ಕಟೀಲು : ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ 2013

ಕಟೀಲು : ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಮುಂಬಾಯಿ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ನ ಡಾ| ಸುರೇಶ್ ರಾವ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಫ್ರೌಢ ಶಾಲಾ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ದ.ಕ. ಜಿಲ್ಲಾ ಬಾಲ್ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಇವರ ಸಹಬಾಗಿತ್ವದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಬಾಲಕ ಬಾಲಕಿಯರ ಸಬ್ ಜ್ಯೂನಿಯರ್ ಬಾಲ್ ಬ್ಯಾಡ್ ಮಿಂಟನ್ ಲೀಗ್ ಚ್ಯಾಂಪಿಯನ್ ಶಿಪ್ ೨೦೧೩ ಉದ್ಘಾಟಿಸಿ ಮಾತನಾಡಿದರು.
ಯುವಜನಾ ಸೇವಾ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಚನಗೈದರು. ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ ಕ್ರೀಡಾಂಗಣ ಉದ್ಘಾಟಿಸಿದರು., ಪ್ರವೀಣ್ ಕುಮಾರ್ ಪ್ರಸ್ತಾವನೆಗೈದರು. ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತ ಮಹಾದೇವ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಉದ್ಯಮಿಗಳಾದ ಯಾದವಕೋಟ್ಯಾನ್, ಗಿರೀಶ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಸಂದೀಪ್ ಶೆಟ್ಟಿ, ರಾಜ್ಯ ಬಾಲ್ ಬ್ಯಾಡ್ ಮಿಂಟನ್ ಅಧ್ಯಕ್ಷ ಪ್ರಕಾಶ್ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿ ರಾಜರಾವ್, ಕಾರ್ಯದರ್ಶಿ ದಿನೇಶ್, ಕೋಶಾಧಿಕಾರಿ ಶಿವಣ್ಣ, ದ.ಕ. ಬಾಲ್ ಬ್ಯಾಡ್ ಮಿಂಟನ್ ಅಧ್ಯಕ್ಷ ಮಹಮ್ಮದ್ ಇಲ್ಯಾಸ್ ಕಟೀಲು ಫ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಉಪಸ್ಥಿತರಿದ್ದರು.
ಕಟೀಲು ಫ್ರೌಢ ಶಾಲಾ ಶಿಕ್ಷಕ ಕೆ.ವಿ ಶೆಟ್ಟಿ ವಂದಿಸಿ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ರಾಜ್ಯದ 45 ತಂಡಗಳು ದಾಖಲೆ ಸಂಖ್ಯೆಯಲ್ಲಿ ಕೂಟದಲ್ಲಿ ಭಾಗವಹಿಸಿದವು.

Nammakinnigoli-14091328

Nammakinnigoli-14091329

Nammakinnigoli-14091330

Nammakinnigoli-14091331

Nammakinnigoli-14091332

Comments

comments

Comments are closed.

Read previous post:
Nammakinnigoli-14091327
ಕೊಡೆತ್ತೂರು ನವರಾತ್ರಿ ಸಮಿತಿ ಅಧ್ಯಕ್ಷ ಗಣೇಶ ಶೆಟ್ಟಿ

ಕಿನ್ನಿಗೋಳಿ: ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಗಣೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಈಶ್ವರ ಕಟೀಲು, ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ, ಉಪಾಧ್ಯಕ್ಷರಾಗಿ ರಮೇಶ ಶೆಟ್ಟಿ, ಚಂದ್ರಹಾಸ...

Close