ಪಕ್ಷಿಕೆರೆ : ಉಚಿತ ದಂತ ತಪಸಣಾ ಶಿಬಿರ

ಕಿನ್ನಿಗೋಳಿ : ರೋಟರಾಕ್ಟ್ ಕ್ಲಬ್, ಇನ್ನರ್ ವೀಲ್ ಕ್ಲಬ್ ಹಾಗೂ ಪಕ್ಷಿಕೆರೆ ಸಂತ ಜೂಡರ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೋರಿಯಲ್ ದಂತ ವೈದ್ಯ ಕಾಲೇಜಿನ ತಜ್ಞ ವೈದ್ಯರಿಂದ ಸೋಮವಾರ ಸಂತ ಜೂಡರ ಹಿರಿಯ ಪ್ರಾಥಮಿಕ ಶಾಲೆ ಪಕ್ಷಿಕೆರೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ದಂತ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಸಂತ ಜೂಡರ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಫಾ| ಜೇಸುದಾಸ್ ಡಿಕೋಸ್ಟಾ ಉದ್ಘಾಟಿಸಿದರು. ಎ.ಬಿ. ಶೆಟ್ಟಿ ಕಾಲೇಜು ದಂತ ವೈದ್ಯ ಡಾ| ಆಡ್ರಿ ಡಿಕ್ರೂಸ್, ರೋಟರಾಕ್ಟ್ ಕ್ಲಬ್ ಅಧ್ಯಕ್ಷ ಪ್ರಣಿಲ್ ಹೆಗ್ಡೆ, ಮಾಜಿ ಕಾರ್ಯದರ್ಶಿ ಅಶೋಕ್, ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹಾ, ಸವಿತಾ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಜೋಸ್‌ಫಿನ್ ಉಪಸ್ಥಿತರಿದ್ದರು.

Kinnigoli01101302

Comments

comments

Comments are closed.

Read previous post:
Kinnigoli01101301
ಬಾಬಕೋಡಿ-ಜೋಡುಬೈಲು ರಸ್ತೆ ಶ್ರಮದಾನ

ಕಿನ್ನಿಗೋಳಿ : ಕಿನ್ನಿಗೋಳಿ ಗೋಳಿಜೋರ ಸಮೀಪದ ಸುಮಾರು ೨ ಕಿಲೋಮೀಟರ್ ಉದ್ದದ (ಎರಡು) ಬಾಬಕೋಡಿ-ಜೋಡುಬೈಲು ರಸ್ತೆಯನ್ನು ಸ್ಥಳೀಯ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಮಾಡಿದರು. ಈ ಪರಿಸರದಲ್ಲಿ...

Close