ಕಿಲ್ಪಾಡಿ ಗ್ರಾ.ಪಂ. ಜಮಾಬಂದಿ ನೀರಸ

Puneethakrishna Sk
ಮುಲ್ಕಿ : ಕಿಲ್ಪಾಡಿ ಗ್ರಾಮಪಂಚಾಯತಿನ ಈ ವರ್ಷದ ಜಮಾಬಂದಿ ಕಾರ್ಯಕ್ರಮದಲ್ಲಿ ಪಂಚಾಯತಿನ ಸದಸ್ಯರೆಲ್ಲರೂ ಪಕ್ಷಬೇದ ಮರೆತು ಸರಕಾರದ ವಿರುದ್ದ ಅನುದಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಜಮಾಬಂದಿಯ ಬಗ್ಗೆ ಮೊದಲು ಆಕ್ರೋಶ ವ್ಯಕ್ತಪಡಿಸಿದ ಪಂ.ನ ಮಾಜೀ ಅಧ್ಯಕ್ಷ ಕೃಷ್ಣ ಅಂಗಾರಗುಡ್ಡೆ ಪಂಚಾಯತಿಗೆ ಸರಕಾರದಿಂದ ಅನುದಾನ ಜಾಸ್ತಿ ಬೇಕು ಆಗ ಅಬಿವೃದ್ದಿ ಜಾಸ್ತಿ ಆಗುತ್ತದೆ ಇಲ್ಲದಿದ್ದರೆ ಜಮಾಬಂದಿ ಮಾಡುವ ಪ್ರಯೋಜನವೇನು? ಎಂದರು. ಇದಕ್ಕೆ ಧ್ವನಿಗೂಡಿಸಿದ ಗೋಪೀನಾಥ ಪಡಂಗ ಮಾತನಾಡಿ ಪಂ.ಸದಸ್ಯರಿಗೆ ವರ್ಷಕ್ಕೆ ೨೫ ಸಾವಿರ ಅನುದಾನ ಬರುತ್ತಿದ್ದು ಅದರಲ್ಲಿ ಎಷ್ಟು ಕೆಲಸ ಮಾಡಿಸಬಹುದು ಇದರಲ್ಲಿ ಕೂಡ ಅವ್ಯವಹಾರ ನಡೆಸುತ್ತಿದ್ದಾರೆಂದು ಜಮಾಬಂದಿ ಮಾಡುತ್ತಿದ್ದಾರೆ ಸಮೀಪದ ನಗರಪಂಚಾಯತ್, ಜಿಲ್ಲಾಪಂಚಾಯತ್, ಸಚಿವ,ಸಂಸದರಿಗೆ ಕೋಟಿಕಟ್ಟಲೆ ಅನುದಾನ ಬರುತ್ತಿದ್ದು ಅವರಿಗೆ ಜಮಾಬಂದಿ ಇಲ್ಲ ನಾವೇನು ಕಳ್ಳರೇ?ಎಂದು ಪ್ರಶ್ನಿಸಿದರು.ಇದಕ್ಕೆ ಸದಸ್ಯ ಜಯ ಮಟ್ಟು ಕೂಡ ಧ್ವನಿ ಕೂಡಿಸಿ ಮುಲ್ಕಿಯಿಂದ ಮಟ್ಟುವಿನವರೆಗಿನ ಮೀನುಗಾರಿಕಾ ರಸೆಯನ್ನು ಅಬಿವೃದ್ದಿಪಡಿಸಲು ಸಚಿವರಿಗೆ ಮನವಿ ಮಾಡಲು ಒತ್ತಾಯಿಸಿದರು. ಸರಕಾರ ಪಂಚಾಯತ್‌ರಾಜ್ ವ್ಯವಸ್ಥೆ ಮಾಡಿದ್ದು ಯಾಕೆ? ಪಂಚಾಯತಿಗೆ ವರ್ಷಕ್ಕೆ ಕೇವಲ 8 ಲಕ್ಷ ಅನುದಾನ ಬರುತ್ತದೆ. ಇದರಿಂದ ಎಷ್ಟು ಕಾಮಗಾರಿ ಮಾಡಲು ಸಾಧ್ಯ ಎಂದು ಸದಸ್ಯ ಮನೋಹರ ಕೋಟ್ಯಾನ್ ಬೇಸರ ವ್ಯಕ್ತಪಡಿಸಿದರು.
ಅತಿಕಾರಿಬೆಟ್ಟು ಗ್ರಾಮದ ಮೊಯಿಲೊಟ್ಟಿನಲ್ಲಿರುವ ಸೊಸೈಟಿಗೆ ಡೋರ್ ನಂಬರ್ ನೀಡುವಂತೆ ಜಮಾಬಂದಿಯಲ್ಲಿ ರಂಗನಾಥಶೆಟ್ಟಿ ಆಗ್ರಹಿಸಿದರು. ಆದರೆ ಸೊಸೈಟಿ ಸರಕಾರಿ ಜಾಗದಲ್ಲಿರುವ ಕಾರಣ ದಾಖಲೆ ಪತ್ರಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಜಮಾಬಂದಿ ನಿಯಮದ ಪ್ರಕಾರ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ವಾರ ಮುಂಚೆಯೇ ಜಮಾಬಂದಿ ಬಗ್ಗೆ ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಬೇಕು ಅದು ಮಾಡದೇ ಪಂಚಾಯತಿನ ಉಪಾಧ್ಯಕ್ಷರಿಗೂ ಹೇಳಿಲ್ಲ ಎಂದು ಮೋಹನ ಕುಬೆವೂರು ಆಕೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಜಮಾಬಂದಿ ನೀರಸವಾಗಿಯೇ ಮುಕ್ತಾಯಗೊಂಡಿತು.
ಸಭೆಯಲ್ಲಿಕಿಲ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಶಾರದಾವಸಂತ್,ಉಪಾಧ್ಯಕ್ಷ ಮೋಹನಕುಬೆವೂರು,ಶಿಶು ಅಬಿವೃದ್ದಿ ಇಲಾಖೆಯ ಶ್ಯಾಮಲ,ಎಂಜಿನಿಯರ್ ಪ್ರಶಾಂತ ಆಳ್ವ, ಪಿಡಿಒ ಶೋಭಾ ಉಪಸ್ಥಿತರಿದ್ದರು.ಪಿಡಿಒ ಸ್ವಾಗತಿಸಿಗುಮಾಸ್ತ ಸುರೇಶ ವಂದಿಸಿದರು.ಜಮಾಬಂದಿಯ ವರದಿಯನ್ನು ಲೆಕ್ಕ ಸಹಾಯಕ ಯೋಗೀಶ ಮಂಡಿಸಿದರು.

kinnigoli2091302

Comments

comments

Comments are closed.

Read previous post:
ಕಟೀಲಿನಲ್ಲಿ ಕೃಷಿ ಋಷಿ ಪ್ರಶಸ್ತಿ ಪ್ರದಾನ

Puneethakrishna Sk ಮುಲ್ಕಿ: ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮ ಕಟೀಲು ಇದರ ಆಶ್ರಯದಲ್ಲಿ ಗಣೇಶೋತ್ಸವದ ಪ್ರಯುಕ್ತ ‘ಕೃಷಿ ಋಷಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ  ಸೆ.10 ರಂದು ರಾತ್ರಿ 8.30 ಗಂಟೆಗೆ...

Close