ತುಳು ರಂಗಭೂಮಿಯಿಂದ ಭಾಷೆ,ಸಂಸ್ಕೃತಿ ಉಳಿದಿದೆ

Narendra Kerekad
ಮೂಲ್ಕಿ;
ಪ್ರಾಚೀನ ಭಾಷೆಯ ಸೊಗಡನ್ನು ಹೊಂದಿರುವ ತುಳು ಭಾಷೆಯನ್ನು ಉಳಿಸಲು ರಂಗಭೂಮಿಯು ಸಾಕಷ್ಟು ಕೊಡುಗೆಯನ್ನು ನೀಡಿದೆ ಅಲ್ಲದೇ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮೂಲಕ ರಂಗ ಸೇವೆಯನ್ನು ವಿಶಿಷ್ಠವಾಗಿ ಗ್ರಾಮೀಣ ಭಾಗದಲ್ಲಿ ನಾಟಕ ತಂಡಗಳು ನೀಡುತ್ತಿದ್ದು ಹೆಚ್ಚೆಚ್ಚು ಕಲಾವಿದರನ್ನು ಸೃಷ್ಟಿಸಿದೆ ಎಂದು ಕಿನ್ನಿಗೋಳಿಯ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿಯ ವಿಜಯ ಕಲಾವಿದರು ಅಭಿನಯಿಸುವ ನೂತನ ನಾಟಕ “ಪಾಂಡು ಪಾತೆರುಜೆ”ಯ ಮುಹೂರ್ತವನ್ನು ಭಾನುವಾರ ಯುಗಪುರುಷದ ರಾಘವೇಂದ್ರ ಸನ್ನಿಧಾನದಲ್ಲಿ ನೆರವೇರಿಸಿ ಮಾತನಾಡಿದರು.
ಕಿನ್ನಿಗೋಳಿ ವಿಜಯ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ತಂಡವು ಗಣೇಶ್ ಚತುರ್ಥಿ ಹಾಗೂ ವಿವಿಧ ಹಬ್ಬದ ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಪ್ರದರ್ಶನ ನೀಡಲಿರುವ “ಪಾಂಡು ಪಾತೆರುಜೆ” ಹಾಗೂ “ನಂಬುವರ ಬುಡ್ಪರ” ನಾಟಕವು ಸಾಮಾಜಿಕ ಕಥಾನಕದೊಂದಿಗೆ ಉತ್ತಮ ಸಂದೇಶವನ್ನು ನೀಡಲಿದೆ. ಜನವರಿ ತಿಂಗಳಿನಲ್ಲಿ ಮುಂಬಯಿ ಪ್ರವಾಸವನ್ನು ಪ್ರಕಾಶ್ ಶೆಟ್ಟಿ ಸುರತ್ಕಲ್‌ರವರ ನೇತೃತ್ವದಲ್ಲಿ ನಡೆಸಲಿದೆ ಎಂದರು.
ನಾಟಕದ ನಿರ್ದೇಶಕ ಚಲನಚಿತ್ರ ನಟ ರಾಜೇಶ್ ಕೆಂಚನಕೆರೆ, ನಾಟಕ ರಚನೆಕಾರ ಹರೀಶ್ ಪಡುಬಿದ್ರಿ, ಸಲಹೆಗಾರ ಜಯರಾಂ ಶೆಟ್ಟಿ ಸಾಲೆತ್ತೂರು, ಕಾರ್ಯದರ್ಶಿ ಲಕ್ಷ್ಮಣ್ ಬಿ.ಬಿ., ತಂಡದ ಪ್ರಬಂಧಕ ಸುಧಾಕರ ಸಾಲ್ಯಾನ್ ಸಂಕಲಕರಿಯ, ಅರ್ಚಕ ರಾಘವೇಂದ್ರ ಭಟ್, ಸಂಗೀತ ನಿರ್ದೇಶಕ ಮಧು ಕಾಪು, ತಂತ್ರಜ್ಞ ದಿನೇಶ್ ಮುಂಡ್ಕೂರು, ಹಿರಿಯ ಕಲಾವಿದರಾದ ಸೀತಾರಾಮ ಶೆಟ್ಟಿ ಎಳತ್ತೂರು, ಅಚ್ಚುತ ಮಾರ್ನಾಡು, ರಘುರಾಮ ಶೆಟ್ಟಿ ಬೆಳ್ತಂಗಡಿ, ರೇಖಾ ಕೆಂಚನಕೆರೆ, ವಿಕ್ರಂ ಶೆಟ್ಟಿ ಶಿರ್ವ, ಜ್ಯೋತಿ ಕೆಂಚನಕೆರೆ, ಸತೀಶ್ ಶಿರ್ವ, ದೇವದಾಸ್ ಮೂಳೂರು, ನರೇಂದ್ರ ಕೆರೆಕಾಡು ಉಪಸ್ಥಿತರಿದ್ದರು.

Kinnigoli-0909131

Comments

comments

Comments are closed.

Read previous post:
Nativity-day
ಕನ್ಯಾ ಮರಿಯಮ್ಮ ಜನ್ಮ ದಿನದ ಶುಭಾಶಯಗಳು

ನಮ್ಮಕಿನ್ನಿಗೋಳಿ ವೀಕ್ಷಕ ಬಂದುಗಳಿಗೆ ಕ್ರೈಸ್ತರ ತೆನೆ ಹಬ್ಬ ಹಾಗೂ ಕನ್ಯಾಮರಿಯಮ್ಮ ಜನ್ಮ ದಿನದ ಶುಭಾಶಯಗಳು

Close