ಆಳ್ವಾಸ್‌ಗೆ ರಾಜ್ಯ ಮಟ್ಟದ ಬಾಲ್ ಬ್ಯಾಡ್ ಮಿಂಟನ್ ಪ್ರಶಸ್ತಿ

ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಫ್ರೌಢ ಶಾಲಾ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ದ.ಕ. ಜಿಲ್ಲಾ ಬಾಲ್ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಇವರ ಸಹಬಾಗಿತ್ವದಲ್ಲಿ ಶನಿವಾರ ಹಾಗೂ ಭಾನುವಾರ ನಡೆದ ರಾಜ್ಯ ಮಟ್ಟದ ಬಾಲಕ ಬಾಲಕಿಯರ ಸಬ್ ಜ್ಯೂನಿಯರ್ ಬಾಲ್ ಬ್ಯಾಡ್ ಮಿಂಟನ್ ಲೀಗ್ ಚ್ಯಾಂಪಿಯನ್ ಶಿಪ್ 2013ನಡೆಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ವಿಜೇತರಿಗೆ ಬಹುಮಾನ ವಿತರಿಸಿದರು. , ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ರಾಜ್ಯ ಬಾಲ್ ಬ್ಯಾಡ್ ಮಿಂಟನ್ ಪ್ರಧಾನ ಕಾರ್ಯದರ್ಶಿ ದಿನೇಶ್, ರಾಜರಾವ್, ಕಾರ್ಯದರ್ಶಿ ದಿನೇಶ್, ಕೋಶಾಧಿಕಾರಿ ಶಿವಣ್ಣ, ಕಟೀಲು ಫ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿ ಧನಂಜಯ ಶೆಟ್ಟಿಗಾರ್, ಮರವೂರು ಬೀಡು ಬಾಬು ಶೆಟ್ಟಿ, ಕಟೀಲು ದೇವಳ ಫ್ರೌಢಶಾಲಾ ಉಪ ಪ್ರಾಚಾರ್ಯ ಸುರೇಶ್ ಭಟ್, ಕೆ.ವಿ.ಶೆಟ್ಟಿ, ಸಾಯಿನಾಥ್ ಶೆಟ್ಟಿ, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ರಾಜ್ಯ ಮಟ್ಟದ 47 ಬಾಲಕ ಬಾಲಕಿಯರ ತಂಡಗಳು ಭಾಗವಹಿಸಿದ್ದರು. ಕೂಟದ ಅತ್ಯುತ್ತಮ ಆಟಗಾರ ಮತ್ತು ಆಟಗಾರ್ತಿ ಪ್ರಶಸ್ತಿಗಳನ್ನು ಮೂಡಬಿದಿರೆ ಆಳ್ವಾಸ್ ಫ್ರೌಢಶಾಲೆಯ ನಿಶಾಂತ್ ಹಾಗೂ ಲಾವಣ್ಯ ಪಡೆದುಕೊಂಡರು.

ಬಾಲಕಿಯರ ವಿಭಾಗ
1. ಆಳ್ವಾಸ್ ಫ್ರೌಢಶಾಲೆ ಮೂಡಬಿದಿರೆ.
2. ಜಯಾ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು
3. ಸ್ವರ್ಣಾಂಭ ಫ್ರೌಢಶಾಲೆ ಹೊನ್ನುಡಿಕೆ, ತುಮಕೂರು.
4. ಸರಕಾರಿ ಫ್ರೌಢ ಶಾಲೆ ಮೂಡಗಿಳಿಯಾರು ಕೋಟ ಉಡುಪಿ.

ಬಾಲಕರ ವಿಬಾಗ
1. ಆಳ್ವಾಸ್ ಫ್ರೌಢಶಾಲೆ ಮೂಡಬಿದಿರೆ.
2. ಎಸ್.ಬಿ.ವಿ.ಸಿ. ತುಮಕೂರು.

ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತ ಮಹಾದೇವ ಅವರು ಕೂಟದಲ್ಲಿ ಉತ್ತಮ ಸಾಧನೆಗೈದ ಆಟಗಾರ್ತಿ ಹಾಗೂ ಆಟಗಾರರಿಗೆ ಸ್ವಂತನೆಲೆಯಲ್ಲಿ ಬಹುಮಾನ ನೀಡಿದರು
ಉತ್ತಮ ಆಟಗಾರ್ತಿಯರು
ಚಿತ್ರಾ ಮತ್ತು ಸುಲೇಖಾ (ಮೂಡಗಿಳಿಯಾರು ಕೋಟ ಉಡುಪಿ). ಪಲ್ಲವಿ ಜಯಾ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು, ಕಾವ್ಯಾ ಹೊನ್ನುಡಿಕೆ ತುಮಕೂರು, ಲಾವಣ್ಯ ಆಳ್ವಾಸ್ ಫ್ರೌಢಶಾಲೆ ಮೂಡಬಿದಿರೆ.

ಉತ್ತಮ ಆಟಗಾರರು
ಹರ್ಷಿತ್ ಮತ್ತು ಕಾರ್ತಿಕ್ ಕಟೀಲು ದುರ್ಗಾಪರಮೇಶ್ವರಿ ದೇವಳ ಫ್ರೌಢ ಶಾಲೆ, ಪವನ್ ಎಸ್.ಬಿ.ವಿ.ಸಿ. ತುಮಕೂರು, ಶರತ್ ಮತ್ತು ಪ್ರಜ್ವಲ್ ಪಾಂಡವಪುರ.

Kinnigoli-15091303

 Kinnigoli-15091304 Kinnigoli-15091305 Kinnigoli-15091306 Kinnigoli-15091307 Kinnigoli-15091308

Comments

comments

Comments are closed.

Read previous post:
Kinnigoli-15091302
ಕಿನ್ನಿಗೋಳಿ : ಕರೋಕೆ ಗಾಯನ ಸ್ಪರ್ಧೆ

ಕಿನ್ನಿಗೋಳಿ : ಯುವ ಪ್ರತಿಭೆಗಳಿಗೆ ಸ್ಪೂರ್ತಿ ಹಾಗೂ ಉತ್ತಮ ವೇದಿಕೆ ಕಲ್ಪಿಸಿದಾಗ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳುತ್ತದೆ. ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು....

Close