ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ

ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಚಿಂತನೆ, ಸದ್ವಿಚಾರಗಳನ್ನು ಮೈಗೂಡಿಸಕೊಳ್ಳಬೇಕು. ಅವರ ಕನಸುಗಳನ್ನು ಸಾಕಾರಗೊಳಿಸಿ ಸಮಾಜದ ಒಳಿತನ್ನು ಬಯಸಿ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಮೋಹನ ಆಳ್ವ ಹೇಳಿದರು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ಶನಿವಾರ ನಡೆದ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊಕ್ತೇಸರ ಸನ್ಮಾನ ನೆಲೆಯಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮೊಕ್ತೇಸರ ಹೆಚ್. ರಾಮಚಂದ್ರ ಭಟ್, ಅರ್ಚಕ ಸನ್ಮಾನ ನೆಲೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ ಅರ್ಚಕ ರಾಮಚಂದ್ರ ಭಟ್ ಹಾಗೂ ಕಡಂದಲೆ ಸುರೇಶ್ ಭಂಡಾರಿ ಅವರ ಕೊಡುಗೆ ಕಲಾವಿದ ಸನ್ಮಾನ ಮತ್ತು ಪ್ರಶಸ್ತಿಯನ್ನು ಕಟೀಲು ಮೇಳದ ಹಿರಿಯ ಕಲಾವಿದ ತೊಡಿಕಾನ ವಿಶ್ವನಾಥ ಗೌಡ ಅವರಿಗೆ ನೀಡಲಾಯಿತು. ಕದ್ರಿ ಬಳಗದ ಕೊಡುಗೆಯಾದ ದಿ| ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿಯನ್ನು ಕಟೀಲು ಮೇಳದ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ನೀಡಿ ಗೌರವಿಸಲಾಯಿತು. ಬಾಲ ಪ್ರತಿಭೆ ಅನುಜ್ಞ ಭಟ್ ಹಾಗೂ ಶೈಕ್ಷಣಿಕ ಸಾಧನೆಗಾರ ವಾಸುದೇವ ರಾವ್ ಅವರನ್ನು ಅಭಿನಂದಿಸಲಾಯಿತು.
ಉದಯವಾಣಿ ಚೀಫ್ ಬ್ಯೂರೋ ಮನೋಹರ್ ಪ್ರಸಾದ್, ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಡಂದಲೆ ಸುರೇಶ್ ಭಂಡಾರಿ, ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ನಿಲೇಶ್ ಮುಂಬಾಯಿ, ಪ್ರದೀಪ್ ಕಲ್ಕೂರ, ಮೋಹನ್ ಮೆಂಡನ್, ಎಂ. ಬಾಲಕೃಷ್ಣ ಶೆಟ್ಟಿ, ವಾಸುದೇವ ರಾವ್ ಪುನರೂರು, ಸಿರಾಜೆ ಸೀತಾರಾಮ ಭಟ್, ರಾಘವೇಂದ್ರ ಆಚಾರ್, ಭುವನಾಭಿರಾಮ ಉಡುಪ, ಪಿ ಸತೀಶ್ ರಾವ್, ನಾರಾಯಣ, ನೀಲಾಕ್ಷ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಆಸ್ರಣ್ಣ ಸ್ವಾಗತಿಸಿ ಪ್ರಸ್ತಾವನೆಗೈದರು. ರಮ್ಯಾ ಆಸ್ರಣ್ಣ ಕಾರ್ಯಕ್ರಮ ನಿರೂಪಿಸಿದರು.

Kinnigoli-08091301

Comments

comments

Comments are closed.

Read previous post:
Kinnigoli-07091303
ತೋಕೂರು ಐ.ಟಿ.ಐ. : ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಶಿಕ್ಷಕರು ಸಿದ್ಧತೆ, ಆದರ್ಶ, ಮಾನವೀಯತೆ, ಗಾಂಭೀರ್ಯ ಮತ್ತು ಹಾಸ್ಯ ಇಂತಹ ಪಂಚ ಗುಣಗಳನ್ನು ಹೊಂದಿದವರಾಗಬೇಕು ಮತ್ತು ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಮೌಲ್ಯಯುತ ಜೀವನವನ್ನು ನಡೆಸಿ ಗುರುಗಳನ್ನು ಮೀರಿಸಿದ...

Close