ಪ್ರಪ್ರಥಮ ಕಿಸಾನ್ ಶಕ್ತಿ ಪಂಪ್ ಕಂಟ್ರೋಲರ್ ಉದ್ಘಾಟನೆ.

ಕಿನ್ನಿಗೋಳಿ: 2012-13ನೇ ಸಾಲಿನ ಉತ್ತಮ ನೀರಿನ ನಿರ್ವಹಣಾ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿ ನಿಧಿಯಿಂದ ಹೊಸ ಪ್ರಯೋಗತ್ವ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಿನ್ನಿಗೋಳಿಯ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರು ಸರಭರಾಜು ಯೋಜನೆಯಲ್ಲಿ ಗ್ರಾಮದ ಪಂಪ್ ಸ್ಥಾವರಗಳಿಗೆ ಕಿಸಾನ್ ಶಕ್ತಿ ಕಂಟ್ರೋಲರ್ ಮೊಬೈಲ್ ತಂತ್ರಜ್ಞಾನ ಅಳವಡಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿಯೇ ಕಿನ್ನಿಗೋಳಿಯ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಈ ಯೋಜನೆ ಸ್ಥಾಪಿಸಿದ ಪ್ರಪ್ರಥಮ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಿಸಾನ್ ಶಕ್ತಿ ಯೋಜನೆಯನ್ನು ಸೋಮವಾರ ಕಟೀಲು ಅಜಾರು ಪಂಪ್ ಸ್ಥಾವರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಉದ್ಘಾಟಿಸಿದರು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ನಾಲ್ಕು ಪಂಪುಗಳಿಗೆ ಈ ಯೋಜನೆ ಅಳವಡಿಸಲಾಗಿದ್ದು ಹತ್ತು ಮೊಬೈಲ್‌ಗಳಿಂದ ಕಾರ್ಯ ನಿರ್ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಪಂಚಾಯಿತಿಯ ಎಲ್ಲಾ ಪಂಪ್ ಸ್ಥಾವರಗಳಿಗೆ ವಿಸ್ತರಿಸಲಾಗುವುದು ಎಂದು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ತಿಳಿಸಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಪಿಡಿಒ ಗಣೇಶ ಬಡಿಗೇರ, ಮೆನ್ನಬೆಟ್ಟು ನೀರು ಸಮಿತಿ ಅಧ್ಯಕ್ಷ ಭಾಸ್ಕರ ಪೂಜಾರಿ, ಪಂಚಾಯಿತಿ ಸದಸ್ಯರಾದ ಕೇಶವ, ಹರಿಶ್ಚಂದ್ರ ರಾವ್, ರಾಮಗೋಪಾಲ್, ಶಕ್ತಿಪ್ರಸಾದ್, ಕೃಷ್ಣಪ್ಪ, ಜಯಶಂಕರ ರೈ, ವೆಂಕಟೇಶ್ ಉಪಾಧ್ಯಾಯ, ಸಿಬ್ಬಂದಿ ಚಂದ್ರಹಾಸ್ ಉಪಸ್ಥಿತರಿದ್ದರು.

Kinnigoli01101303

Comments

comments

Comments are closed.

Read previous post:
Kinnigoli01101302
ಪಕ್ಷಿಕೆರೆ : ಉಚಿತ ದಂತ ತಪಸಣಾ ಶಿಬಿರ

ಕಿನ್ನಿಗೋಳಿ : ರೋಟರಾಕ್ಟ್ ಕ್ಲಬ್, ಇನ್ನರ್ ವೀಲ್ ಕ್ಲಬ್ ಹಾಗೂ ಪಕ್ಷಿಕೆರೆ ಸಂತ ಜೂಡರ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೋರಿಯಲ್ ದಂತ ವೈದ್ಯ ಕಾಲೇಜಿನ...

Close