ಮೆನ್ನಬೆಟ್ಟು : ಅಂಗನವಾಡಿ ಕಟ್ಟಡ ನಿರ್ಮಿಸಲು ಮೀನ ಮೇಷ

ಕಿನ್ನಿಗೋಳಿ: ಸಿಟಿ ಸ್ಕಾನ್ ಪಾಸಿಟಿವ್ ಸ್ಟೋರಿ
ಸುಮಾರು ಐದು ವರ್ಷಗಳ ಹಿಂದೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಪಕ್ಷ ಬೇಧ ಮರೆತು ಮೆನ್ನಬೆಟ್ಟು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಅವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಸಾರ್ವಜನಿಕ ಹಾಗೂ ಪಂಚಾಯಿತಿ ಅಂಗನವಾಡಿ ಬಗ್ಗೆ ಪ್ರಬಲ ಬೇಡಿಕೆ ಇಟ್ಟಿದ್ದರೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯು ಇದರ ಬಗ್ಗೆ ಮುತುವರ್ಜಿ ವಹಿಸಲಿಲ್ಲ. ಪೊರಂಬೋಕು ಜಾಗವಿದ್ದರೂ ಅಂಗನವಾಡಿ ಕಟ್ಟಡ ನಿರ್ಮಿಸಲು ಮೀನ ಮೇಷ ಎಣಿಸುತ್ತಿರುವ ಇಲಾಖಾಧಿಕಾರಿಗಳು ದಿವ್ಯ ಮೌನವಹಿಸಿ ವಿವಿಧ ಸಬೂಬುಗಳನ್ನು ನೀಡುತ್ತಿದ್ದಾರೆ ಎಂದು ಸಾರ್ವಜನಿಕರ ಅಭಿಪ್ರಾಯ.
ಹತ್ತಿರದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜರತ್ನಪುರದ ಅಂಗನವಾಡಿ ಕೇಂದ್ರಕ್ಕೆ ಕೆಲವು ವರ್ಷಗಳಿಂದ ಊರವರು ಸೇರಿ ಸಾಮಾಗ್ರಿಗಳು ಇತರ ಪ್ರಾಥಮಿಕ ಸೌಲಭ್ಯಗಳನ್ನು ಉಚಿತವಾಗಿ ಮಾಡಿಕೊಟ್ಟಿದ್ದರು. ಹಾಗಿದ್ದರೂ ಇಲಾಖೆ ಇತ್ತಕಡೆ ಗಮನ ಕೊಡಲಿಲ್ಲ. ಕಳೆದ ಐದು ವರ್ಷದಲ್ಲಿ ಇಲಾಖಾ ಬಗ್ಗೆ ರೋಸಿ ಹೋದ ಸಾರ್ವಜನಿಕರು ಶಾಂತಿಯುತ ಪ್ರತಿಭಟನಾರ್ಥವಾಗಿ ಕಟ್ಟಡ ನಿರ್ಮಾಣದಲ್ಲಿ ಖುದ್ದು ಶ್ರಮದಾನ ಕಾರ್ಯದಲ್ಲಿ ಭಾಗಿಯಾಗಿ ಹಾಗೂ ಸ್ವಂತ ನೆಲೆಯಲ್ಲಿ ಸಹಾಯ ಹಸ್ತ ನೀಡುವ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಆರಂಭಿಸಿ ಸಮಾಜಕ್ಕೆ ಮಾದರಿಯಾಗಲು ಬಯಸಿದ್ದಾರೆ. ಜನರ ಸಹಕಾರ ಉತ್ತಮ ಸೌಲಭ್ಯಗಳಿದ್ದರೂ ಕಟ್ಟಡ ನಿರ್ಮಾಣವಾಗಲು ಜಿಲ್ಲಾಡಳಿತ ಕಾರ್ಯ ಪ್ರವೃತ್ತರಾಗದಿರುವುದು ಸೋಜಿಗವೇ ಸರಿ. ಇನ್ನಾದರೂ ಜಿಲ್ಲಾಡಳಿತ ಹಾಗೂ ಇಲಾಖೆ ಗಮನ ವಹಿಸಿ ಸೂಕ್ತ ಪರಿಹಾರ ನೀಡಬೇಕಾಗಿದೆ. ಸರಕಾರ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಛೀಮಾರಿ ಹಾಕಿಸುವ ಮೊದಲು ಕರ್ತವ್ಯ ಪ್ರಜ್ಞೆ ಮೆರೆಸಬೇಕಾಗಿದೆ.

