ಕಿನ್ನಿಗೋಳಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ನಮ್ಮ ಜನಪದ ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಗಳಿಂದ ವಿಮುಖವಾಗುತ್ತಿರುವ ಈ ಕಾಲದಲ್ಲಿ ಮಕ್ಕಳ ಪ್ರತಿಭೆ ವಿಕಸನಗೊಳಿಸಲು ಮುದ್ದುಕೃಷ್ಣ ಸ್ಪರ್ಧೆಯಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ. ಎಂದು ಕಿನ್ನಿಗೋಳಿ ಇಂಡಿಯನ್ ಒವರ್ ಸೀಸ್ ಬ್ಯಾಂಕ್ ಶಾಖಾ ಪ್ರಬಂಧಕ ಬಿ. ಕೆ. ಕುಮಾರ್ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್  ಕ್ಲಬ್, ಇನ್ನರ್ ವೀಲ್ ಕ್ಲಬ್, ಯಕ್ಷಲಹರಿ ಹಾಗೂ ಯುಗಪುರುಷ ಕಿನ್ನಿಗೋಳಿ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬುಧವಾರ ನಡೆದ ಮುದ್ದುಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲೆ 3180 ರ ವಲಯ 4 ರ ಸಹಾಯಕ ಗವರ್ನರ್ ಅರವಿಂದ ಭಟ್ ವಿಜೇತರಿಗೆ ಬಹುಮಾನ ವಿತರಿಸಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ, ಕಾರ್ಯದರ್ಶಿ ರಂಜಿತಾ, ಮಲ್ಲಿಕಾ ಪೂಂಜಾ, ಲತಾ ಕೃಷ್ಣ, ರೋಟರಾಕ್ಟ್ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಯಕ್ಷ ಲಹರಿ ಕಾರ್ಯದರ್ಶಿ ಶ್ರೀಧರ ಡಿ.ಎಸ್., ಪಿ.ಸತೀಶ್ ರಾವ್, ಶರತ್ ಶೆಟ್ಟಿ, ಸುಮಿತ್ ಕುಮಾರ್, ಕೆ.ಬಿ.ಸುರೇಶ್ ಉಪಸ್ಥಿತರಿದ್ದರು.
.
ಸ್ಪರ್ಧಾ ಫಲಿತಾಂಶ

2 ವರ್ಷದೊಳಗಿನ ಮಕ್ಕಳು
ಪ್ರಥಮ ಮಾಯಾಂಕ್, ದ್ವಿತೀಯ ಪ್ರತೀಕ್ಷಾ ಮಲ್ಯ ಹಾಗೂ ಅಮೃತಾ, ತೃತೀಯ ಯಶಿಕಾ ಹಾಗೂ ಪರ್ಲ್ ಲೋಬೊ

2 ರಿಂದ 4 ವರ್ಷ
ಪ್ರಥಮ ಗ್ರಹಿತ್ ಜಿ. ಪ್ರಭು, ದ್ವಿತೀಯ ಗಾಯತ್ರಿ ಭಟ್, ತೃತೀಯ ರಿತಿಕ್ಷಾ ಹಾಗೂ ವಿತಿಕಾ ಶೆಟ್ಟಿ

4 ರಿಂದ 6 ವರ್ಷ
ಪ್ರಥಮ ಖ್ಯಾತಿ ಆರ್. ಭಂಜನ್, ದ್ವಿತೀಯ ಅಭೀಷ್ಣ, ತೃತೀಯ ಸಾರ್ಥಕ್ ಶೆಣೈ

ಯಕ್ಷಗಾನ ಕೃಷ್ಣ ಸ್ಪರ್ಧೆ
ಪ್ರಥಮ ಕುನಾಲ್ ಆರ್. ಬಂಜನ್, ದ್ವಿತೀಯ ನವನೀತ್, ತೃತೀಯ ಶ್ರೇಯಸ್ ಭಟ್

ರಾಧಾಕೃಷ್ಣ
ಪ್ರಥಮ ಐಶ್ವರ್ಯ-ಪ್ರತೀತಿ, ದ್ವಿತೀಯ ಜಯಂತ್ ಮಲ್ಯ- ಗಾಯತ್ರಿ ಭಟ್, ತೃತೀಯ ಖ್ಯಾತಿ- ಸಾರ್ಥಕ್

ವಿಜಯಕೃಷ್ಣ ಸ್ಪರ್ಧೆ
ಪ್ರಥಮ ಜಾಹ್ನವಿ-ಕಿಶನ್

Kinnigoli-28081315 Kinnigoli-28081306 Kinnigoli-28081307 Kinnigoli-28081308 Kinnigoli-28081309 Kinnigoli-28081310 Kinnigoli-28081311 Kinnigoli-28081312 Kinnigoli-28081313

 

Comments

comments

Comments are closed.

Read previous post:
Kinnigoli-28081305
ಕಿನ್ನಿಗೋಳಿ ರೋಟರಿ ಶಾಲೆ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಶನಿವಾರ ಶಾಲಾ ಸಭಾಭಾವನದಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಿತು.

Close