ಬಾಬಕೋಡಿ-ಜೋಡುಬೈಲು ರಸ್ತೆ ಶ್ರಮದಾನ

ಕಿನ್ನಿಗೋಳಿ : ಕಿನ್ನಿಗೋಳಿ ಗೋಳಿಜೋರ ಸಮೀಪದ ಸುಮಾರು ೨ ಕಿಲೋಮೀಟರ್ ಉದ್ದದ (ಎರಡು) ಬಾಬಕೋಡಿ-ಜೋಡುಬೈಲು ರಸ್ತೆಯನ್ನು ಸ್ಥಳೀಯ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಮಾಡಿದರು.
ಈ ಪರಿಸರದಲ್ಲಿ ಸುಮಾರು 100 (ನೂರು) ಮನೆಗಳಿದ್ದು ದೈನಂದಿನ ವ್ಯವಹಾರಕ್ಕಾಗಿ ಈ ರಸ್ತೆಯನ್ನೇ ಆಶ್ರಯಿಸಬೇಕಾಗಿದೆ. ಸುಮಾರು 70 (ಎಪ್ಪತ್ತು) ವರ್ಷಗಳ ಹಿಂದಿನ ಈ ಖಾಸಗಿ ರಸ್ತೆಯನ್ನು ಹಲವು ವರ್ಷಗಳ ಹಿಂದೆ ಗ್ರಾಮಸ್ಥರ ಸಹಕಾರದಿಂದ ಕಿನ್ನಿಗೋಳಿ ಪಂಚಾಯಿತಿ ಸುಪರ್ದಿಗೆ ಒಪ್ಪಿಸಲಾಗಿತ್ತು. ಪ್ರತೀವರ್ಷ ಮಳೆಗಾಲದಲ್ಲಿ ರಸ್ತೆ ಹದೆಗೆಟ್ಟುತ್ತಿದೆ. 2 (ಎರಡು) ವರ್ಷಗಳ ಹಿಂದೆ ಪಂಚಾಯಿತಿಯ ಮೂಲಕ ಜೆಸಿಪಿಯಲ್ಲಿ ರಸ್ತೆ ದುರಸ್ಥಿ ಮಾಡಿದ್ದಾರೆ. ಈ ರಸ್ಥೆ ಹತ್ತಿರದ ಪದ್ಮನೂರು ಹಾಗೂ ಪುನರೂರು ದೇವಳದ ಸಂಪರ್ಕ ರಸ್ತೆಯಾಗಿದೆ. ಕಿನ್ನಿಗೋಳಿ ಪಂಚಾಯಿತಿ ಅನುದಾನ ಕಡಿಮೆಯಿದ್ದು ಹೆಚ್ಚಿನ ಅನುದಾನಕ್ಕಾಗಿ ಜಿಲ್ಲಾಡಳಿತ ಹಾಗೂ ಸರಕಾರವನ್ನು ಅವಲಂಬಿಸುವ ಪರಿಸ್ಥಿತಿ ಬಂದೊದಗಿದೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.

ಹತ್ತಿರದ ಕಿನ್ನಿಗೋಳಿ-ಗೋಳಿಜೋರ, ಕಿನ್ನಿಗೋಳಿ-ಗುತ್ತಕಾಡು ರಸ್ತೆ ಕಾಂಕ್ರೀಕರಣಗೊಂಡಿದ್ದು. ಈಗಲಾದರೂ ಗ್ರಾಮಸ್ಥರಿಗೆ ಪಂಚಾಯಿತಿ ಸ್ಪಂದನೆ ನೀಡಬೇಕಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಶೀಘ್ರ ಸ್ಪಂದಿಸಿ ಪೂರ್ಣ ಪ್ರಮಾಣದ ಡಾಮರ್ ರಸ್ತೆ, ಕಾಂಕ್ರೀಕರಣ ಅಥವಾ ಇಂಟರ್ ಲಾಕ್ ರಸ್ತೆಯನ್ನಾಗಿ ಪರಿವರ್ತಿಸುವಲ್ಲಿ ಸಹಕರಿಸುವ ನಿರೀಕ್ಷೆ ಇದೆ. ಎಂದು ಸ್ಥಳೀಯ ನವೀನ್ ಡಿ’ಸೋಜ ಕುಂರ್ಬಿಲ್ ಅವರ ಅನಿಸಿಕೆ.
ರಸ್ತೆಯ ಅವಸ್ಥೆ ಬಗ್ಗೆ ಮನವಿ ಸಲ್ಲಿಸಿದ್ದೇವೆ ಇನ್ನೂ ಕೂಡಾ ಅಭಿವೃದ್ಧಿ ಪಡಿಸದಿದ್ದರೆ ಮುಂದಿನ ಲೋಕಸಭೆ ಬಹಿಷ್ಕಾರ ಹಾಕುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಹೇಳಿದರು.
ಸ್ಥಳೀಯ ಗ್ರಾಮಸ್ಥರಾದ ಸಂತೋಷ್ ಶೆಟ್ಟಿ, ರಮೇಶ್ ರಾವ್, ಅಶೋಕ್ ಶೆಟ್ಟಿ, ಶಿವರುದ್ರಪ್ಪ ಇಬ್ರಾಹಿಂ, ಶಂಕರ ರಾವ್, ಶ್ರೀಧರ ಪೂಜಾರಿ, ಗೋಪಾಲ ಮೂಲ್ಯ ಆಗ್ನೇಸ್ ಸಿಕ್ವೇರಾ, ಗೀತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli01101301

Comments

comments

Comments are closed.

Read previous post:
Kinnigoli30091303
ಗುತ್ತಕಾಡು : ವೈದ್ಯಕೀಯ ತಪಾಸಣಾ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮತ್ತು ಗುತ್ತಕಾಡು ರೋಟರಿ ಗ್ರಾಮೀಣ ದಳ ಹಾಗೂ ದ. ಕ . ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಬಾಗಿತ್ವದಲ್ಲಿ ಭಾನುವಾರ ಗುತ್ತಕಾಡು ಸಮುದಾಯ...

Close