ಮೂಲ್ಕಿ – ಪೌರ ಕಾರ್ಮಿಕರ ದಿನಾಚರಣೆ

Prakash Suvarna
ಮೂಲ್ಕಿ : ಪೌರ ಕಾರ್ಮಿಕರು ನಗರದ ಶುಚಿತ್ವವನ್ನು ಮಾಡಿ ನಗರವನ್ನು ಸುಂದರವಾಗಿಡಲು ಕರ್ತವ್ಯ ನಿರ್ವಹಿಸುತ್ತಾರೆ. ಇವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ನಗರ ಪಂಚಾಯತಿನಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹೇಳಿದರು.
ನಗರ ಪಂಚಾಯತ್ ವತಿಯಿಂದ ಖಾಯಂ ನೌಕರರಾದ ಬಿ. ಸುಂದರ, ಸ್ಯಾನಿಟರಿ ಸುಪರ್‌ವೈಸರ್, ಪೌರ ಕಾರ್ಮಿಕರಾದ ಶಿವ, ಕೃಷ್ಣ, ಶಂಕರ, ಬೊಳ್ಳು ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಸದಸ್ಯರಾದ ಹಸನಬ್ಬ, ರಮಣಿ ಉಪಸ್ಥಿತರಿದ್ದರು.
ನಗರ ಪಂಚಯತ್ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲಿಯಾನ್ ಸ್ವಾಗತಿಸಿದರು. ಸಮುದಾಯ ಸಂಘಟನಾ ಅಧಿಕಾರಿ ವಾಣಿ ವಿ. ಆಳ್ವ ವಂದಿಸಿದರು.

Kinnigoli24091306

Comments

comments

Comments are closed.

Read previous post:
Kinnigoli24091305
ಚಾಕೋಲೇಟ್‌ನ ಗಿಫ್ಟ್ ಪ್ಯಾಕ್‌ನಲ್ಲಿ ಹುಳ ಪತ್ತೆ..?

Narendra Kerekadu ಮೂಲ್ಕಿ: ಮೂಲ್ಕಿ ಬಳಿಯ ಕಾರ್ನಾಡುವಿನ ದರ್ಗಾರಸ್ತೆಯ ನಿವಾಸಿಯೊಬ್ಬರು ಖರೀದಿಸಿದ ಚಾಕಲೇಟ್ ಗಿಫ್ಟ್ ಪ್ಯಾಕ್‌ನಲ್ಲಿ ಹುಳ ಪತ್ತೆಯಾಗಿದ್ದು ಈ ಬಗ್ಗೆ ಅಂಗಡಿ ಮಾಲೀಕರಿಗೂ ಗ್ರಾಹಕರಿಗೂ ಮಾತಿನ ಚಕಮಕಿ...

Close