ಎಐಸಿಎಸ್ ಜಿಲ್ಲಾ ಖೋ-ಖೋ ಸ್ಪರ್ಧೆ

ಕಿನ್ನಿಗೋಳಿ: ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತಪೋವನದ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಶುಕ್ರವಾರ ಕೇಂದ್ರೀಯ ಪಠ್ಯ ಕ್ರಮದ ವಿದ್ಯಾ ಸಂಸ್ಥೆಗಳ ಒಕ್ಕೂಟದ (ಎಐಸಿಎಸ್) ಅಂತರ್‌ಜಿಲ್ಲಾ “ರಥೇರಾ” ಖೊ ಖೋ ಪಂದ್ಯಾಟ ನಡೆಯಿತು.

ಬಾಲಕರ ಸೀನಿಯರ್ ವಿಭಾಗದಲ್ಲಿ ಸಾಗರದ ಹೊಂಗಿರಣ ವಿದ್ಯಾ ಸಂಸ್ಥೆ ಹಾಗೂ ದ್ವಿತೀಯ ಪ್ರಶಸ್ತಿಯನ್ನು ಶಿರ್ತಾಡಿಯ ಬಿಜೆಆರ್‌ಎಸ್ ವಿದ್ಯಾ ಸಂಸ್ಥೆ, ಬಾಲಕಿಯರ ಸೀನಿಯರ್ ವಿಭಾಗದಲ್ಲಿ ಕಾವೂರಿನ ಬಿಜಿಎಸ್ ವಿದ್ಯಾ ಸಂಸ್ಥೆ ಪ್ರಥಮ ಹಾಗೂ ತಲಪಾಡಿಯ ಶಾರದಾ ವಿದ್ಯಾನಿಕೇತನ ವಿದ್ಯಾ ಸಂಸ್ಥೆ ಪ್ರಶಸ್ತಿ ಪಡೆದುಕೊಂಡಿತು.
ಬಾಲಕರ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ಸಾಗರದ ಹೊಂಗಿರಣ ವಿದ್ಯಾ ಸಂಸ್ಥೆ ದ್ವಿತೀಯ ಪ್ರಶಸ್ತಿಯನ್ನು ಬ್ರಹ್ಮಾವರದ ಎಸ್‌ಎಮ್‌ಇಎಸ್ ಪಡೆದುಕೊಂಡಿತು. ಬಾಲಕಿಯರ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ಸಾಗರದ ಹೊಂಗಿರಣ ವಿದ್ಯಾ ಸಂಸ್ಥೆ ದ್ವಿತೀಯ ಪ್ರಶಸ್ತಿಯನ್ನು ಅತಿಥೇಯ ಎಮ್‌ಆರ್‌ಎಸ್‌ಎಮ್ ತೋಕೂರು ವಿದ್ಯಾ ಸಂಸ್ಥೆಯು ಪಡೆದುಕೊಂಡಿತು.
ವೈಯಕ್ತಿಕ ಪ್ರಶಸ್ತಿಯನ್ನು ಚಂದ್ರಶೇಖರ್, ರಜತ್, ಪ್ರಜ್ವಲ್, ಸೌಮ್ಯ, ಯಶ್ವಿತಾ, ಪ್ರಾರ್ಥನಾ, ಶ್ರೀಶೈಲ್, ಇಂದ್ರಕುಮಾರ್, ಅಶ್ವಥ್ ನಾರಾಯಣ, ಮಾರ್ವಿನಾ, ಮೇಘಾ, ರೇಷ್ಮಾ ಪಡೆದುಕೊಂಡರು.
ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್.ಸಾಲಿಯಾನ್ ಪಂದ್ಯಾಟವನ್ನು ಉದ್ಘಾಟಿಸಿದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಶಿರ್ತಾಡಿಯ ಭುವನಜ್ಯೋತಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಪ್ರಶಾಂತ್ ಡಿಸೋಜಾ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜಾ ಪತ್ರಾವೋ, ನಿಟ್ಟೆ ಎನ್‌ಎಸ್ ಎಂನ ಪ್ರಿನ್ಸಿಪಾಲ್ ನೀತಾ ಕಿಶೋರ್, ಐಟಿಐನ ತರಬೇತಿ ಅಧಿಕಾರಿ ಲಕ್ಷ್ಮೀಕಾಂತ್, ಕ್ರೀಡಾ ಸಂಯೋಜಕ ಗಣೇಶ್ ಪೂಜಾರಿ, ಎಂಆರ್‌ಎಸ್‌ಎಂ ಪ್ರಿನ್ಸಿಪಾಲ್ ಶ್ರೀಲತಾ ರಾವ್, ಸುಧಾ ಹೆಗ್ಡೆ ಗೀತಾ ರೈ, ಆಶಾ ರಾಮದಾಸ್, ಸುಷ್ಮಾ ಕರ್ಕಡಾ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಟ್ಟು 21 ವಿದ್ಯಾ ಸಂಸ್ಥೆಗಳ 48 ತಂಡಗಳು ಭಾಗವಹಿಸಿದ್ದವು.

ಸಾಗರದ ಹೊಂಗಿರಣ, ಕಾವೂರಿನ ಬಿಜಿಎಸ್‌ಗೆ ರಥೇರಾ ಪ್ರಶಸ್ತಿ.

Nammakinnigoli-14091324

Nammakinnigoli-14091325

Comments

comments

Comments are closed.

Read previous post:
Nammakinnigoli-14091323
ಕಿನ್ನಿಗೋಳಿಯಲ್ಲಿ ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ: ವಿದ್ಯಾರ್ಥಿಗಳು ಯುವಜನತೆ ದುಶ್ಚಟಗಳಿಂದ ದೂರವಿದ್ದು ತಮ್ಮ ಆರೋಗ್ಯ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಶ್ರಮಿಸಬೇಕಾದ ಅಗತ್ಯವಿದೆ ಎಂದು ಮೂಲ್ಕಿ ಸರಕಾರಿ ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಹೇಳಿದರು....

Close