ಗುತ್ತಕಾಡು : ವೈದ್ಯಕೀಯ ತಪಾಸಣಾ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮತ್ತು ಗುತ್ತಕಾಡು ರೋಟರಿ ಗ್ರಾಮೀಣ ದಳ ಹಾಗೂ ದ. ಕ . ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಬಾಗಿತ್ವದಲ್ಲಿ ಭಾನುವಾರ ಗುತ್ತಕಾಡು ಸಮುದಾಯ ಭವನದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಹೆಗ್ಡೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಕ್ಕ ಶ್ರೀನಿವಾಸ ಆಸ್ಪತ್ರೆ ಆಡಳಿತ ನಿರ್ದೇಶಕ ಎಂ. ಆರ್ ವಾಸುದೇವ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಟಿ. ಎಚ್. ಮಯ್ಯದ್ದಿ , ಮಸೀದಿ ಅಧ್ಯಕ್ಷ ಟಿ. ಹಸನಬ್ಬ , ಗುತ್ತಕಾಡು ಸರಕಾರಿ ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ, ಗುತ್ತಕಾಡು ರೋಟರಿ ಗ್ರಾಮೀಣ ದಳದ ಅಧ್ಯಕ್ಷ ಜಗದೀಶ ಆಚಾರ್ಯ, ಟಿ. ಕೆ. ಅಬ್ದುಲ್ ಕಾದರ್ ಉಪಸ್ಥಿತರಿದ್ದರು.

Kinnigoli30091303

Comments

comments

Comments are closed.

Read previous post:
ಮೆನ್ನಬೆಟ್ಟು : ಅಂಗನವಾಡಿ ಕಟ್ಟಡ ನಿರ್ಮಿಸಲು ಮೀನ ಮೇಷ

ಕಿನ್ನಿಗೋಳಿ: ಸಿಟಿ ಸ್ಕಾನ್ ಪಾಸಿಟಿವ್ ಸ್ಟೋರಿ ಸುಮಾರು ಐದು ವರ್ಷಗಳ ಹಿಂದೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಪಕ್ಷ ಬೇಧ ಮರೆತು ಮೆನ್ನಬೆಟ್ಟು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ...

Close