ತೋಕೂರು ಐ.ಟಿ.ಐ. : ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಶಿಕ್ಷಕರು ಸಿದ್ಧತೆ, ಆದರ್ಶ, ಮಾನವೀಯತೆ, ಗಾಂಭೀರ್ಯ ಮತ್ತು ಹಾಸ್ಯ ಇಂತಹ ಪಂಚ ಗುಣಗಳನ್ನು ಹೊಂದಿದವರಾಗಬೇಕು ಮತ್ತು ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಮೌಲ್ಯಯುತ ಜೀವನವನ್ನು ನಡೆಸಿ ಗುರುಗಳನ್ನು ಮೀರಿಸಿದ ಶಿಷ್ಯರಾಗಬೇಕು. ಯಾವತ್ತೂ ಕಲಿಸಿದ ಗುರುವನ್ನು ಮರೆಯದೆ ಅವರು ತಿಳಿಸಿಕೊಟ್ಟ ಮಾರ್ಗದಲ್ಲಿ ನಡೆದರೆ ಉತ್ತಮ ಭವಿಷ್ಯ ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಬೇಲಾಡಿ ವಿಠಲ ಶೆಟ್ಟಿ ಹೇಳಿದರು.
ಮುಲ್ಕಿ ರಾಮಕೃಷ್ಣ ಪೂಂಜ ಐ.ಟಿ.ಐ. ತೋಕೂರುವಿನಲ್ಲಿ ಎನ್.ಎಸ್.ಎಸ್. ಹಾಗೂ ರೋವರ್ಸ್ ಘಟಕದ ವತಿಯಿಂದ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭ ಮಾತನಾಡಿದರು.
ಸರ್ವಪಲ್ಲಿ ಡಾ| ರಾಧಕೃಷ್ಣ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದರ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಬೇಲಾಡಿ ವಿಠಲ ಶೆಟ್ಟಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಾಚಾರ್ಯ ವೈ.ಎನ್.ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎನ್.ಪಿ.ಶೆಟ್ಟಿ, ತರಬೇತಿ ಅಧಿಕಾರಿ ರಘುರಾಮ್ ರಾವ್, ದಯಾನಂದ ಲಾಗ್ವಾಣ್‌ಕರ್, ಸಂಜೀವ ದೇವಾಡಿಗ, ಸುರೇಶ್ ಎಸ್. ವಿಶ್ವನಾಥ್ ರಾವ್, ಶಯನ ಮತ್ತಿತರರು ಉಪಸ್ಥಿತರಿದ್ದರು.

Kinnigoli-07091303

Comments

comments

Comments are closed.