ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ

ಕಿನ್ನಿಗೋಳಿ: ಧಾರ್ಮಿಕ ಪ್ರಜ್ಞೆ ಮೂಡಿಸಲು ಹಾಗೂ ಸಂಘಟಿತರಾಗಲು ಪ್ರೇರಣೆ ನೀಡಿದ ಗಣೇಶೋತ್ಸವ ಇಂದು ದೇಶದ ಉದ್ದಗಲಕೂ ವ್ಯಾಪಿಸಿದ್ದು ಜನರು ಚಿತ್ತಚಾಂಚಲ್ಯತೆಗೆ ಒಳಗಾಗದೆ ಸೌಹಾರ್ದತೆಯಿಂದ ಧರ್ಮದ ಚೌಕಟ್ಟಿನೊಳಗೆ ಹಬ್ಬ ಆಚರಿಸಬೇಕು ಎಂದು ಧಾರ್ಮಿಕ ಚಿಂತಕ ಕೊಲಕಾಡಿ ವಾದಿರಾಜ ಉಪಾಧ್ಯಾಯರು ಕರೆಯಿತ್ತರು.
ಮಂಗಳವಾರ ನಡೆದ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸರ್ವ ಧರ್ಮ ಧಾರ್ಮಿಕ ಸಭೆಯಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.
ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಬಿ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ವೇದಮೂರ್ತಿ ವೇದವ್ಯಾಸ ತಂತ್ರಿ ಶಿಬರೂರು ಅವರನ್ನು ಸನ್ಮಾನಿಸಲಾಯಿತು. ಗಣಪತಿ ವಿಗ್ರಹ ತಯಾರಕ ಪದ್ಮನಾಭ ಸುರತ್ಕಲ್ ಅವರನ್ನು ಗೌರವಿಸಲಾಯಿತು.
ಕೆ.ಜೆ.ಎಂ. ಶಾಂತಿನಗರ ಖತೀಬ ಹಾಜಿ ಪಿ.ಜೆ ಅಹಮದ್ ಮದನಿ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರೊಸಾರಿಯೊ, ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೆ. ಸಲ್ಯಾನ್, ರೋಟರ‍್ಯಾಕ್ಟ್ ಅಧ್ಯಕ್ಷ ಪ್ರಣೀಲ್ ಹೆಗ್ಡೆ, ವಿಶ್ವಬ್ರಾಹ್ಮಣ ಸಮಾಜಸೇವಾ ಸಂಘ ಅಧ್ಯಕ್ಷ ಕೆ. ದಿನೇಶ್ ಆಚಾರ್ಯ, ಕೆ. ಭುವನಾಬಿರಾಮ ಉಡುಪ, ಪಿ. ಸತೀಶ್ ರಾವ್, ನಾಮದೇವ ಕಾಮತ್, ಶಂಕರ ಕೋಟ್ಯಾನ್, ಸಮಿತಿ ಕಾರ್ಯದರ್ಶಿ ದೇವದಾಸ್, ಸದಸ್ಯರುಗಳಾದ ಗಣೇಶ ಶೆಟ್ಟಿಗಾರ್, ಜಯಂತ ಕರ್ಕೆರಾ, ನಾರಾಯಣ, ಕುಮಾರ ಅಮೀನ್, ಸುಮೀತ್ ಕುಮಾರ್, ಧನಂಜಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-11091330

Comments

comments

Comments are closed.

Read previous post:
Kinnigoli-11091329
ಕೆಮ್ಮಡೆ ಗಣೇಶೋತ್ಸವ ಧಾರ್ಮಿಕ ಸಭೆ

ಕಿನ್ನಿಗೋಳಿ: ಕೆಮ್ಮಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸೋಮವಾರ ಧಾರ್ಮಿಕ ಸಭೆ ನಡೆಯಿತು. ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಮಂಜುನಾಥ ಮಲ್ಯ, sಬಿಜೆಪಿ ನಿಕಟಪೂರ್ವ ಕ್ಷೇತ್ರಾಧ್ಯಕ್ಷೆ ಕಸ್ತೂರಿ...

Close