ಮೂಲ್ಕಿ: ಇನ್ಸ್ಪೆಕ್ಟರ್ ಸಹಿತ ಪೊಲೀಸರ ವರ್ಗಾವರ್ಗಿ

Puneethakrishna Sk

images

ಮೂಲ್ಕಿ; ಇಲ್ಲಿನ ಮೂಲ್ಕಿ ಠಾಣಾ ಇನ್ಸ್‌ಪಕ್ಟರ್ ಸಹಿತ ಇತರ ಆರು ಮಂದಿ ಪೊಲೀಸರಿಗೆ ವರ್ಗಾವಣೆ ಆಗಿದ್ದು ಇತರ ಠಾಣೆಯಿಂದ ಮೂಲ್ಕಿ ಠಾಣೆಗೆ ಪೊಲೀಸರು ನಿಯುಕ್ತಿಗೊಳ್ಳುವ ಆದೇಶ ಬಂದಿದೆ.

ಮೂಲ್ಕಿ ವೃತ್ತ ನಿರೀಕ್ಷಕರಾದ ಬಶೀರ್ ಅಹ್ಮದ್‌ರವರು ಜಿಲ್ಲಾ ಗುಪ್ತಚರ ವಿಭಾಗ(ಡಿಸಿಐಬಿ)ಕ್ಕೆ ವರ್ಗಾವಣೆಗೊಂಡ ಆದೇಶ ಬಂದಿದೆ. ಅವರ ಸ್ಥಾನಕ್ಕೆ ರಾಮಚಂದ್ರ ನಾಯಕ್‌ರವರು ನಿಯುಕ್ತಿಗೊಂಡಿದ್ದಾರೆ.

ಉಳಿದಂತೆ ಎಎಸ್‌ಐ ಆಗಿ ಭಡ್ತಿಗೊಂಡ ಮಾಧವರವರು ಉಳ್ಳಾಲ ಠಾಣೆಗೆ, ಹೆಡ್‌ಕಾನ್ಸ್‌ಟೇಬಲ್ ಸೀತಾರಾಮ ಹಾಗೂ ಪ್ರಕಾಶ್‌ರವರು ಕ್ರಮವಾಗಿ ಬಂದರು ಹಾಗೂ ಬರ್ಕೆ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಸಂಜೀವ, ರವಿ, ಅಶ್ವಿನ್ ಕ್ರಮವಾಗಿ ಕದ್ರಿ ಸಂಚಾರ, ಉರ್ವ ಠಾಣೆ, ಪೂರ್ವ ಸಂಚಾರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಮೂಲ್ಕಿ ಠಾಣೆಗೆ ಬರ್ಕೆ ಠಾಣೆಯಿಂದ ಅರುಣ್ ಕುಮಾರ, ಅಮೃತ್ ಉಚ್ಚಿಲ್ (ಎಚ್‌ಸಿ) ಮತ್ತು ಕೋಣಾಜೆ ಠಾಣೆಯಿಂದ ರಾಜೇಶ, ಬರ್ಕೆ ಠಾಣೆಯಿಂದ ಉದಯ, ಕದ್ರಿ ಟ್ರಾಫಿಕ್‌ನಿಂದ ಸುಧಾಕರ ವರ್ಗಾವಣೆಗೊಂಡಿದ್ದಾರೆ.

Comments

comments

Comments are closed.

Read previous post:
kinnigoli-25091307
ಕಿನ್ನಿಗೋಳಿ : ವನಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಬಳಿಯ ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ ವಠಾರದಲ್ಲಿ ಬುಧವಾರದಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಗ್ ನಾಯಕ್ ಗಿಡ ನೆಟ್ಟು ದೀನ ದಯಾಳ...

Close