ಕಿನ್ನಿಗೋಳಿ ಹೈನುಗಾರಿಕಾ ತರಬೇತಿ ಶಿಬಿರ

ಕಿನ್ನಿಗೋಳಿ: ಯುವ ಜನರನ್ನು ಹೈನುಗಾರಿಕೆಯತ್ತ ಸೆಳೆದು ಆಧುನಿಕ ರೀತಿಯ ಹೈನುಗಾರಿಕೆಯನ್ನು ಮಾಡಿದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು, ಹಾಗೂ ಇತ್ತೀಚೆಗಿನ ದಿನಗಳಲ್ಲಿ ಹೈನುಗಾರಿಕೆಯು ಉದ್ದಿಮೆಯಾಗಿ ಬೆಳೆಯುತ್ತಿದೆ. ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಹೈನು ರಾಸು ನಿರ್ವಹಣಾ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮೂಲಕ ನಡೆಯುತ್ತಿರುವ ಎರಡು ದಿನದ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ನಾಲ್ಕು ಜನ ಹಾಲು ಉತ್ಪಾದಕರಿಗೆ ಹಾಗೂ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.
ಕೆ.ಎಂ.ಎಫ್.ಮೈಸೂರು ತರಬೇತಿ ಸಂಸ್ಥೆಯ ಡಾ| ರಾಜೀವ ಶೆಟ್ಟಿ, ಸಿ.ಕೆ. ದೇವರಾಜ್, ದ.ಕ. ಹಾಲು ಒಕ್ಕೂಟದ ಡಾ| ಚಂದ್ರಶೇಖರ ಭಟ್ ತರಬೇತಿ ನೀಡಿದರು.
ವಾಣಿ ವೈ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ದ.ಕ. ಹಾಲು ಒಕ್ಕೂಟ ಸಹಾಯಕ ವ್ಯವಸ್ಥಾಪಕ ಕೆ. ಸುಬ್ಬರಾವ್ ಮತ್ತಿತರರು ಉಪಸ್ಥಿತರಿದ್ದರು,

Comments

comments

Comments are closed.

Read previous post:
Kinnigoli23091301
ತೋಕೂರು : ಇಂಜಿನಿಯರ‍್ಸ್ ಡೇ

ಕಿನ್ನಿಗೋಳಿ: ಮುಲ್ಕಿ ರಾಮಕೃಷ್ಟ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು, ತಪೋವನ ಕಾಲೇಜು ಆವರಣದಲ್ಲಿ ಸರ್. ಎಂ.ವಿಶ್ವೇಶ್ವರಯ್ಯನವರ ಜನ್ಮ ಪ್ರಯುಕ್ತ ಸೋಮವಾರ ಇಂಜಿನಿಯರ‍್ಸ್ ದಿನವನ್ನಾಗಿ ಆಚರಿಸಲಾಯಿತು. ಈ...

Close