ಚಾಕೋಲೇಟ್‌ನ ಗಿಫ್ಟ್ ಪ್ಯಾಕ್‌ನಲ್ಲಿ ಹುಳ ಪತ್ತೆ..?

Narendra Kerekadu
ಮೂಲ್ಕಿ: ಮೂಲ್ಕಿ ಬಳಿಯ ಕಾರ್ನಾಡುವಿನ ದರ್ಗಾರಸ್ತೆಯ ನಿವಾಸಿಯೊಬ್ಬರು ಖರೀದಿಸಿದ ಚಾಕಲೇಟ್ ಗಿಫ್ಟ್ ಪ್ಯಾಕ್‌ನಲ್ಲಿ ಹುಳ ಪತ್ತೆಯಾಗಿದ್ದು ಈ ಬಗ್ಗೆ ಅಂಗಡಿ ಮಾಲೀಕರಿಗೂ ಗ್ರಾಹಕರಿಗೂ ಮಾತಿನ ಚಕಮಕಿ ನಡೆದ ಘಟನೆ ಭಾನುವಾರ ಸಂಜೆ ನಡೆದಿದೆ.
ಕಾರ್ನಾಡುವಿನ ಮುಖ್ಯರಸ್ತೆಯಲ್ಲಿರುವ ನ್ಯಾಷನಲ್ ಬೇಕರಿಯಲ್ಲಿ ದರ್ಗಾರಸ್ತೆಯ ನಿವಾಸಿ ಹನೀಫ್ ಎಂಬುವರು 50ರೂ. ಕೊಟ್ಟು ಚಾಕಲೇಟ್‌ನ ಗಿಫ್ಟ್ ಬಾಕ್ಸ್‌ನ್ನು ಖರೀದಿಸಿದ್ದರು. ಅದನ್ನು ಮನೆಯಲ್ಲಿ ಬಿಚ್ಚಿ ನೋಡಿದಾಗ ಚಾಕಲೇಟ್ ಹಾಗೂ ಜೇಮ್ಸ್‌ನಲ್ಲಿ ಹುಳಗಳು ಹರಿದಾಡುತ್ತಿದ್ದುದು ಕಂಡು ಬಂದಿತು. ಈ ಹಿನ್ನಲೆಯಲ್ಲಿ ಅಂಗಡಿ ಮಾಲೀಕರಲ್ಲಿ ವಿಚಾರಿಸಿದಾಗ ನೀವು ಬೇಕಾದರೆ ಕಂಪೆನಿಗೆ ದೂರು ನೀಡಿ ಎಂದು ಉಡಾಫೆಯ ಉತ್ತರ ನೀಡಿದ್ದರಿಂದ ಹನೀಫ್ ಹಾಗೂ ಅಂಗಡಿ ಮಾಲೀಕರಿಗೂ ಮಾತಿನ ಚಕಮಕಿ ನಡೆದು ಕೊನೆಗೆ ಸ್ಥಳೀಯ ಇತರ ಅಂಗಡಿಯವರು ಸಮಾಧಾನಿಸಿದರು.
ಈ ಬಗ್ಗೆ ತಾನು ಮೂಲ್ಕಿ ನಗರ ಪಂಚಾಯಿತಿಯ ಆರೋಗ್ಯ ವಿಭಾಗಕ್ಕೆ ಹಾಗೂ ಸಚಿವರಿಗೂ ದೂರು ನೀಡಿ ಕ್ರಮ ಕೈಗೊಳ್ಳಲು ಅಗ್ರಹಿಸುತ್ತೇನೆ ಎಂದು ಹನೀಫ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ. ಹುಳ ತುಂಬಿದ ಚಾಕಲೇಟ್‌ನ ಬಗ್ಗೆ ಉತ್ತರಿಸಲು ಅಂಗಡಿ ಮಾಲೀಕರು ನಿರಾಕರಿಸಿದರು.

Kinnigoli24091305

 

Comments

comments

Comments are closed.

Read previous post:
Kinnigoli24091304
ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ವಾರ್ಷಿಕ ಮಹಾಸಭೆ

Narendra Kerekadu ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಈ ಕಾಲದಲ್ಲಿ ಮಕ್ಕಳಲ್ಲಿ  ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಕಾಳಜಿ ವಹಿಸುವುದು...

Close