ಕಿನ್ನಿಗೋಳಿ : ಬಿ.ಜೆಪಿ. ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಪತ್ರಿಕಾ ಗೋಷ್ಠಿ

ಕಿನ್ನಿಗೋಳಿ : ಸುರತ್ಕಲ್‌ನಲ್ಲಿ ಅಂತರ್ ಜಿಲ್ಲಾ ಮಟ್ಟದ ಗೋ ಕಳ್ಳ ಸಾಗಾಟಗಾರರನ್ನು ಪೋಲಿಸ್ ಇಲಾಖೆ ಬಂಧಿಸಿರುವುದು ಶ್ಲಾಘನೀಯ. ಎಂದು ಬಿ.ಜೆಪಿ. ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಹೇಳಿದರು.
ಬುಧವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೇಸ್ ಸರಕಾರ ಆಡಳಿತಕ್ಕೆ ಬಂದ ಕೂಡಲೇ ಮಾಡಿದ ಮೊದಲ ಕೆಲಸ ಗೋಹತ್ಯೆ ನಿಷೇದ ಕಾನೂನು ಹಿಂತೆಗತ. ರೈತ ಪರ ಎಂದು ಹೇಳುತ್ತಿರುವ ಕಾಂಗ್ರೇಸ್ ಕೃಷಿ ಹಾನಿ ಹಾಗೂ ಅಡಿಕೆ ರೋಗಗಳ ಬಗ್ಗೆ ಹಾನಿ ಬಗ್ಗೆ ಸೂಕ್ತ ಪರಿಹಾರ ನೀಡುತ್ತಿಲ್ಲ ಯಾಕೆ? ಕಾಂಗ್ರೇಸ್ ಅಧಿಕಾರಕ್ಕೆ ಬಂದ ನಂತರ ಕಾನೂನು ಬಾಹಿರ ದಂದೆಗಳು ಗೋಹತ್ಯೆ, ಗೋವುಗಳ ಕಳವು, ಕಳ್ಳತನ ದರೋಡೆ, ಗೋಂಡಾಗಿರಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ತಲವಾರನ್ನು ತೋರಿಸಿ ಜೀವ ಬೆದರಿಕೆ ಇಟ್ಟು ಗೋವನ್ನು ಕಳವುಗೈದ ಪ್ರಕರಣಗಳಿವೆ. ಸಾಕಷ್ಟು ಗೋವು ಪ್ರಕರಣಗಳು ಪತ್ತೆಯಾಗದೆ ಉಳಿದಿದೆ ಒಂದು ರೀತಿಯಲ್ಲಿ ಗೋಹತ್ಯೆಗೆ ಹಾಗೂ ಇಂತಹ ದಂಧೆಗೆ ಪ್ರೋತ್ಸಾಹ ಹೆಚ್ಚಾಗಿ ಕಂಡು ಬರುತ್ತಿದೆ. ರಾಜಕೀಯ ತುಷ್ಟಿಕರಣ, ಪೂರ್ವಾಗ್ರಹ ಪೀಡಿತ ಭಾವನೆಗಳು ಇಂದಿನ ರಾಜಕಾರಣದಲ್ಲಿವೆ.
ಫೋಟೊ ಕಾಯಿದೆ (ಭಯೋತ್ಪಾದನೆ ನಿಷೇದ ಕಾಯ್ದೆ) ಹಾಗೂ ಗೋಹತ್ಯೆ ನಿಷೇದದಂತ ಉತ್ತಮ ಕಾನೂನುಗಳನ್ನು ಹಿಂತೆಗೆಯುತ್ತಿದೆ. ಕಾಯಿದೆಗಳನ್ನು ಹಿಂತೆಗೆಯುವಾಗ ನಿರ್ದಿಷ್ಟ ಕಾರಣಗಳು ಕೊಡದೆ ಸಮಾಜ ಹಾಗೂ ಇತರ ಪಕ್ಷಗಳನ್ನು ಸರಕಾರ ಕತ್ತಲಲ್ಲಿಟ್ಟಿದೆ. ಕಠಿಣ ಗೋಹತ್ಯೆ ನಿಷೇದ ಕಾನೂನು ತರಬೇಕು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ.
ಸೋಲಿನ ಪರಾಮರ್ಶೆ
