ಹಳೆಯಂಗಡಿ ಎಸ್‌ಸಿಡಿಸಿಸಿ ಬ್ಯಾಂಕ್‌ ಶಾಖೆ ಉದ್ಘಾಟನೆ

ಮೂಲ್ಕಿ: ಜನರ ನಡುವಿನ ಸಂಪರ್ಕದಿಂದ ಬ್ಯಾಂಕ್ ಅಭಿವೃದ್ಧಿ ಹೊಂದಿದೆ. ನಂಬಿಕೆ, ವಿಶ್ವಾಸದಿಂದ ಸಾಲ ಪಡೆದವರು ಮತ್ತು ಠೇವಣಿ ನೀಡುವವರನ್ನು ಸಮಾನವಾಗಿ ನೋಡುವುದರಿಂದ ಸಹಕಾರಿ ಬ್ಯಾಂಕ್ ರಾಷ್ಟ್ರೀಯ ಬ್ಯಾಂಕ್‌ನ ಸರಿಸಮಾನವಾಗಿ ಬೆಳೆದಿದೆ. ಗೌರವ ಪುರಸ್ಕಾರಗಳೆಲ್ಲಾ ಗ್ರಾಹಕರಿಗೆ, ನವೋದಯ ಕುಟುಂಬದವರಿಗೆ ಹಾಗೂ ಬ್ಯಾಂಕ್‌ನ ಸಿಬ್ಬಂದಿಗಳಿಗೆ ಸಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಮೂಲ್ಕಿ ಬಳಿಯ ಹಳೆಯಂಗಡಿಯ ಮಾತಾ ರೆಸಿಡೆನ್ಸಿಯಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ೬೨ನೇ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಶಾಖೆಯನ್ನು ಉದ್ಘಾಟಿಸಿದ ಯುವಜನ ಸೇವಾ ಮತ್ತು ಮೀನುಗಾರಿಕೆಯ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ, ಸಹಕಾರಿ ತತ್ವದ ಜಾಗೃತಿ ಮೂಡಿಸುವ ಮೂಲಕ ಸ್ವಾಭಿಮಾನಿ ಬದುಕಿಗೆ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನವೋದಯ ಸ್ವಸಹಾಯ ಸಂಘವು ಪ್ರೇರಣೆ ಆಗಿದೆ. ಗ್ರಾಮೀಣ ಜನರು ಬ್ಯಾಂಕ್‌ನ ಮೆಟ್ಟಿಲನ್ನು ಹತ್ತುತ್ತಿರುವುದು ಈ ದೇಶದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು.
ಬ್ಯಾಂಕ್‌ನ ಭದ್ರತಾ ಕೋಶವನ್ನು ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಉದ್ಘಾಟಿಸಿದರು.
ಸಮಾರಂಭದಲ್ಲಿ ಪ್ರಥಮ ಠೇವಣಿ ಪತ್ರ, ಸಂಚಯ ಖಾತೆ, ಸಾಲದ ಪತ್ರ, ಲಾಕರ್ ಕೀ, ನವೋದಯ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಸ್ತಾಂತರ, ನೂತನ ಸ್ವಸಹಾಯ ಸಂಘಗಳಿಗೆ ಚಾಲನೆ, ನವೋದಯ ಪ್ರೇರಕರಿಗೆ ಗೌರವ, ಸಂಚಯ ಖಾತೆ ಮತ್ತು ನಿರಖು ಠೇವಣಿಯ ಗ್ರಾಹಕರಿಗೆ ಲಕ್ಕಿ ಡ್ರಾವನ್ನು ನಡೆಸಿ ಚಿನ್ನದ ನಾಣ್ಯದ ಬಹುಮಾನವನ್ನು ವಿತರಿಸಲಾಯಿತು.
ಹಳೆಯಂಗಡಿ ಗ್ರಾಮಸ್ಥರ ಪರವಾಗಿ ಡಾಕ್ಟರೇಟ್ ಪುರಸ್ಕೃತರಾದ ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿ ಸಂತೋಷ್‌ಕುಮಾರ್ ಶೆಟ್ಟಿ, ಶಾಖಾ ಪ್ರಬಂಧಕಿ ಲಾವಣ್ಯರನ್ನು ಸನ್ಮಾನಿಸಲಾಯಿತು.
ಪಡುಪಣಂಬೂರು ವ್ಯವಸಾಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಮಾಧವ ತಿಂಗಳಾಯ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಇರ್ವತ್ತೂರು ಭಾಸ್ಕರ ಕೋಟ್ಯಾನ್, ಸದಾಶಿವ ಉಲ್ಲಾಳ್, ಎಂ.ವಾದಿರಾಜ ಶೆಟ್ಟಿ, ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಮೋನಪ್ಪ ಶೆಟ್ಟಿ, ಬಂಟ್ವಾಳ ಬೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸುದರ್ಶನ್ ಜೈನ್, ಸುರತ್ಕಲ್ ವ್ಯವಸಾಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ದಾಮೋದರ ಶೆಟ್ಟಿ, ಕಿನ್ನಗೋಳಿ ವ್ಯವಸಾಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಲವ ಶೆಟ್ಟಿ ಉಪಸ್ಥಿತರಿದ್ದರು.
ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕ ಎಂ.ಗೋಪಾಲಕೃಷ್ಣ ಭಟ್ ವಂದಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

ಬ್ಯಾಂಕ್‌ನಲ್ಲಿ “ಎಂ”ಗಳೇ ಹೆಚ್ಚು

ಕೆಲವೊಂದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ “ಎಂ” ಹುದ್ದೆಯ ಅಧಿಕಾರಿಗಳೇ ಹೆಚ್ಚಾಗಿ ಕಚೇರಿಯಲ್ಲಿಯೇ ಕುಳಿತು ನಿಯಂತ್ರಿಸುವುದರಿಂದ ಜನರು ಇಂತಹ ಬ್ಯಾಂಕ್‌ಗಳಿಂದ ದೂರವಾಗುತ್ತಿದ್ದಾರೆ ಆದರೆ ಸಹಕಾರಿ ತತ್ವದ ಬ್ಯಾಂಕ್‌ನಲ್ಲಿ ಗರಿಷ್ಠವಾಗಿ ವ್ಯವಹರಿಸುವುದು ಸಿಬ್ಬಂದಿಗಳ ಸ್ನೇಹ ಭಾವನೆಯಿಂದ ಎಂದು ರಾಜೇಂದ್ರ ಕುಮಾರ್ ಹೇಳಿದರು.

Kinnigoli-02091301

Kinnigoli-02091302

Kinnigoli-02091303

Kinnigoli-02091304

Kinnigoli-02091305

Kinnigoli-02091306

Kinnigoli-02091307

Kinnigoli-02091308

Comments

comments

Comments are closed.

Read previous post:
kinnigoli-01091305
2013 ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ

 ಕಿನ್ನಿಗೋಳಿ : ಒಗ್ಗಟ್ಟು ಪ್ರೀತಿ ವಿಶ್ವಾಸದ ಬದುಕು ನಮ್ಮದಾಗಬೇಕು. ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರನ್ನು ಸಮಾಜದ ಮುಂಚೂಣಿಗೆ ತರುವ ಪ್ರಯತ್ನ ನಿರಂತರ ಆಗಬೇಕಾಗಿದೆ. ಎಂದು ಮಾಜಿ ಸಚಿವ ಕೆ....

Close