ನಾಪತ್ತೆಯಾಗಿದ್ದ ಮಹಿಳೆ ಧರ್ಮಸ್ಥಳದಲ್ಲಿ ಪತ್ತೆ

Puneethakrishna Sk
ಮೂಲ್ಕಿ : ಇಲ್ಲಿನ ಮೂಲ್ಕಿ ಠಾಣಾ ವ್ಯಾಪ್ತಿಯ ಪದ್ಮನೂರು ಎಂಬಲ್ಲಿನ ಮಹಿಳೆಯೋರ್ವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು ಆಕೆ ಧರ್ಮಸ್ಥಳದಲ್ಲಿ ಪತ್ತೆ ಆಗಿದ್ದು ಮೂಲ್ಕಿ ಪೊಲೀಸರ ಸಹಾಯದಿಂದ ಮರಳಿ ಮನೆಗೆ ತಲುಪಿದ್ದಾರೆ.
ನಾಪತ್ತೆಯಾದ ಮಹಿಳೆಯನ್ನು ಕಿನ್ನಿಗೋಳಿ ಸಮೀಪದ ಪದ್ಮನೂರು ನಿವಾಸಿ ರಾಧಾ (55) ಎಂದು ಗುರುತಿಸಲಾಗಿದ್ದು ಈಕೆ ಮನೆಯಲ್ಲಿನ ಮಕ್ಕಳ ವರ್ತನೆಯಿಂದ ಬೇಸತ್ತು ಯಾರಿಗೂ ತಿಳಿಸದೇ ಮನೆ ಬಿಟ್ಟು ಹೋಗಿದ್ದೇ ಎಂದು ಪತ್ತೆಯಾದ ನಂತರ ಮೂಲ್ಕಿ ಪೊಲೀಸರಲ್ಲಿ ಮಹಿಳೆ ತಿಳಿಸಿದ್ದಾರೆ.
ಈಕೆಯನ್ನು ಪತ್ತೆ ಹಚ್ಚಿದ ಸಬ್ ಇನ್ಸ್‌ಪೆಕ್ಟರ್ ಸೋಮಯ್ಯರವರು ಮನೆಯವರಿಗೆ ಬುದ್ದಿವಾದ ಹೇಳಿ ಹಾಗೂ ಮನೆ ಬಿಟ್ಟಿದ್ದ ಮಹಿಳೆಗೂ ಸಾಂತ್ವಾನ ನೀಡಿ ಮರಳಿ ಮನೆಗೆ ಸೇರಿಸಿ ಕುಟುಂಬದ ವ್ಯಾಜ್ಯವನ್ನು ಸೌಹಾರ್ದಯುತವಾಗಿ ಪರಿಹರಿಸಿದ ಘಟನೆ ನಡೆದಿದೆ.

 

Comments

comments

Comments are closed.

Read previous post:
images
ಮೂಲ್ಕಿ: ಇನ್ಸ್ಪೆಕ್ಟರ್ ಸಹಿತ ಪೊಲೀಸರ ವರ್ಗಾವರ್ಗಿ

Puneethakrishna Sk ಮೂಲ್ಕಿ; ಇಲ್ಲಿನ ಮೂಲ್ಕಿ ಠಾಣಾ ಇನ್ಸ್‌ಪಕ್ಟರ್ ಸಹಿತ ಇತರ ಆರು ಮಂದಿ ಪೊಲೀಸರಿಗೆ ವರ್ಗಾವಣೆ ಆಗಿದ್ದು ಇತರ ಠಾಣೆಯಿಂದ ಮೂಲ್ಕಿ ಠಾಣೆಗೆ ಪೊಲೀಸರು ನಿಯುಕ್ತಿಗೊಳ್ಳುವ ಆದೇಶ...

Close