ಅಭಿವೃದ್ಧಿ ಕಾರಣಕ್ಕಾಗಿ ಜನರು ನಮ್ಮನ್ನು ಸೋಲಿಸಿಲ್ಲ. ಬಿ.ಜೆ.ಪಿಯ ಅಂತರಿಕ ವೈಫಲ್ಯಗಳಿಂದಾಗಿ ಸೋತಿದ್ದೇವೆ. ನಾವು ಇದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿದ್ದೇವೆ. ಪಡಿತರ ಅಕ್ಕಿ ಬೆಲೆ ಮಾತ್ರ ಆದರೆ ಬೇರೆ ಪಡಿತರ ಸಾಮಾನುಗಳ ಕಡಿತ ಮತ್ತು ಬೆಲೆ ಏರಿಕೆಯನ್ನು ಯಾಕೆ ಹದ್ದುಬಸ್ತಿಗೆ ತರುತ್ತಿಲ್ಲ. ? .ಪೆಟ್ರೋಲ್ ಬೆಲೆ ೫೦ರಿಂದ ಪೆಟ್ರೋಲ್ ೮೦ರೂ ಗೆ ವಾಗಿ ತಲುಪುತ್ತಿದೆ ಈ ಬಗ್ಗೆ ಯಾಕೆ ಗಮನನೀಡುತ್ತಿಲ್ಲ ??
ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ನಿಯುಕ್ತಿಗೊಳಿಸಿದೆ. ಜನರಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವ ಈ ಕಾಲಘಟ್ಟದಲ್ಲಿ “ಹೊಸ ವಿಚಾರ ಹೊಸ ಹೆಜ್ಜೆ” ಧ್ಯೆಯದೊಂದಿಗೆ ಬಿ.ಜೆ.ಪಿ. ಚುನಾವಣೆಗೆ ಸನ್ನದ್ಧವಾಗುತ್ತಿದೆ. ಎಂದು ತಿಳಿಸಿದರು.
ಮೂಲ್ಕಿ ಮೂಡಬಿದ್ರೆ ಬಿ.ಜೆಪಿ. ಕ್ಷೇತ್ರಾಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾ ಉಪಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಸಮಿತಿ ಸದಸ್ಯ ಕೆ. ಭುವನಾಭಿರಾಮ ಉಡುಪ, ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಮೂಲ್ಕಿ ಮೂಡಬಿದ್ರಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ದೇವಪ್ರಸಾದ್ ಪುನರೂರು. ನಾಗರಾಜ್ ಪೂಜಾರಿ ಸುದ್ದಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

kinnigoli-25091305

Comments

comments

Comments are closed.

Read previous post:
NalinKumar-Kateel
ಕಿನ್ನಿಗೋಳಿ : ನಳಿನ್ ಕುಮಾರ್ ಸುದ್ದಿ ಗೋಷ್ಟಿ

ಕಿನ್ನಿಗೋಳಿ : ಕಾಂಗ್ರೇಸ್ ಆಡಳಿತದ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಗೂಂಡಾಗಿರಿ ಭೂ ಮಾಫಿಯಾ ಉದ್ಯಮಿಗಳಿಗೆ ಬೆದರಿಕೆ ಕರೆಗಳು ಹೆಚ್ಚಾಗಿದೆ. ರಕ್ಷಣಾ ವ್ಯವಸ್ಥೆಗಳು ವಿಫಲಗೊಳ್ಳುತ್ತಿವೆ. 2014ರ ಲೋಕಸಭೆ ಚುನಾವಣೆಯನ್ನು...

Close