ಮೂಲ್ಕಿ: ಜೀವನ ಮೌಲ್ಯ ಶಿಕ್ಷಣ ಶಿಬಿರ

ಮೂಲ್ಕಿ: ಮಾನವೀಯ ಗುಣ ಮೌಲ್ಯಗಳ ಸದೃಡ ಯುವ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ನೈತಿ ಆದ್ಯಾತ್ಮಿಕ ಶಿಕ್ಷಣ ಪೂರಕವಾಗುವುದು ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಜಿತಕಾಮಾನಂದಜೀ ಹೇಳಿದರು.
ಭಾನುವಾರ ಮೂಲ್ಕಿ ವಿಜಯಾ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಸಂಯೋಜನೆಯಲ್ಲಿ ನಡೆದ ಒಂದು ದಿನದ ಜೀವನ ಮೌಲ್ಯ ಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಕ.ಸಾಪ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು ಮಾತನಾಡಿ,ಇಂದಿನ ಶಿಕ್ಷಣ ಪದ್ದತಿಯಲ್ಲಿ ನೈತಿಕತೆ ಕಳೆದುಹೊಂಗಿ ಅಂಕಗಳಿಕೆ ಮಹತ್ವ ಪಡೆದ ಪರಿಣಾಮ ವಿದ್ಯಾವಂತ ಯುವ ಪೀಳಿಗೆಯ ವೃದ್ಧ ತಂದೆ ತಾಯಿ ಆಶ್ರಮ ವಾಸಿಗಳಾಗುತ್ತಿರುವಷ್ಟು ನೈತಿಕವಾಗಿ ಕುಸಿಯುತ್ತಿರುವ ಸಂದರ್ಭ ಜೀವನ ಮೌಲ್ಯ ಶಿಕ್ಷಣ ದಾರಿದೀಪವಾಗಲಿದೆ ಎಂದ ಅವರುತತ್ವ ಮತ್ತು ಸಿದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿದ ಮಾಹಾನ್ ವ್ಯಕ್ತಿಗಳಿಂದ ಮಾತ್ರ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್ ಕುಡ್ವಾ ವಹಿಸಿದ್ದರು
ಅತಿಥಿಗಳಾಗಿ ವಿಜಯಾ ಪದವಿ ಕಾಲೇಜು ಪ್ರಾಂಶುಮಾಲರಾದ ಪ್ರೊ.ಕೆ.ಆರ್.ಶಂಕರ್, ವದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ ಪಮೀದಾ ಬೇಗಂ,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ನಾರಾಯಣ, ಕಾರ್ಯಕ್ರಮ ಸಂಯೋಜಕರಾದ ಪ್ರೊ.ವಿಜಯಾ, ಪ್ರೊ.ನಾಗೇಶ್ ಶೆಣೈ, ಶಿಕ್ಷಕ ರಕ್ಷಕ ಸಂಘದ ಅಧಕ್ಷ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಜಿತಕಾಮಾನಂದಜೀಯವರು ನಿತ್ಯ ಜೀವನದಲ್ಲಿ ಆದ್ಯಾತ್ಮ,ರಮೇಶ್ ಕೆದಿಲಾಯ ರವರಿಂದ ಅಂತರಾತ್ಮನ ಅರ್ಥಶಾಸ್ತ್ರ,ವಿದ್ಯಾರ್ಥಿಗಳಿಂದ ಕೀರ್ಥನೆಗಳು ಮತ್ತು ಭಾವಗೀತೆಗಳು ಕಾಲೇಜು ವಿದ್ಯಾರ್ಥಿಗಳಿಂದ, ಭುವನೇಶ್ವರಿ ಹೆಗಡೆ ಯವರಿಂದ ನಗುವೇ ಜೀವನ, ಮುನಿರಾಜ ರೆಂಜಾಳ ರವರಿಂದ ರಾಷ್ಟ್ರಭಕ್ತಿ ಮತ್ತು ಯುವಶಕ್ತಿ ವಿಷಯವಾಗಿ ಮಾಹಿತಿ ನೀಡಿದರು.
ಪ್ರೊ.ಕೆ.ಆರ್ ಶಂಕರ್ ಸ್ವಾಗತಿಸಿದರು. ಪ್ರೊ.ಚೇತನಾ ಅತಿಥಿಗಳನ್ನು ಪರಿಚಯಿಸಿದರು,ಪ್ರೊ.ಅರುಣಾ ನಿರೂಪಿಸಿದರು. ಪ್ರೊ.ಪಮೀದಾ ಬೇಗಂ ವಂದಿಸಿದರು.

Kinnigoli-16091302

 

Comments

comments

Comments are closed.

Read previous post:
Kinnigoli-16091301
ಹಳೆಯಂಗಡಿ ಪರಿಸರ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮ

Narendra Kerekadu ಹಳೆಯಂಗಡಿ : ನಮ್ಮ ಪರಿಸರ ಸ್ವಚ್ಚ ಪರಿಸರ ಎಂಬ ಧ್ಯೇಯವನ್ನು ಪ್ರತಿಯೊಬ್ಬ ಜನಸಾಮಾನ್ಯನು ಕರ್ತವ್ಯ ಎಂಬಂತೆ ಪಾಲಿಸಿದರೆ ಆರೋಗ್ಯ, ಶುದ್ಧಗಾಳಿ ನಮಗೆ ಸಿಗುವಂತಾಗುತ್ತದೆ, ವಿದ್ಯಾರ್ಥಿಗಳು ಈ...

Close