ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ವಾರ್ಷಿಕ ಮಹಾಸಭೆ

Narendra Kerekadu
ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಈ ಕಾಲದಲ್ಲಿ ಮಕ್ಕಳಲ್ಲಿ  ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಕಾಳಜಿ ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸಸಿಹಿತ್ಲು ಶ್ರೀ. ಭಗವತೀ ದೇವಸ್ಥಾನದ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿಯವರು ತಿಳಿಸಿದರು.
ಅವರು ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ, ಕದಿಕೆ ಭಂಡಾರ ಮಂದಿರ, ಹಳೆಯಂಗಡಿ ಇದರ 5 ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನಗೈದರು.

ಸಸಿಹಿತ್ಲು ಶ್ರೀ. ಭಗವತೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ ಇಡ್ಯಾ ಮಾತನಾಡಿ, ಸಮಾಜಪರ ಚಟುವಟಿಕೆಗಳು ಸಂಘ ಸಂಸ್ಥೆಗಳ ಬುನಾದಿ. ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಇಚ್ಛಾಶಕ್ತಿ, ಸಾಮರ್ಥ್ಯ ಮತ್ತು ಹಿರಿಯರಲ್ಲಿ ಗೌರವ ಅಗತ್ಯ ಇದನ್ನು ಎಲ್ಲಾ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಉದ್ಯಮಿ ವಿಶು ಕುಮಾರ್ ಈ ದಿನಗಳಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ಮಕ್ಕಳಿಗೆ ಪ್ರೋತ್ಸಾಹದ ಕೊರತೆಯಿಲ್ಲ, ಈಗ ಸಮಾಜದಲ್ಲಿ ಅನೇಕ ಸಂಘ ಸಂಸ್ಥೆಗಳು ವಿದ್ಯಾರ್ಜನೆ ಬಯಸುವ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ನೀಡುತ್ತಿವೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಉತ್ತಮ ಸಾಧನೆ ಮಾಡಿ ತೋರಿಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಸಸಿಹಿತ್ಲು ಮೇಳದ ಪ್ರಸಿದ್ದ ಯಕ್ಷಗಾನ ಕಲಾವಿದ ಉಮೇಶ್ ಕೊಳಂಬೆಯವರನ್ನು ಹಾಗೂ ಸಾಹಿತಿ ಕಿರಣ್  ಕೊಕುಡೆಯವರನ್ನು ಸನ್ಮಾನಿಸಲಾಯಿತು ಹಾಗೂ 40 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಟ್ಟು 25,000/-ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಸಂಘದ ಗೌರವ ಅಧ್ಯಕ್ಷ ಶೀನಸ್ವಾಮಿ ಕಾಪಿಕಾಡು, ಗುರಿಕಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಗೀತಾ. P. ಕುಮಾರ್ ಅವರು ಸತತ 6ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ರಮೇಶ್ ಬಂಗೇರ ಹಾಗೂ ಕೋಶಾಧಿಕಾರಿಯಾಗಿ ಕಿರಣ್ ಸಾಲಿಯಾನ್ ಪುನರಾಯ್ಕೆಯಾದರು.

ರಾಜೇಶ್ವರಿ ಸ್ವಾಗತಿಸಿ, ಜ್ಯೋತಿ ವಂದಿಸಿದರು, ರೋಹಿತ್ ಕಾರ್ಯಕ್ರಮ ನಿರೂಪಿಸಿದರು.

Kinnigoli24091304

 

Comments

comments

Comments are closed.

Read previous post:
Kinnigoli24091303
ಮೂಲ್ಕಿ ಬಂಟರ ಕೆಸರುಗದ್ದೆ ಕ್ರೀಡೋತ್ಸವ

Narendra Kerekadu ಮೂಲ್ಕಿ : ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿ ಕೃಷಿ ಮಾಯವಾಗುತ್ತಿದೆ ಕೆಸರಿನಲ್ಲಿ ಈ ಹಿಂದೆ ಹಿರಿಯರು ದುಡಿದು ಬೆಳೆ ಬೆಳಯುತ್ತಿದ್ದುದನ್ನು ನೆನಪಿಸಿಕೊಂಡು ಸಂಘಟನೆಯನ್ನು ಒಗ್ಗಟ್ಟಿನಲ್ಲಿರಿಸಬೇಕು ಇದಕ್ಕೆ...

Close