ಮೂಲ್ಕಿ: ವಿರಾಟ್ ವಿಶ್ವಕರ್ಮವತಿಯಿಂದ ಸನ್ಮಾನ

Bhagyawan Sanil

ಮೂಲ್ಕಿ : ಗ್ರಾಮೀಣ ಬಡವರ್ಗದ ಜನರ ಆರೋಗ್ಯ ಮತ್ತು ವಿದ್ಯೆಗಾಗಿ ಸಹಕರಿಸುತ್ತಾ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಜನರನ್ನು ಗುರುತಿಸಿ ಗೌರವಿಸುವುದು ಪ್ರತೀಯೊಬ್ಬನ ಆದ್ಯ ಕರ್ತವ್ಯವಾಗಿದೆ ಎಂದು ಹಳೆಯಂಗಡಿ ಸ್ವರ್ಣೋಧ್ಯಮಿ ಸೂರ್ಯಕುಮಾರ್ ಬಿ. ಹೇಳಿದರು.
ಮೂಲ್ಕಿ ವಿಶ್ವಬ್ರಾಹ್ಮಣ ಸಮಾಜ ಸಭಾ ಆಶ್ರಯದಲ್ಲಿ ನಡೆದ ವಿರಾಟ್ ವಿಶ್ವಕರ್ಮ ಪೂಜೆಯ ಕಾರ್ಯಕ್ರಮದ ಸಂದರ್ಭ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿನ ಅರ್ಹ ಬಡ ಜನರನ್ನು ಗುರುತಿಸಿ ಸರ್ಕಾರದ ಸವಲತ್ತುಗಳನ್ನು ಸರಿಯಾದ ಸಮಯದಲ್ಲಿ ಒದಗಿಸುವ ಕಾರ್ಯವೂ ಅತ್ಯುತ್ತಮ ಸಮಾಜ ಸೇವೆ ಎನಿಸುತ್ತದೆ ಎಂದರು. ಹರ್ಷರಾಜ್ ಶೆಟ್ಟಿ ಜಿ.ಎಂ ಇವರನ್ನು ಇವರು ಸಮಾಜಕ್ಕೆ ನೀಡಿದ ಅಮೂಲ್ಯ ಸೇವೆಗಾಗಿವಿಶ್ವಬ್ರಾಹ್ಮಣ ಸಮಾಜ ಸಭಾ ಮೂಲ್ಕಿ ಇದರ ವತಿಯಿಂದ ಸ್ವರ್ಣೋಧ್ಯಮಿ ಸೂರ್ಯ ಕುಮಾರ್ ಬಿ ಸನ್ಮಾನಿಸಿದರು. ಈ ಸಂದರ್ಭ ಸಭಾದ ಅಧ್ಯಕ್ಷ ಮಧು ಆಚಾರ್ಯ, ಉಪಾಧ್ಯಕ್ಷ ಜಯಶೀಲ ಆಚಾರ್ಯ, ಕಾರ್ಯದರ್ಶಿ ರವಿಚಂದ್ರ ಆಚಾರ್ಯ, ಕೋಶಾಧಿಕಾರಿ ದಿವಾಕರ ಆಚಾರ್ಯ, ಮಹೇಶ್ ಆಚಾರ್ಯ, ಉಪೇಂದ್ರ ಆಚಾರ್ಯ, ಗುಂಡಾಚಾರ್ಯ, ಭಾಸ್ಕರ ಆಚಾರ್ಯ, ಉಮೇಶ ಆಚಾರ್ಯ, ಹರೀಶ್ ಜೆ. ಆಚಾರ್ಯ, ಜಗದೀಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ನಾಗರಾಜ್ ಆಚಾರ್ಯ ಇವರು ಸನ್ಮಾನಿತರ ಸೇವೆಯ ಬಗ್ಗೆ ಸಭೆಗೆ ತಿಳಿಸಿ ಪರಿಚಯಿಸಿದರು.

Kinnigoli24091301

Comments

comments

Comments are closed.

Read previous post:
Kinnigoli23091305
Happy Birthday

Dear daughter Michu Baba Happy Birthday to the most lovable and adorable star on this planet. May your birthday bring you...

Close