ಕಿನ್ನಿಗೋಳಿ : ದೀನ ದಯಾಳ ಉಪಾಧ್ಯಾಯ ಜನ್ಮ ದಿನಾಚರಣೆ.

ಕಿನ್ನಿಗೋಳಿ : ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಆದರ್ಶವನ್ನು ತೋರಿಸಿ ಕೊಟ್ಟವರೇ ಪಂಡಿತ್ ದೀನ ದಯಾಳ ಉಪಾಧ್ಯಾಯರು ಎಂದು ಮಂಗಳೂರು  ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬುಧವಾರ ನಡೆದ ಪಂಡಿತ್ ದೀನ ದಯಾಳ ಉಪಾಧ್ಯಾಯ ದಿನಾಚರಣೆ ಹಾಗೂ ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಬಿ.ಜೆಪಿ. ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ದೇಶ ಭಕ್ತ ಸೈನಿಕರ ಬಗ್ಗೆ ಕನಿಕರವಿಲ್ಲದ ಯು.ಪಿ.ಎ ಆಡಳಿತ ದಿವ್ಯ ಮೌನದಿಂದಿದೆ. ಭ್ರಷ್ಟಾಚಾರ ಹಗರಣ, ರೂಪಾಯಿ ಅಪಮೌಲ್ಯ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ನಕ್ಸಲ್ ಸಮಸ್ಯೆಯಿಂದಾಗಿ ಆಂತರಿಕ ಭದ್ರತಾ ವೈಫಲ್ಯಗಳು ಹೆಚ್ಚಾಗುತ್ತಿವೆ. ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಹಾಗಾಗಿ ಪಕ್ಷದ ಯುವಜನರು ಹಾಗೂ ಹಿರಿಯರು ಜವಾಬ್ದಾರಿಯುತವಾಗಿ ಪಕ್ಷ ಸಂಘಟನೆಯನ್ನು ಮಾಡುವಲ್ಲಿ ಶ್ರಮಿಸಿ ಉತ್ತಮ ಆಡಳಿತದ ಬಿಜೆಪಿ ಸರಕಾರವನ್ನು ಆಯ್ಕೆ ಮಾಡಲು ಶ್ರಮಿಸಬೇಕು. ಯುವ ಶಕ್ತಿಯೇ ಪಕ್ಷಕ್ಕೆ ಆಧಾರ ಎಂದು ದಕ್ಷಿಣ ಕನ್ನಡ .ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಗ್ ನಾಯಕ್ ಹೇಳಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ದ.ಕ. ಬಿ.ಜೆಪಿ. ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಬಾಬು ಬಂಗೇರ, ಶಾರದ ರೈ, ಶಾಂತಾ, ಅಶೋಕ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ, ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ್ ಅಧಿಕಾರಿ, ಮೂಲ್ಕಿ ಮೂಡಬಿದ್ರೆ ಬಿ.ಜೆಪಿ. ಕ್ಷೇತ್ರಾಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾ ಉಪಧ್ಯಕ್ಷೆ ಕಸ್ತೂರಿ ಪಂಜ, ಉಪಸ್ಥಿತರಿದ್ದರು.

kinnigoli-25091306

Comments

comments

Comments are closed.