“ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ”

Puneethakrishna
ಮುಲ್ಕಿ; ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಕ್ರೀಡೆಯಲ್ಲಿ ಭಾಗವಹಿಸುವುದೇ ಮುಖ್ಯ. ಕ್ರೀಡೆಯಿಂದ ಆರೋಗ್ಯವು ವೃದ್ದಿಯಾಗುವುದೇ ಅಲ್ಲದೆ ನಮ್ಮಲ್ಲಿನ ಒಗ್ಗಟ್ಟನ್ನು ಜಗತ್ತಿಗೆ ತೋರಿಸಿ ಕೊಡಬಹುದು ಎಂದು ಯಕ್ಷಗಾನ ಹಿರಿಯ ಕಲಾವಿದ ವಿಜಯ ಕುಮಾರ ಶೆಟ್ಟಿ ಹೇಳಿದರು.
ಅವರು ‘ಪಂಜಿನಡ್ಕ ಫ್ರೆಂಡ್ಸ್’ ವತಿಯಿಂದ ಪಂಜಿನಡ್ಕದಲ್ಲಿ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ನಡೆದ ಸಾರ್ವಜನಿಕರಿಗೆ ನಡೆದ ವಿವಿದ ಸ್ಪರ್ದೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಇದೇ ಸಂದರ್ಭ ವೇದಿಕೆಯಲ್ಲಿ ಮಾಜೀ ತಾ.ಪಂ.ಅಧ್ಯಕ್ಷ ರಂಗನಾಥ ಶೆಟ್ಟಿ,ಉದ್ಯಮಿಗಳಾದ ಸತೀಶ್ಚಂದ್ರ ಅಜಿಲ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಸಂತೋಷಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ ಪರಂಕಿಲ, ತೆಂಗಾಳಿ ಕಿಶೋರ್ ಶೆಟ್ಟಿ, ರವಿರಾಜಶೆಟ್ಟಿ ಜತ್ತಬೆಟ್ಟು, ಪತ್ರಿಕಾ ವಿತರಕರಾದ ಶ್ರೀಮಂತಕಾಮತ್, ವಾಸು ಸಾಲ್ಯಾನ್ ಪಂಜಿನಡ್ಕ ಮೊದಲಾದವರು ಉಪಸ್ಥಿತರಿದ್ದರು.

Kinnigoli10091312

Comments

comments

Comments are closed.

Read previous post:
Kinnigoli10091311
St.Peter’s Church-Konkani Kutam

Simon Lasrado St Peter’s Konkani Kutam(SPKK)celebrated Monthi Festh (Nativity of our Blessed Virgin Mary), at St.Peter’s Church, Rustum Bhagh Off...

Close