ಏಳಿಂಜೆ ಉಚಿತ ವೈದ್ಯಕೀಯ ತಪಸಣಾ ಶಿಬಿರ

ಕಿನ್ನಿಗೋಳಿ : ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿಯಮಿತ ಆಹಾರ, ತಪಾಸಣೆ ನಡೆಸಿದಾಗ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ಸಂಘ ಸಂಸ್ಥೆಗಳು ಇಂತಹ ಸಮಾಜ ಉಪಯೋಗಿ ಕಾರ್ಯಗಳನ್ನು ಸಂಘಟಿಸಬೇಕು ಎಂದು ಕಿರೆಂ ಇಗರ್ಜಿ ಧರ್ಮಗುರು ರೆ|ಫಾ| ಪೌಲ್ ಪಿಂಟೊ ಹೇಳಿದರು.
ಶ್ರೀನಿವಾಸ ಆಸ್ಪತ್ರೆ ಮುಕ್ಕ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಏಳಿಂಜೆ ಶ್ರೀ ದೇವಿ ಮಹಿಳಾ ಮಂಡಲ , ಶ್ರೀ ನವಚೇತನ ಯುವಕ ಮಂಡಲ , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಲು ಉತ್ಪಾದಕರ ಸಹಕಾರ ಸಂಘ ಏಳಿಂಜೆ ಹಾಗೂ ಆಂಧತ್ವ ನಿವಾರಣಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏಳಿಂಜೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಶೀರ್ವಚನ ನೀಡಿ ಮಾತನಾಡಿದರು.
ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ ಅರ್ಚಕ ವೈ.ವಿ. ಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಮುಕ್ಕ ಶ್ರೀನಿವಾಸ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಭಾರ್ಗವ ರಾಮ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಜಗದೀಶ್ ಹೊಳ್ಳ , ಲಾರೆನ್ಸ್ ಫೆರ್ನಾಂಡಿಸ್, ಪ್ರಾನ್ಸಿಸ್ ಸೆರಾವೊ, ಶ್ರೀ ದೇವಿ ಮಹಿಳಾ ಮಂಡಲ ಅಧ್ಯಕ್ಷೆ ನಾಗಲಕ್ಷ್ಮೀ ಭಟ್, ಶ್ರೀ ನವಚೇತನ ಯುವಕ ಮಂಡಲ ಅಧ್ಯಕ್ಷ ಕೃಷ್ಣಮೂಲ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರೀಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಏಳಿಂಜೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯದರ್ಶಿ ನಾಗೇಶ್ ಉಪಸ್ಥಿತರಿದ್ದರು.

Kinnigoli-15091301

Comments

comments

Comments are closed.

Read previous post:
Nammakinnigoli-14091329
ಕಟೀಲು : ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ 2013

ಕಟೀಲು : ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಮುಂಬಾಯಿ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ನ ಡಾ| ಸುರೇಶ್ ರಾವ್ ಹೇಳಿದರು....

Close