ಮೂಲ್ಕಿ ಬಂಟರ ಕೆಸರುಗದ್ದೆ ಕ್ರೀಡೋತ್ಸವ

Narendra Kerekadu
ಮೂಲ್ಕಿ : ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿ ಕೃಷಿ ಮಾಯವಾಗುತ್ತಿದೆ ಕೆಸರಿನಲ್ಲಿ ಈ ಹಿಂದೆ ಹಿರಿಯರು ದುಡಿದು ಬೆಳೆ ಬೆಳಯುತ್ತಿದ್ದುದನ್ನು ನೆನಪಿಸಿಕೊಂಡು ಸಂಘಟನೆಯನ್ನು ಒಗ್ಗಟ್ಟಿನಲ್ಲಿರಿಸಬೇಕು ಇದಕ್ಕೆ ಕೆಸರುಗದ್ದೆ ಸ್ಪರ್ದೆಗಳು ಪೂರಕ ಎಂದು ಮೂಲ್ಕಿ ಸೀಮೆ ಅರಸು ಶ್ರೀ ದುಗ್ಗಣ್ಣ ಸಾವಂತ ಹೇಳಿದರು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಬಳಿಯ ಕೆಸರುಗದ್ದೆಯ ದೇವು ಪೂಂಜಾ ಚಾವಡಿಯಲ್ಲಿ ಭಾನುವಾರ ಮೂಲ್ಕಿ ವ್ಯಾಪ್ತಿಯ 32 ಗ್ರಾಮಗಳನ್ನೊಳಗೊಂಡ ಬಂಟರ ಸಂಘದ ಆಶ್ರಯದಲ್ಲಿ ನಡೆದ ಬಂಟಸಮಾಜ ಬಾಂಧವರ ಕೆಸರುಗದ್ದೆಕ್ರೀಡೋತ್ಸವ- 2013ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು
ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಉದ್ಯಮಿಅರವಿಂದ ಪೂಂಜಾಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಸಂಘದಅಧ್ಯಕ್ಷ ಸಂತೋಷ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಚಿವ ಅಭಯಚಂದ್ರ ಜೈನ್,ಮಾಜಿ ಸಚಿವ ಅಮರನಾಥ ಶೆಟ್ಟಿ,ಸಂಸದ ನಳಿನ್ ಕುಮಾರ ಕಟೀಲು, ಜಯಪಾಲಶೆಟ್ಟಿ,ಪದ್ಮಾವತಿ ಹರಿ ಪೂಂಜಾ,ಮುಂಬೈ ಉದ್ಯಮಿ ಭುಜಂಗ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಪುರುಷೋತ್ತಮ ಶೆಟ್ಟಿ, ಸಾವಿತ್ರಿಎಸ್ ಶೆಟ್ಟಿ, ಸುಂದರ ಶೆಟ್ಟಿ, ರಾಜೇಶ್‌ಕುಮಾರ್ ಶೆಟ್ಟಿ, ಮಲ್ಲಿಕಾ ಜೆ. ಪೂಂಜಾ, ರಂಗ ಕರ್ಮಿ ಶರತ್ ಶೆಟ್ಟಿ ಕಿನ್ನಿಗೋಳಿ ಮುಖ್ಯ ಅತಿಥಿಗಳಾಗಿದ್ದರು.
ನವೀನ್‌ಕುಮಾರ್‌ಎಡ್ಮೆಮಾರ್‌ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ಅಗೋಳಿ ಮಂಜಣ್ಣಕರೆಯಲ್ಲಿ ಕಂಬಳ ಕೋಣಓಡಿಸುವ ಮೂಲಕ ಕ್ರೀಡಾಕೂಟ ಆರಂಭಗೊಂಡಿತು.

Kinnigoli24091302

Kinnigoli24091303

Comments

comments

Comments are closed.