ಮಂಗಳೂರು ತಾ. ಮಟ್ಟ ಗ್ರಾಮಾಂತರ ಪ..ಪೂರ್ವ ಕಾಲೇಜು ತ್ರೋಬಾಲ್

ಕಿನ್ನಿಗೋಳಿ : ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಮಂಗಳೂರು ತಾಲೂಕು ಮಟ್ಟದ ಗ್ರಾಮಾಂತರ ಪದವಿಪೂರ್ವ ಕಾಲೇಜುಗಳ ಪುರುಷರ ತ್ರೋಬಾಲ್ ಪಂದ್ಯಾಟದಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಹಾಗೂ ವಾಮಂಜೂರು ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. 20 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು.
ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ತಂಡ ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ತಂಡದ ವಿರುದ್ಧ 26-24, 26-24 ನೇರ ಸೆಟ್‌ಗಳಿಂದ ವಿಜಯ ಗಳಿಸಿತು.
ಮಹಿಳೆಯರ ವಿಭಾಗದಲ್ಲಿ ಉಳ್ಳಾಲ ಭಾರತ್ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಹಾಗೂ ವಾಮಂಜೂರು ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಭಾರತ್ ಪದವಿ ಪೂರ್ವ ಕಾಲೇಜು ತಂಡ ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ತಂಡದ ವಿರುದ್ಧ 25-17, 25-21 ನೇರ ಸೆಟ್‌ಗಳಿಂದ ವಿಜಯ ಗಳಿಸಿತು.

ದಾಮಸ್ ಕಟ್ಟೆ ಮಿಲೇನಿಯಂ ಗ್ಲೋಬಲ್ ಸರ್ವೇಯರ‍್ಸ್ ಮಾಲೀಕ ಸಿಲ್ವೆಸ್ಟರ್ ಮಿರಾಂದ ಪಂದ್ಯಾಟವನ್ನು ಉದ್ಘಾಟಿಸಿದರು. ಪೊಂಪೈ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ರೆ.ಪಾ| ಪೌಲ್ ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ರೆ.ಫಾ| ಜೆರೋಮ್ ಡಿಸೋಜ ಹಾಗೂ ಮುಲ್ಕಿ ಪೋಲಿಸ್ ಅಧಿಕಾರಿ ಚಂದ್ರಹಾಸ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು,
ಐಕಳ ದಾಮಸ್‌ಕಟ್ಟೆ ವಿಜಯಾ ಬ್ಯಾಂಕ್ ಶಾಖಾ ಪ್ರಬಂದಕ ಎಡ್ರಿಚ್ ಡಿಸೋಜ, ಪತ್ರಕರ್ತ ಶರತ್ ಶೆಟ್ಟಿ ದಕ್ಷಿಣ ಕನ್ನಡ ಪ.ಪೂ. ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಪ.ಪೂ. ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಮೂಡಬಿದ್ರಿ ಜೈನ್ ಪ.ಪೂ. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ನವೀನ್, ಉಪನ್ಯಾಸಕ ಅನಂತ ಮೂಡಿತ್ತಾಯ, ಲಕ್ಷ್ಮೀಶ ಶಾಸ್ತ್ರಿ, ಪೊಂಪೈ ಪ. ಪೂ. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾದ ಆಲ್ವಿನ್ ಮಿರಾಂದ ಮತ್ತು ಸುದೀರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

  Kinnigoli-17091305

Kinnigoli-17091304

Kinnigoli-17091302

Kinnigoli-17091303

Comments

comments

Comments are closed.

Read previous post:
Kinnigoli-17091301
ಕಿನ್ನಿಗೋಳಿಯಲ್ಲಿ ನಮೋ ಬಿಗ್ರೇಡ್

ಕಿನ್ನಿಗೋಳಿ : ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಯ್ಕೆಯಾಗಿರುವುದನ್ನು ಬೆಂಬಲಿಸಿ, ಕಿನ್ನಿಗೋಳಿಯಲ್ಲಿ ನಮೋಬಿಗ್ರೇಡ್ ಸಂಘಟನೆ ಕಾರ್ಯಕರ್ತರು ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಸೋಮವಾರ...

Close