಟೋ, ಕಿನ್ನಿಗೋಳಿ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ , ಕಿನ್ನಿಗೋಳಿ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ಯೋಗೀಶ್ ರಾವ್, ಕಿನ್ನಿಗೋಳಿ ವಲಯ ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ಸುಜಾತ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ವೈ. ಕೆ. ಸಾಲ್ಯಾನ್, ಸೋಮಪ್ಪ ಗೌಡ, ಶ್ಯಾಮ್ ಡಿ. ಕೆ., ಯೋಜನಾ ಮೇಲ್ವಿಚಾರಕ ಸತೀಶ್ ಉಪಸ್ಥಿತರಿದ್ದರು. ಈ ಸಂದರ್ಭ ಕಿನ್ನಿಗೋಳಿ ಲಿಟ್ಲ್‌ಫ್ಲವರ್ ಶಾಲಾ ವಿದ್ಯಾರ್ಥಿಗಳು ನಿಡ್ಡೋಡಿ ಸ್ಥಾವರದಿಂದ ಆಗುವ ಕೆಡುಕಿನ ಬಗ್ಗೆ ಸಚಿವರಿಗೆ ಮನವಿಯನ್ನು ಜಿ. ಪಂ. ಸದಸ್ಯ ಈಶ್ವರ್ ಕಟೀಲ್ ಅವರಿಗೆ ನೀಡಿದರು.

kinnigoli27081301

Comments

comments

Comments are closed.

Read previous post:
Kinnigoli-25081306
ಚಿನ್ನದ ರಥದ ಸ್ವರ್ಣ ಮುಹೂರ್ತಕ್ಕೆ ಚಾಲನೆ

Narendra Kerekad ಕಟೀಲು: ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಬೇಡಿಕೆ ಇರುವ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಕಟೀಲು ದೇವಳದ ಪರಿಸರದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗೆ ಸರ್ವ ರೀತಿಯ ಸಹಕಾರ...

Close