ಉದ್ದೇಶಿತ ಕಟ್ಟಡ ನಿರ್ಮಾಣ ಸ್ಥಳ, ನೂನ್ಯತೆಗಳಿಲ್ಲದ ಸರಕಾರಿ ಜಾಗ ಇದಾಗಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಇಲಾಖಾ ಮಟ್ಟದಲ್ಲಿ ರಾಜರತ್ನಪುರದ ಸಾರ್ವಜನಿಕರಿಗೆ ತ್ವರಿತವಾಗಿ ಉತ್ತಮ ಅಂಗನವಾಡಿ ಕೇಂದ್ರ ನಿರ್ಮಿಸಲು ಸರ್ವ ಸಹಕಾರ ನೀಡಬೇಕು.
ಈಶ್ವರ್ ಕಟೀಲ್
ಜಿಲ್ಲಾ ಪಂಚಾಯಿತಿ ಸದಸ್ಯ

ಮೆನ್ನಬೆಟ್ಟು ಪರಿಸರದ ರಾಜರತ್ನಪುರದಲ್ಲಿ ಸಾಕಷ್ಟು ಐದು ಸೆಂಟ್ಸ್ ಮನೆಗಳಿದ್ದು, ಉತ್ತಮ ಅಂಗನವಾಡಿ ಕೇಂದ್ರ ನಿರ್ಮಾಣಗೊಳ್ಳುವುದರಿಂದ ಹಾಗೂ ಊರ ದಾನಿಗಳಿಂದ ಬಡವರರಿಗೆ ತುಂಬಾ ಪ್ರಯೋಜನ ಸಿಗಲಿದೆ. ಜಿಲ್ಲಾಡಳಿತ ಹಾಗೂ ಇಲಾಖಾ ಪ್ರತಿಸ್ಪಂದನೆ ಬಹು ಮುಖ್ಯ.
ಜನಾರ್ಧನ ಕಿಲೆಂಜೂರು
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ

ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಡಳಿತ ಮಟ್ಟದಲ್ಲಿ ಸಹಾಯ ಹಸ್ತ ಕಡಿಮೆಯಾಗಿದೆ. ಸಮಾಜದ ಬಗ್ಗೆ ಹೆಚ್ಚಿನ ಮುತುವರ್ಜಿ ತೋರಿಸಿದ ಮೆನ್ನಬೆಟ್ಟು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಸಾರ್ವಜನಿಕರ ಕ್ರಮ ತುಂಬಾ ಶ್ಲಾಘನೀಯವಾಗಿದೆ. ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದಾಗ ಜಿಲ್ಲಾಡಳಿತ ತ್ವರಿತ ಗಮನ ಕೊಡುವುದು ಒಳಿತು.
ಶ್ರೀಧರ ಶೆಟ್ಟಿ ಮುಕ್ಕ
ಕಿನ್ನಿಗೋಳಿ ರೈತ ಸಂಘ ಅಧ್ಯಕ್ಷ

Comments

comments

Comments are closed.

Read previous post:
Kinnigoli30091302
ರಾಜರತ್ನಪುರ: ಅಂಗನವಾಡಿ ಸಾರ್ವಜನಿಕ ಶ್ರಮದಾನ

ಕಿನ್ನಿಗೋಳಿ: ಸಾರ್ವಜನಿಕರ ಉಪಯೋಗಕ್ಕಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ನೇತ್ರತ್ವದಲ್ಲಿ ವೀರಮಾರುತಿ ವ್ಯಾಯಾಮ ಶಾಲೆ, ಸಾರ್ವಜನಿಕ ಬಾಲಗಣೇಶೋತ್ಸವ ಸಮಿತಿ ರಾಜರತ್ನಪುರ, ಕೊಡೆತ್ತೂರು ಬ್ರಾಮರಿ ಮಹಿಳಾ ಸಮಾಜ, ಆದರ್ಶಬಳಗ...

Close