ಗಿಡಿಗೆರೆ ಮುದ್ದು ಕೃಷ್ಣ ಸ್ಪರ್ಧೆ

ಕಿನ್ನಿಗೋಳಿ: ಗ್ರಾಮೀಣ ಪರಿಸರದ ಜನರಲ್ಲಿ ಪುರಾಣ ಅರಿವು ಸಂಸ್ಕಾರ ಸಂಸ್ಕೃತಿ ಇಂದಿಗೂ ಉಳಿದಿದ್ದು, ಹಿರಿಯರು ಅದನ್ನು ಉಳಿಸುವಲ್ಲಿ ಯುವಜನಾಂಗಕ್ಕೆ ಹಾಗೂ ಮಕ್ಕಳಿಗೆ ಸಚ್ಚಾರಿತ್ರ್ಯದ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಹೇಳಿದರು.

ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ತಂಗಡಿ ಸೇವಾ ಸಮಿತಿ ಹಾಗೂ ಶ್ರೀ ದುರ್ಗಾಂಬಿಕಾ ಯುವಕ- ಯುವತಿ ಮಂಡಲದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿ| ವೀರಪ್ಪ ಮೇಸ್ತ್ರಿ ಗಿಡಿಗೆರೆ ಸ್ಮರಣಾರ್ಥ ಗುರುವಾರ ನಡೆದ ದ್ವಿತೀಯ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧಾ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ ಎಸ್. ಬಂಜನ್, ಕಟೀಲು ದೇವಳ ಕಾಲೇಜು ಉಪನ್ಯಾಸಕ ಸುರೇಶ್, ಶೋಭ ಸುರೇಶ್, ಮಂಗಳೂರು ಜೀವನಿಧಿ ಸಂಸ್ಥೆ ನಿರ್ದೇಶಕಿ ಐಸಿಂತ್ ಪಿಂಟೊ, ಅಶೋಕ್ ದಾದಿ ಪಕ್ಷಿಕೆರೆ, ಶಿಕ್ಷಕ ಗುರು, ಶ್ರೀ ದುರ್ಗಾಂಬಿಕಾ ಯುವಕ ಮಂಡಲ ಗೌರವಾಧ್ಯಕ್ಷ ನಾರಾಯಣ ಮೊಗೇರ, ಅಧ್ಯಕ್ಷ ದಯಾನಂದ, ಶ್ಯಾಮ ಡಿ.ಕೆ. ಉಪಸ್ಥಿತರಿದ್ದರು.

ಸ್ಪರ್ಧಾ ಫಲಿತಾಂಶ

ತೊಟ್ಟಿಲು ಕೃಷ್ಣ
ಪ್ರಥಮ ಶ್ರಾವ್ಯ, ದ್ವಿತೀಯ ವರುಣ್ ನಿಡ್ಡೋಡಿ,

ಅಂಗನವಾಡಿ ವಿದ್ಯಾರ್ಥಿ ವಿಭಾಗ
ಪ್ರಥಮ ಶ್ರೀಯಾ ಕೆ., ದ್ವಿತೀಯ ಶ್ರೀಷಾ,

1 ರಿಂದ 2 ನೇ ತರಗತಿ
ಪ್ರಥಮ ಕೌಶಿಕ್, ದ್ವಿತೀಯ ದೀಕ್ಷಾ ಡಿ.

3 ರಿಂದ 4 ನೇ ತರಗತಿ
ಪ್ರಥಮ ಮೇಘಾ, ದ್ವಿತೀಯ ಕಾವ್ಯಾ ವಿ,

5 ರಿಂದ 7 ನೇ ತರಗತಿ
ಪ್ರಥಮ ಧನುಷ್, ದ್ವಿತೀಯ ವೀಕ್ಷಾ

4 ರಿಂದ 7ನೇ ತರಗತಿ- ರಾಧಾಕೃಷ್ಣ
ಪ್ರಥಮ ಸಾಕ್ಷಿ ವಿ-ಪೂಜಾ, ದ್ವಿತೀಯ ಜಯಲಕ್ಷ್ಮೀ-ವಿಜೇತ್

kinnigoli29081303

Comments

comments

Comments are closed.

Read previous post:
kinnigoli29081302
ಕಟೀಲಿನಲ್ಲಿ ಮುದ್ದು ಕೃಷ್ಣ ಸ್ಪರ್ಧೆ

ಕಿನ್ನಿಗೋಳಿ: ಪೋಷಕರು ಎಳವೆಯಲ್ಲಿಯೇ ಮಕ್ಕಳ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿ ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬಲ್ಲರು. ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಮಾಜಿ...

Close