ಹಳೆಯಂಗಡಿ ಪರಿಸರ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮ

Narendra Kerekadu

ಹಳೆಯಂಗಡಿ : ನಮ್ಮ ಪರಿಸರ ಸ್ವಚ್ಚ ಪರಿಸರ ಎಂಬ ಧ್ಯೇಯವನ್ನು ಪ್ರತಿಯೊಬ್ಬ ಜನಸಾಮಾನ್ಯನು ಕರ್ತವ್ಯ ಎಂಬಂತೆ ಪಾಲಿಸಿದರೆ ಆರೋಗ್ಯ, ಶುದ್ಧಗಾಳಿ ನಮಗೆ ಸಿಗುವಂತಾಗುತ್ತದೆ, ವಿದ್ಯಾರ್ಥಿಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಹಾಗೂ ಸಂಘ, ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಪರಸ್ಪರ ಕೈಜೋಡಿಸಿದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಿದೆ ಎಂದು ಹಳೆಯಂಗಡಿಯ ಶ್ರೀ ನಾರಾಯಣ ಸನಿಲ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಿರಿಜವ್ವ ಮೆಣಸಿನಕಾಯಿ ಹೇಳಿದರು.

ಹಳೆಯಂಗಡಿಯ ಲಯನ್ಸ್ ಕ್ಲಬ್ನ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಂಯೋಜನೆಯಲ್ಲಿ ಶನಿವಾರ ಹಳೆಯಂಗಡಿ ಪೇಟೆಯಲ್ಲಿ ನಡೆದ ಪರಿಸರ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪೂರ್ಣಿಮಾ ಮಧು ಡೊಲು ಬಾರಿಸುವ ಮೂಲಕ ವಿಶೇಷವಾಗಿ ಜಾಥಾಕ್ಕೆ ಚಾಲನೆ ನೀಡಿದರು.
ಹಳೆಯಂಗಡಿ ಗ್ರಾಮ ಪಂಚಾಯತ್ ಹಳೆಯಂಗಡಿ, ಲಯನ್ಸ್ ಕ್ಲಬ್ ಹಳೆಯಂಗಡಿ, ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ನಾರಾಯಣ ಸನಿಲ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯಂಗಡಿ ಇದರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಪರಿಸರ ಸಂರಕ್ಷಣೆಯ ಬಗ್ಗೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆಸಲಾದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಹಳೆಯಂಗಡಿ ಲಯನ್ಸ್ ಅಧ್ಯಕ್ಷ ಜಯಾನಂದ ಸುವರ್ಣ, ನಿಕಟಪೂರ್ವ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್, ಭಾಸ್ಕರ ಸಾಲ್ಯಾನ್, ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿಗಳಾದ ಪ್ರೇಮನಾಥ ಶೆಟ್ಟಿಗಾರ್, ಮಾಲತಿ, ಪಂಚಾಯಿತಿಯ ಉಪಾಧ್ಯಕ್ಷ ಅಬ್ದುಲ ಖಾದರ್, ಸದಸ್ಯರಾದ ಸುಜಾತ ವಾಸುದೇವ, ಬಶೀರ್, ಉಪನ್ಯಾಸಕರಾದ ಕೃಷ್ಣ, ದಿನಕರ್, ಗ್ರೆಟ್ಟಾ ಮೊರಾಸ್ ಹಾಜರಿದ್ದರು.
ಹಳೆಯಂಗಡಿ ಪದವಿ ಪೂರ್ವ ಕಾಲೇಜಿನಿಂದ ಹೊರಟ ಜಾಥಾವು ಹರಿದಾಸ್ ಭಟ್ ರಸ್ತೆಯ ಮೂಲಕ ಸಾಗಿ ಹಳೆಯಂಗಡಿ ಮುಖ್ಯ ರಸ್ತೆಯಲ್ಲಿ ನಡೆದು, ಮುಖ್ಯ ಪೇಟೆಯಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿ ಜನರ ಗಮನ ಸೆಳೆಯಿತು. ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಪರಿಸರ ಗೀತೆಯ ಮೂಲಕ ಹಾಗೂ ಘೋಷಣಾ ಫಲಕಗಳನ್ನು ಪ್ರದರ್ಶಿಸುವುದರ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು.

Kinnigoli-16091301

 

Comments

comments

Comments are closed.

Read previous post:
Kinnigoli-15091303
ಆಳ್ವಾಸ್‌ಗೆ ರಾಜ್ಯ ಮಟ್ಟದ ಬಾಲ್ ಬ್ಯಾಡ್ ಮಿಂಟನ್ ಪ್ರಶಸ್ತಿ

ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಫ್ರೌಢ ಶಾಲಾ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ದ.ಕ. ಜಿಲ್ಲಾ ಬಾಲ್ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಇವರ...

Close