ಮಹಿಳಾ ಸಾಹಿತಿಗಳೊಂದಿಗೆ ಮಾತು- ಸಂವಾದ

ಕಿನ್ನಿಗೋಳಿ: ಸಾಹಿತ್ಯದ ಬಗ್ಗೆ ಯುವ ಜನಾಂಗ ಅಭಿರುಚಿ ಬೆಳೆಸಬೇಕು. ಯೋಚನಾ ಶಕ್ತಿ ಮತ್ತು ಮಾನಸಿಕ ನೆಮ್ಮದಿ ಸಾಹಿತ್ಯವನ್ನು ಓದಿ, ಅರ್ಥೈಸಿದಾಗ ದೊರಕುತ್ತದೆ. ಎಂದು ಹಿರಿಯ ಸಾಹಿತಿ ಗಂಗಾ ಪಾದೆಕಲ್ ಹೇಳಿದರು
ದ. ಕ. ಉಡುಪಿ ಮತ್ತು ಕಾಸರಗೋಡು ಕರಾವಳಿ ಲೇಖಕಿಯರ – ವಾಚಕಿಯರ ಸಂಘ ಹಾಗೂ ಕಟೀಲು ದೇವಳ ಕಾಲೇಜಿನ ಸಾಹಿತ್ಯ ಸಂಘದ ಜಂಟೀ ಆಶ್ರಯದಲ್ಲಿ ಶನಿವಾರ ಕಟೀಲು ದೇವಳ ಪದವಿ ಕಾಲೇಜು ಸಭಾಂಗಣದಲ್ಲಿ ನಡೆದ “ಮಹಿಳಾ ಸಾಹಿತಿಗಳೊಂದಿಗೆ ಮಾತು ಸಂವಾದ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಕೆ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ತುಳು – ಕನ್ನಡ ಸಾಹಿತಿ ಜಾನಕಿ ಎಂ. ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ವ್ಯಕ್ತಿ ಮತ್ತು ಸಮಾಜವನ್ನು ಪರಿಚಯಿಸುವ ಕೆಲಸ ಸಾಹಿತ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ಕೇವಲ ಪಾಠದ ವಿಷಯಗಳಲ್ಲದೆ, ಸಾಹಿತ್ಯ ಹಾಗೂ ಪತ್ರಿಕೆಗಳನ್ನು ಓದಿ ಜ್ಞಾನ ಹೆಚ್ಚಿಸಿ ಸಮಾಜದ ಒಳಿತಿಗಾಗಿ ಸಹಕರಿಸಬೇಕು ಎಂದು ಹಿರಿಯ ಸಾಹಿತಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತೆ ಸಾರಾ ಅಬೂಬಕ್ಕರ್ ಹೇಳಿದರು. ಕಾಲೇಜಿ ಸಾಹಿತ್ಯ ಸಂಘದ ಸಂಚಾಲಕ ಡಾ| ಸುರೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಲಲಿತಾ ಕಾರ್ಯಕ್ರಮ ನಿರೂಪಿಸಿದರು.

Kinnigoli23091302

Comments

comments

Comments are closed.

Read previous post:
Kinnigoli23091304
ರಾಜಸ್ತಾನದ ಬಿಕಾನೇರ್ ಜಿ. ಪಂ. ಆಯೋಗ ಕಿನ್ನಿಗೋಳಿಗೆ ಭೇಟಿ

ಕಿನ್ನಿಗೋಳಿ : ರಾಜಸ್ತಾನದ ಬಿಕಾನೇರ್ ಜಿಲ್ಲಾ ಪಂಚಾಯಿತಿ ಸದಸ್ಯರ ಆಯೋಗ ಹಾಗೂ ಇಲಾಖಾಧಿಕಾರಿಗಳು ಶುಕ್ರವಾರ ಕಿನ್ನಿಗೊಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆ...

Close