ಏಕಲವ್ಯ ಪ್ರಶಸ್ತಿ ವಂಚಿತೆ ಅಕ್ಷತಾ ಪೂಜಾರಿ

ಕಿನ್ನಿಗೋಳಿ: ಪವರ್ ಲಿಪ್ಟಿಂಗ್‌ನಲ್ಲಿ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಪ್ರಪಂಚದ ಕ್ರೀಡಾ ಕ್ಷೇತ್ರದಲ್ಲಿ ದೇಶದ ಹಾಗೂ ಅವಿಭಜಿತ ದಕ್ಷಿಣ ಕನ್ನಡದ ಹೆಸರನ್ನು ಗುರುತಿಸುವಂತೆ ಮಾಡಿದ ಅಕ್ಷತಾ ಪೂಜಾರಿ ಈ ಬಾರಿಯ ಎಕಲವ್ಯ ಪ್ರಶಸ್ತಿ ವಂಚಿತರಾಗಿದ್ದಾರೆ.
ಲಂಡನ್ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳಾ ಪವರ್ ಲಿಪ್ಟಿಂಗ್ ವಿಭಾಗದಲ್ಲಿ 8 ಚಿನ್ನದ ಪದಕ, ಏಷ್ಯಾ ಮಟ್ಟದಲ್ಲಿ ಪ್ರಥಮ ಜೆಮ್‌ಶೆಡ್ ಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್‌ನಲ್ಲಿ 4 ಚಿನ್ನ ಸಹಿತ ಬಲಾಢ್ಯ ಮಹಿಳೆ ಪ್ರಶಸ್ತಿ ಗಳಿಸಿ ದೇಶದ ಹೆಸರನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ. ಹಲವಾರು ರಾಷ್ಟ್ರೀಯ ದಾಖಲೆಗಳೊಂದಿಗೆ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಮಧ್ಯಪ್ರದೇಶ, ತಮಿಳುನಾಡುಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ
ಬೋಳ ಹೊಸಮನೆ ಭೋಜ ಪೂಜಾರಿ ಹಾಗೂ ಪ್ರೇಮ ಪೂಜಾರಿ ದಂಪತಿಗಳ ಪುತ್ರಿ ಅಕ್ಷತಾ ಮೂಡಬಿದ್ರಿ ಆಳ್ವಾಸ್ ಕಾಲೇಜಿನಲ್ಲಿ ಎಂಎಚ್‌ಆರ್ ಡಿ ಪದವಿ ಪೂರೈಸಿದ್ದಾರೆ. ಮಂಗಳೂರಿನ ಸತೀಶ್ ಕುದ್ರೋಳಿಯವರ ಗರಡಿಯಲ್ಲಿ ಉತ್ತಮ ತರಬೇತಿ ಪಡೆದು ಪ್ರಸ್ತುತ ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಆರ್ಥಿಕ ಹಿನ್ನಡೆಯ ಬಿಲ್ಲವ ಕುಟುಂಬದಿಂದ ಬಂದ ಅಕ್ಷತಾ ರವರಿಗೆ ಸರಿಯಾದ ಉದ್ಯೋಗವೂ ಲಭಿಸಿಲ್ಲ. ಹೈಸ್ಕೂಲ್ ಮಟ್ಟದಿಂದಲೇ ಕ್ರೀಡೆಯಲ್ಲಿ ಹೆಸರುವಾಸಿಯಾದ ಅಕ್ಷತಾ ಪವರ್ ಲಿಪ್ಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿಕ್ಕ ಪ್ರಾಯದಲ್ಲಿಯೇ ಮಹತ್ತರ ಸಾಧನೆಗೈದ ಅಕ್ಷತಾ ರವರನ್ನು ಸಂಘ ಸಂಸ್ಥೆಗಳು ಗುರುತಿಸಿದರೂ ಸರಕಾರ, ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇವರ ಕ್ರೀಡಾ ಸಾಧನೆಯನ್ನು ಗಮನಿಸದಿರುವುದು ಖೇದಕರ. ಇನ್ನಾದರೂ ಅವಿಭಜಿತ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ 5 ಸಚಿವರುಗಳು ತಮ್ಮ ಕ್ಷೇತ್ರದ ಕ್ರೀಡಾ ಪಟುವಿಗೆ ಸಹಕರಿಸುವ ಮನಸ್ಸು ಮಾಡಬೇಕಾಗಿದೆ.

ಬಾಕ್ಸ್
ಈ ಬಾರಿ ಜೂನ್‌ನಲ್ಲಿ ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಅಹ್ವಾನಿಸಿದ್ದರು ಬಳಿಕ ಸರ್ಟಿಫಿಕೇಟ್ ವಿಮರ್ಶೆಗೆ ಕರೆಸಿದ್ದರು. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಾಧನೆಗಳಿದ್ದರಿಂದ ಪ್ರಶಸ್ತಿಯ ನಿಖರ ನಿರೀಕ್ಷೆಯಲ್ಲಿದ್ದೆ ಬಹಳ ನಿರಾಸೆಯಾಗಿದೆ. — ಅಕ್ಷತಾ ಪೂಜಾರಿ ಪವರ್ ಲಿಪ್ಟಿಂಗ್ ಸಾಧಕಿ.

Kinnigoli-07091302

Comments

comments

Comments are closed.

Read previous post:
Kinnigoli-07091301
ಗ್ರಾಮೀಣ ಪ್ರತಿಭೆ ಸದಾಶಿವ ಪೂಜಾರಿ

ಕಿನ್ನಿಗೋಳಿ: ಚೌತಿ ಹಬ್ಬ ಸಮೀಪಿಸುತ್ತಿದ್ದಂತೆ ಶ್ರೀ ಗಣೇಶೋತ್ಸವ ಆಚರಣೆಗೆ ಪೂರ್ವ ಸಿದ್ಧತೆ ನಡೆಯುತ್ತದೆ. ವಿಗ್ರಹ ತಯಾರಕರಿಗೆ ಆ ದಿನಗಳಲ್ಲಿ ಬಿಡುವಿಲ್ಲದ ಕೆಲಸ. ಪ್ರತಿಭಾವಂತ ಕಲಾವಿದರು ನಮ್ಮಲ್ಲಿ ಸಾಕಷ್ಟು ಮಂದಿ...

Close