2013 ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ

 ಕಿನ್ನಿಗೋಳಿ : ಒಗ್ಗಟ್ಟು ಪ್ರೀತಿ ವಿಶ್ವಾಸದ ಬದುಕು ನಮ್ಮದಾಗಬೇಕು. ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರನ್ನು ಸಮಾಜದ ಮುಂಚೂಣಿಗೆ ತರುವ ಪ್ರಯತ್ನ ನಿರಂತರ ಆಗಬೇಕಾಗಿದೆ. ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ರಾಜಾಂಗಣ ಸಭಾ ಭವನದಲ್ಲಿ ಮುಲ್ಕಿ ಬಂಟರ ಸಂಘದ ವತಿಯಿಂದ ಭಾನುವಾರ ನಡೆದ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಗಳಿಸುವ ಗುರಿ ಹೊಂದಬೇಕು. ಸಂಘಟಿತರಾದಲ್ಲಿ ಮಾತ್ರ ಸಮಾಜದ ಅಭ್ಯುದಯ ಸಾಧ್ಯವಾಗಿದ್ದು ಮಕ್ಕಳಿಗೆ ಅವರ ಆಯ್ಕೆಯಂತೆ ಉನ್ನತ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಧೀಮಂತ ವ್ಯಕ್ತಿಯನ್ನಾಗಿಸಲು ಶ್ರಮಪಡಬೇಕು ಎಂದು ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಮುಲ್ಕಿ ಬಂಟರ ಸಂಘ ಕಾರ್ಯದರ್ಶಿ ರವಿರಾಜ ಶೆಟ್ಟಿ ಪ್ರಸ್ತಾವನೆಗೈದರು. ಖ್ಯಾತ ಸಾಹಿತಿ ಹಾಗೂ ಸಂಶೋಧಕಿ ಡಾ| ಇಂದಿರಾ ಹೆಗ್ಡೆ ಪ್ರಧಾನ ಉಪನ್ಯಾಸ ನೀಡಿದರು.
ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ನಾಡೋಜ ಡಾ| ಕಯ್ಯಾರ ಕಿಂಞಣ್ಣ ರೈ ಅವರ ಅನುಪಸ್ಥಿತಿಯಲ್ಲಿ ಮಗ ದುರ್ಗಾಪ್ರಸಾದ್ ರೈ ಹಾಗೂ ಕುಟುಂಬಿಕರು ಪ್ರಶಸ್ತಿ ಸ್ವೀಕರಿಸಿದರು.
ಬಪ್ಪನಾಡು ದೇವಳ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ನಿವೃತ್ತ ಪ್ರಿನಿಪಾಲ್ ಜಿ.ಯಂ. ಶೆಟ್ಟಿ ಹಾಗು ಪ್ರಖ್ಯಾತ ಸ್ತ್ರೀರೋಗ ತಜ್ಞ ಡಾ| ದಯಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಕೀರ್ತಿ ಕೆ. ಶೆಟ್ಟಿ ಏಳಿಂಜೆ, ಸುಜನ್ ಶೆಟ್ಟಿ ಹಾಗೂ ನಿಖಿತಾ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಮಾರು 4ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು 300 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಬೆಂಗಳೂರು ಉದ್ಯಮಿ ಬಪ್ಪನಾಡು ನಾರಾಯಣ ಶೆಟ್ಟಿ, ಮುಂಬೈ ಉದ್ಯಮಿ ತೋಕೂರುಗುತ್ತು ಬಾಸ್ಕರ ಶೆಟ್ಟಿ, ಮುಲ್ಕಿ ಬಂಟರ ಸಂಘ ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೋಶಾಧಿಕಾರಿ ಕೆ.ಸುಂದರ ಶೆಟ್ಟಿ, ಮುಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮನೋಹರ ಶೆಟ್ಟಿ, ಮುಲ್ಕಿ ಬಂಟರ ಯುವ ವಿಭಾಗ ಅಧ್ಯಕ್ಷ ರಾಜೇಶ್ ಶೆಟ್ಟಿ, ಮುಲ್ಕಿ ಬಂಟರ ಮಹಿಳಾ ವಿಭಾಗ ಅಧ್ಯಕ್ಷೆ ಶಮೀನಾ ಆಳ್ವಾ ಮತ್ತಿತರರು ಉಪಸ್ಥಿತರಿದ್ದರು
ಮುಲ್ಕಿ ಬಂಟರ ಸಂಘ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕ ಸಾಯೀನಾಥ ಶೆಟ್ಟಿ ಶರತ್ ಶೆಟ್ಟಿ ಮತ್ತು ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

kinnigoli-01091301

kinnigoli-01091306 kinnigoli-01091302 kinnigoli-01091303 kinnigoli-01091304 kinnigoli-01091305

Comments

comments

Comments are closed.

Read previous post:
Kinnigoli01091301
ಕಿನ್ನಿಗೋಳಿ : ನಿವೃತ್ತ ಶಿಕ್ಷಕಿ ಸ್ಟೆಲ್ಲಾ ಸಿಕ್ವೇರಾ ಸನ್ಮಾನ

ಕಿನ್ನಿಗೋಳಿ : ಕೆಥೋಲಿಕ್ ಸಭಾ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಭಾನುವಾರ ನಿವೃತ್ತ ಶಿಕ್ಷಕ ದಂಪತಿ ಸ್ಟೆಲ್ಲಾ ಸಿಕ್ವೇರಾ ಹಾಗೂ ವಲೇರಿಯನ್ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು....

Close