ಕಿನ್ನಿಗೋಳಿ : ನಳಿನ್ ಕುಮಾರ್ ಸುದ್ದಿ ಗೋಷ್ಟಿ

NalinKumar-Kateel

ಕಿನ್ನಿಗೋಳಿ : ಕಾಂಗ್ರೇಸ್ ಆಡಳಿತದ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಗೂಂಡಾಗಿರಿ ಭೂ ಮಾಫಿಯಾ ಉದ್ಯಮಿಗಳಿಗೆ ಬೆದರಿಕೆ ಕರೆಗಳು ಹೆಚ್ಚಾಗಿದೆ. ರಕ್ಷಣಾ ವ್ಯವಸ್ಥೆಗಳು ವಿಫಲಗೊಳ್ಳುತ್ತಿವೆ. 2014ರ ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಗೋ ಕಳ್ಳಸಾಗಣೆದಾರರನ್ನು ರಕ್ಷಣೆ ಮಾಡುವ ಪ್ರವೃತ್ತಿ ಜಾಸ್ತಿಯಾಗಿದೆ. ಗೋ ಕಳ್ಳಸಾಗಣೆ ಬಗ್ಗೆ ಸುಳಿವು ನೀಡಿದವರನ್ನು ಸಂಶಯಾಸ್ಪವಾಗಿ ನೊಡುವುದು ಬಂಧಿಸುವುದು ಅಲ್ಲದೆ ಸಾಮಾಜಿಕ ಕಾರ್ಯಕರ್ತರ ಮೇಲೆ ಖೇಸು ದಾಖಲಿಸುವುದು ಸಾಮಾನ್ಯವಾಗಿದೆ.
ಕಳೆದ ಮೂರು ತಿಂಗಳಿಂದ 14 ಗೋವು ಕಳವು ಪ್ರಕರಣಗಳು 13ದೇವಳಗಳಲ್ಲಿ ಕಳ್ಳತನ, 12ಮನೆಗಳ ಲೂಟಿ 3 ಅತ್ಯಾಚಾರ ಫಾಟನೆಗಳು ನಡೆದಿದ್ದರೂ ಸೂಕ್ತ ಕ್ರಮ ಕೈಗೊಳ್ಳುವುದರಲ್ಲಿ ನಿಧಾನಗತಿ ಕಾರ್ಯಾಚರಿಸಿದ ಸರ್ಕಾರ ವಿಫಲಗೊಳ್ಳುತ್ತಿದೆ. ಅಭಿವೃದ್ದಿಹೀನ, ದೋಷಪೂರಿತ ಸ್ವಜನಹಿತಾಸಕ್ತಿಯ ರಾಜಕಾರಣ ನಡೆಸುತ್ತಿರುವ ಸರ್ಕಾರ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ.
ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ನಷ್ಟದ ಕುರಿತು ಅಧ್ಯಯನ ನಡೆಸಲು ಜಿಲ್ಲೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡದ ಬಗ್ಗೆ ಜನಪ್ರತಿನಿಧಿ, ಶಾಸಕರು ಹಾಗೂ ಸಂಸದರಿಗೆ ಯಾರೊಬ್ಬರಿಗೂ ಮಾಹಿತಿ ನೀಡದೆ ಐಷಾರಾಮಿ ಪ್ರವಾಸಕ್ಕೆ ಬಂದತೆ ಸರ್ಕಾರಿ ಬಂಗಲೆಯಲ್ಲಿಯೇ ತಂಗಿ ವರದಿ ತಯಾರಿ ಮಾಡುತ್ತಿರುವುದು ವಿಪರ್ಯಾಸ. ಜಿಲ್ಲೆಯಲ್ಲಿ ಅತಿವೃಷ್ಠಿ  ಹಾಗೂ ಪ್ರಕೃತಿ ವಿಕೋಪದಿಂದ ಕೃಷಿ ಮತ್ತು ಅಡಿಕೆಯ ಕೊಳೆರೋಗದಿಂದ ಬಹಳಷ್ಟು ಹಾನಿಯಾಗಿದೆ. ಅಲ್ಲದೆ ರಸ್ತೆಗಳು ಹಾನಿಗೀಡಾಗಿವೆ. ನಗರದಲ್ಲಿ ಕುಳಿತು ಇಂತಹ ಅಧ್ಯಯನದಿಂದ ಏನೂ ಪ್ರಯೋಜನವಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ಕುರಿತು ಕೇಂದ್ರ ಸಚಿವರ ಗಮನಕ್ಕೆ ತರುತ್ತೇನೆ ಎಂದು ಮಂಗಳೂರು ಸಂಸದ ಕಿನ್ನಿಗೋಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Comments

comments

Comments are closed.

Read previous post:
kinnigoli-25091304
ಕಟೀಲು ಕಾಲೇಜು ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ – ಈಶ್ವರ್ ಕಟೀಲ್

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ 2013-14 ನೇ ಸಾಲಿನ ಅಧ್ಯಕ್ಷರಾಗಿ ಈಶ್ವರ್ ಕಟೀಲ್ ಆಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷೆ ಮಾಲತಿ ಶೆಟ್ಟಿ, ಕಾರ್ಯದರ್ಶಿ...

Close