ಮುಲ್ಕಿ: ಕಳ್ಳನೋಟಿನ ಹಾವಳಿ

Puneethkrishna

ಮುಲ್ಕಿ: ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೇ ಕಳ್ಳನೋಟಿನ ಹಾವಳಿ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ಕಾರ‍್ನಾಡಿನಲ್ಲಿರುವ ಉದ್ಯಮಿಯೋರ್ವರಿಗೆ 500 ರೂ ಮುಖಬೆಲೆಯ ಎರಡು ಕಳ್ಳನೋಟುಗಳು ಮುಲ್ಕಿಯ ಕಾರ್ಪೋರೇಶನ್ ಬ್ಯಾಂಕಿಗೆ ಕೊಡುವಾಗ ಬ್ಯಾಂಕಿನ ಅಧಿಕಾರಿಗಳು ಪತ್ತೆ ಹಚ್ಚಿ ’ಫೇಕ್’ ಸೀಲು ಹಾಕಿ ವಾಪಾಸು ಕೊಟ್ಟಿದ್ದಾರೆ. ಈ 500 ರೂವಿನ ನೋಟನ್ನು ಪರಿಶೀಲಿಸಿದಾಗ ಅದು ಕಳ್ಳ ನೋಟು ಎಂದು ತಿಳಿಯುವುದೇ ಇಲ್ಲ ಎಂದು ಉದ್ಯಮಿ ತಿಳಿಸಿದ್ದು ಇತ್ತೀಚೆಗೆ ನಕಲಿ ನೋಟುಗಳ ಹಾವಳಿ ಮಿತಿಮೀರಿದೆ ಎಂದು ಹೇಳಿದ್ದಾರೆ. ಕಳೆದ ವಾರದ ಹಿಂದೆ ಮುಲ್ಕಿಯ ಇನ್ನೋರ್ವ ಉದ್ಯಮಿಯವರಿಗೂ ಇದೇ ಅನುಭವ ಆಗಿದ್ದು ಸುಮಾರು 50 ಸಾವಿರ ಮುಖಬೆಲೆಯ ೫೦೦ ರೂಗಳ ನಕಲಿ ನೊಟುಗಳು ಎಂಬ ಗುಮಾನಿಯೊಂದಿಗೆ ದೊರಕಿದ್ದು ಆದರೆ ಬ್ಯಾಂಕಿನವರು ವಿಶ್ವಾಸದ ಮೂಲಕ ತೆಗೆದುಕೊಂಡು ಬಚಾವಾಗಿದ್ದಾರೆಂದು ತಿಳಿದು ಬಂದಿದೆ.

Kinnigoli04091304

Comments

comments

Comments are closed.

Read previous post:
kinnigoli2091302
ಕಿಲ್ಪಾಡಿ ಗ್ರಾ.ಪಂ. ಜಮಾಬಂದಿ ನೀರಸ

Puneethakrishna Sk ಮುಲ್ಕಿ : ಕಿಲ್ಪಾಡಿ ಗ್ರಾಮಪಂಚಾಯತಿನ ಈ ವರ್ಷದ ಜಮಾಬಂದಿ ಕಾರ್ಯಕ್ರಮದಲ್ಲಿ ಪಂಚಾಯತಿನ ಸದಸ್ಯರೆಲ್ಲರೂ ಪಕ್ಷಬೇದ ಮರೆತು ಸರಕಾರದ ವಿರುದ್ದ ಅನುದಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ...

Close