ಕಿನ್ನಿಗೋಳಿ : ಪೌಷ್ಟಿಕ ಆಹಾರ ಸಪ್ತಾಹ

ಕಿನ್ನಿಗೋಳಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಇವರ ಜಂಟೀ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ದಿನಾಚರಣೆ ಗುರುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಕಲ್ಪನಾ ಪೌಷ್ಟಿಕ ಆಹಾರದ ಮಾಹಿತಿ ಹಾಗೂ ಆರೋಗ್ಯ ಇಲಾಖೆಯ ನೇತ್ರಾವತಿ ಆರೋಗ್ಯ ಮತ್ತುನೈರ್ಮಲ್ಯತೆ ಬಗ್ಗೆ ಮಾಹಿತಿ ನೀಡಿದರು. ಸ್ತ್ರೀ ಶಕ್ತಿ ಸಂಘದ ಸದಸ್ಯರು ಅಡುಗೆಯಲ್ಲಿ ಬಳಸುವ ಔಷದಯುಕ್ತ ತರಕಾರಿ ಸಸ್ಯಗಳ ಪ್ರಾತ್ಯಕ್ಷಿತೆ ನೀಡಿದರು. ಯುಗಪುರುಷದ ಭುವನಾಭಿರಾಮ ಉಡುಪ, ತಾಲೂಕು ಪಂಚಾಯತ್ ಸದಸ್ಯೆ ಬೇಬಿ ಕೋಟ್ಯಾನ್, ಉಪಸ್ಥಿತರಿದ್ದರು.

Nammakinnigoli-14091326

Comments

comments

Comments are closed.

Read previous post:
Nammakinnigoli-14091325
ಎಐಸಿಎಸ್ ಜಿಲ್ಲಾ ಖೋ-ಖೋ ಸ್ಪರ್ಧೆ

ಕಿನ್ನಿಗೋಳಿ: ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತಪೋವನದ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಶುಕ್ರವಾರ ಕೇಂದ್ರೀಯ ಪಠ್ಯ ಕ್ರಮದ ವಿದ್ಯಾ ಸಂಸ್ಥೆಗಳ ಒಕ್ಕೂಟದ (ಎಐಸಿಎಸ್) ಅಂತರ್‌ಜಿಲ್ಲಾ...

Close