ಮೂಲ್ಕಿ ವೈದ್ಯ ಡಾ.ರಂಗನಾಥ ರಾಯಪ್ಪ ಕಾಮತ್ ನಿಧನ

Narendra Kerekad
ಮೂಲ್ಕಿ: ಇಲ್ಲಿನ ಮೂಲ್ಕಿಯ ವೈದ್ಯರಾಗಿದ್ದ ಡಾ| ರಂಗನಾಥ ರಾಯಪ್ಪ ಕಾಮತ್(83)ರವರು ಮೂಲ್ಕಿಯ ಸ್ವಗೃಹದಲ್ಲಿ ಬುಧವಾರ ನಿಧನರಾದರು.

ಕರ್ನಾಟಕ ಸರ್ಕಾರದ ಪಶು ವೈದ್ಯಕೀಯ ವಿಭಾಗದಲ್ಲಿ 33 ವರ್ಷಗಳ ಸೇವೆ ಸಲ್ಲಿಸಿ ಸಹ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ನಂತರ ತನ್ನ ನಿವೃತ್ತ ಜೀವನದಲ್ಲಿ ಸುಮಾರು 14 ವರ್ಷಗಳ ಕಾಲ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪಶು ವೈದ್ಯಕೀಯ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಜನಪ್ರಿಯರಾಗಿದ್ದಾರೆ. ಕನ್ನಡದ ಅಭಿಮಾನಿಯಾಗಿ ಅಚ್ಚ ಕನ್ನಡದಲ್ಲೇ ವ್ಯವಹರಿಸಲು ಆಸಕ್ತರಾಗಿದ್ದರು.
ಇವರ ಹಿರಿಯ ಪುತ್ರ ರಾಯಪ್ಪ ಕಾಮತ್ ಲೆಮಿನಾದಲ್ಲಿ ಸೀನಿಯರ್ ಇಂಜಿನಿಯರ್ ಆಗಿದ್ದು, ಕಿರಿಯ ಪುತ್ರ ಶಿವಪ್ರಸಾದ್ ಕಾಮತ್ ಇಂಜಿನಿಯರ್ ಆಗಿ ಭಾರತೀಯ ಸೇನಾ ಪಡೆಯಿಂದ ನಿವೃತ್ತಿ ಹೊಂದಿ ಮಸ್ಕತ್‌ನಲ್ಲಿ ಇಂಜಿನಿಯರ್ ಆಗಿದ್ದಾರೆ. ಹಿರಿಯ ಮಗಳು ಡಾ| ಮಂಜುಳಾ ಶಾಂತಾರಾಮ್ ಮಂಗಳೂರಿನ ಏನೆಪೋಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಹಾಗೂ ಸಹ ನಿರ್ದೇಶಕರಾಗಿದ್ದಾರೆ. ಕಿರಿಯ ಮಗಳು ಡಾ| ಶಾಂತೇರಿ ಶೆಣೈ ಲಂಡನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲ್ಕಿಯ ಪ್ರಸೂತಿ ತಜ್ಞೆ ಡಾ| ಮೀರಾ ಆರ್. ಕಾಮತ್ ಸಹೋದರಿ ಆಗಿದ್ದಾರೆ.
ಜಿಲ್ಲೆಯ ಅನೇಕ ಗಣ್ಯವ್ಯಕ್ತಿಗಳು ಅಭಿಮಾನಿಗಳು ಬುಧವಾರ ಡಾ.ರಂಗನಾಥ ರಾಯಪ್ಪ ಕಾಮತ್‌ರವರ ಪಾರ್ಥಿಕ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

Kinnigoli-06091303

 

Comments

comments

Comments are closed.

Read previous post:
Kinnigoli-06091302
ಮಡಿವಾಳ ಸಂಘದ ವತಿಯಿಂದ ಸನ್ಮಾನ

Mithuna Kodethoor ಉಡುಪಿ ಜಿಲ್ಲಾ ಪ್ರಶಸ್ತಿ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಹೆಜಮಾಡಿಕೋಡಿ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಸುನೀತಾ ಗೋವಿಂದ ಮಡಿವಾಳ ಇವರನ್ನು ಮೂಲ್ಕಿ ರಜಕ ಯಾನೆ...

Close